ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೌರ್ಜನ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿ ತನ್ನಿ

Srinivasa Murthy VN
Updated On : 26 Nov 2013, 1:03 am

ಕ.ಪ್ರ.ವಾರ್ತೆ ಹಾಸನ ನ.25
ಪರಿಶಿಷ್ಟ ಜಾತಿ ಮತ್ತು ಪಂಗಡ(ದೌರ್ಜನ್ಯ ತಡೆ) ಕಾಯ್ದೆ- 1989ಕ್ಕೆ ಸೂಕ್ತ ತಿದ್ದುಪಡಿಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಎಂ)ನ ಕಾರ್ಯಕರ್ತರು ಸೋಮವಾರ ಸಹಿ ಸಂಗ್ರಹ ಚಳವಳಿ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಹಿ ಸಂಗ್ರಹ ಚಳವಳಿ ನಡೆಸಿದರು. ಡಿ.4ರವರೆಗೆ ಜಿಲ್ಲೆಯಲ್ಲಿ ಸಹಿ ಸಂಗ್ರಹ ಚಳವಳಿ ನಡೆಯಲಿದ್ದು, ಡಿ.5ರಂದು ರಾಜ್ಯಪಾಲರ ಮುಖಾಂತರ ಸಂಗ್ರಹಿತ ಸಹಿಗಳನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದವರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟುವ ಮತ್ತು ಅವರಿಗೆ ರಕ್ಷಣೆ ಒದಗಿಸುವ ಉದ್ದೇಶಕ್ಕಾಗಿ ಎಸ್ಸಿ, ಎಸ್ಟಿ(ದೌರ್ಜನ್ಯ ತಡೆ) ಕಾಯ್ದೆಯನ್ನು ರೂಪಿಸಿ ಸುಮಾರು 25 ವರ್ಷಗಳಾಗವೆ. ಆದರೆ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತದೆ ಇದೆ. ಆದ್ದರಿಂದ ಕಾಯ್ದೆಯಲ್ಲಿ ಇರುವ ಲೋಪದೋಷಗಳನ್ನು ತೆಗೆದು ಹಾಕಲು ಮತ್ತು ಕಾಯ್ದೆಯನ್ನು ಬಲಪಡಿಸಲು ಅದನ್ನು ಸೂಕ್ತವಾಗಿ ತಿದ್ದುಪಡಿ ಮಾಡುವುದನ್ನು ಅಗತ್ಯವಿದೆ. ಆದ್ದರಿಂದ ಸರ್ಕಾರ ಮತ್ತು ಆಡಳಿತವು ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ತಡೆಗಟ್ಟಲು ಮುಂದಾಗಬೇಕು ಎಂದರು.
ಸಹಿ ಸಂಗ್ರಹ ಚಳವಳಿಯಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಎಸ್‌ಎಫ್‌ಐನ ಪೃಥ್ವಿ, ಗಿರೀಶ್, ಸಂದೇಶ್, ಅರವಿಂದ್ ಇತರರು ಇದ್ದರು.

ಬೇಡಿಕೆಗಳು
-ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗೆ ತಿದ್ದುಪಡಿಗಳನ್ನು ಸಂಸತ್ತಿನ ಈ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಬೇಕು. ಇದುವರೆಗೆ ಕಾಯ್ದೆಯಲ್ಲಿ ಗುರುತಿಸದಿರುವ ಹೊಸ ಅಪರಾಧಗಳನ್ನು ಸ್ಪಷ್ಟವಾಗಿ ಈ ಕಾಯ್ದೆಗೊಳಗೆ ಸೇರಿಸಬೇಕು. ಎಸ್ಸಿ, ಎಸ್ಟಿಗಳ ಮೇಲಿನ ದೌರ್ಜನ್ಯ ಮತ್ತು ದಾಳಿಗಳಿಗೆ ಶಿಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಬೇಕು. ದೌರ್ಜನ್ಯಕ್ಕೊಳಗಾದವರಿಗೆ ನೀಡುವ ಪರಿಹಾರವನ್ನು ಹೆಚ್ಚಿಸಬೇಕು. ಘಟನೆ ನಡೆದ ಕೂಡಲೇ ದೌರ್ಜನ್ಯಕ್ಕೊಳಗಾದವರಿಗೆ ಪುನರ್ವಸತಿ ಕಲ್ಪಿಸಲು ಕ್ರಮಕೈಗೊಳ್ಳಬೇಕು.
-ಹೆಚ್ಚು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಪ್ರಕರಣಗಳನ್ನು ಕಾಲಮಿತಿಯೊಳಗೆ ತ್ವರಿತವಾಗಿ ಇತ್ಯರ್ಥಗೊಳಿಸಲು ಹೆಚ್ಚು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಬೇಕು. ದೌರ್ಜನ್ಯಕ್ಕೊಳಗಾದವರ ಮತ್ತು ಸಾಕ್ಷಿದಾರರ ಹಕ್ಕುಗಳನ್ನು ಕಾಯ್ದೆಯಲ್ಲಿ ವಿವರಿಸಬೇಕು. ಜಾತಿ ತಾರತಮ್ಯ ಮಾಡುವ ಎಲ್ಲಾ ಆಚರಣೆಗಳನ್ನು ನಾಗರಿಕ ಅಪರಾಧಗಳು ಎಂದು ಪರಿಗಣಿಸಬೇಕು ಮತ್ತು ವಿಚಾರರಣೆಗೆ ಒಳಪಡಿಸಿಬೇಕು.
-ಎಸ್ಸಿ, ಎಸ್ಟಿಗಳ ಮೇಲೆ ದೌರ್ಜನ್ಯ ನಡೆಯುವುದನ್ನು ತಡೆಗಟ್ಟಲು ವಿಫಲವಾದ ಪೊಲೀಸ್ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಎಸ್ಸಿ, ಎಸ್ಟಿ ಜನರ ಮೇಲೆ ಒತ್ತಡ ಹಾಕಿ ಪ್ರಕರಣಗಳನ್ನು ರಾಜೀ ಮಾಡಲು ಒತ್ತಾಯಿಸುವ ಅಧಿಕಾರಿಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. ದೌರ್ಜನ್ಯ ತಡೆ ಕಾಯ್ದೆಯನ್ನು ಎಲ್ಲ ದಲಿತರಿಗೆ ಮತ್ತು ಬುಡಕಟ್ಟು ಜನಾಂಗದವರಿಗೆ, ಅವರು ಯಾವ ಧರ್ಮಕ್ಕೆ ಸೇರಿದವರಾಗಿದ್ದರೂ, ಸಮಾನವಾಗಿ ಅನ್ವಯಿಸತಕ್ಕದ್ದು ಎಂದು ಹೇಳಿದರು.
-ಎಸ್ಸಿ, ಎಸ್ಟಿ(ವಿಶೇಷ ಘಟಕ ಯೋಜನೆ) ಮತ್ತು ಟಿಎಸ್ಟಿ(ಬುಡಕಟ್ಟು ಉಪ ಯೋಜನೆ)ಗೆ ಶಾಸನಬದ್ಧ ಸ್ಥಾನ ನೀಡಬೇಕು. ಇವುಗಳಿಗೆ ಸಂಬಂಧಿಸಿ ಭಾರತ ಸರ್ಕಾರ ಆದಷ್ಟು ಬೇಗ ಶಾಸನವೊಂದನ್ನು ರೂಪಿಸಬೇಕು. ಎಸ್ಸಿ, ಎಸ್ಟಿಗಳ ಆರ್ಥಿಕ ಸಬಲೀಕರಣವನ್ನು ಖಾತರಿಪಡಿಸಬೇಕು. ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸಿ ಜಾರಿಗೊಳಿಸಬೇಕು. ಭೂಮಿ ಇಲ್ಲದ ಪ್ರತಿಯೊಂದು ಎಸ್ಸಿ, ಎಸ್ಟಿ ಕುಟುಂಬಕ್ಕೆ ಮತ್ತು ಭೂಮಿ ಇಲ್ಲದ ಇತರ ಬಡವರಿಗೆ ಭೂಮಿಯನ್ನು ನೀಡಬೇಕು.
-ನಾನಾ ಪರಿವೀಕ್ಷಣಾ(ಮಾನೀಟರಿ ಕಮಿಟಿ) ಸಮಿತಿಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿ ಹೆಚ್ಚುತ್ತಿರುವ ಎಸ್ಸಿ, ಎಸ್ಟಿ ದೌರ್ಜನ್ಯಗಳನ್ನು ತಡೆಗಟ್ಟಲು ಸೂಕ್ತ ಸಲಹೆಗಳನ್ನು ನೀಡಬೇಕು. ಪರಿವೀಕ್ಷಣಾ ಸಮಿತಿಗಳ ಸಭೆಗಳನ್ನು ಕಡ್ಡಾಯಗೊಳಿಸಬೇಕು. ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಬೇಕು. ಅವರಿಗೆ ಆರ್ಥಿಕ ನೆರವು ನೀಡಬೇಕು. ಮಾತ್ರವಲ್ಲ, ಅವರಿಗೆ ಅಗತ್ಯ ರಕ್ಷಣೆಯನ್ನು ಒದಗಿಸಬೇಕು. ಅವರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗವನ್ನು ಒದಗಿಸಬೇಕು. ಯಾವುದೇ ಸಂದರ್ಭದಲ್ಲಿ ಮಹಿಳೆಯನ್ನು ಎಸ್ಸಿ ಎಂದು ಪರಿಗಣಿಸಬೇಕು.
-ಜಾತಿ ತಾರತಮ್ಯ, ಅಸ್ಪೃಶ್ಯತಾ ಆಚರಣೆ ಮತ್ತು ದಲಿತರ ದೌರ್ಜನ್ಯಗಳ ವಿರುದ್ಧ ಸರ್ಕಾರ ವಿಶಾಲವಾದ ಪ್ರಚಾರಾಂದೋಲನ ನಡೆಸಬೇಕು. ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ದಲಿತರಲ್ಲಿ ತಿಳಿವಳಿಕೆಗೆ ಮೂಡಿಸುವ ಅಭಿಯಾನ ನಡೆಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement