ಅಪೌಷ್ಟಿಕ ಆಹಾರದಿಂದ ರಕ್ತಹೀನತೆ: ಪ್ರಕಾಶ್
ಚನ್ನರಾಯಪಟ್ಟಣ: ಅಪೌಷ್ಠಿಕ ಆಹಾರದಿಂದ ರಕ್ತದ ಹೀನತೆ ಆಗಲಿದ್ದು, ಅನೇಕ ಸಂಕಷ್ಟಗಳಿಗೆ ಜನರು ತುತ್ತಾಗಬೇಕಾಗುತ್ತದೆ. ಆದ್ದರಿಂದ ಆರೋಗ್ಯದ ಹಾಗೂ ಆಹಾರದ ಕಡೆ ಹೆಚ್ಚು ಆಸಕ್ತಿ ವಹಿಸಬೇಕೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ತಿಳಿಸಿದರು.
ತಾಲೂಕಿನ ದಂಡಿಗನಹಳ್ಳಿ ಹೋಬಳಿ ಬರಗೂರು ಹ್ಯಾಂಡ್ಪೋಸ್ಟ್ ಗ್ರಾಮ ಪಂಚಾಯ್ತಿ ಆವರಣದಲ್ಲಿ ದೇವಿಗೆರೆ ಜನ ವಿಕಾಸ ಸಂಸ್ಥೆ ಏರ್ಪಡಿಸಿದ್ದ ಉಚಿತ ರಕ್ತ ಗುಂಪು, ರಕ್ತ ಒತ್ತಡ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸಂಸ್ಥೆಯ ಮೇಲ್ವಿಚಾರಕ ಹಾಗೂ ನಿವೃತ್ತ ಪ್ರಾಂಶುಪಾಲ ಡಿ. ಟಿ. ರಂಗಸ್ವಾಮಿ ಮಾತನಾಡುತ್ತಾ ಹಿಂದಿನ ಆಹಾರ ಪದ್ಧತಿ ನೂರಾರು ವರ್ಷ ಬದುಕುವಂತಿತ್ತು. ಆದರೆ ಇಂದಿನ ಪದ್ದತಿ ಅಪೌಷ್ಠಿಕ ಕೊರತೆಯಾಗಿದ್ದು ಬೆಳೆಗೆ ಬಳಸುವ ರಾಸಾಯನಿಕ ಬಳಕೆಯಿಂದ ಆಹಾರ ಪದಾರ್ಥಗಳ ವಸ್ಥುಸ್ಥಿತಿಯೇ ಕೊರತೆಯಾಗಿದ್ದು ಇದರ ವ್ಯವಸ್ಥೆ ವ್ಯವಸಾಯಕ್ರಮ ಬದಲಾವಣೆಯಾಗಬೇಕಾಗಿದೆ, ಇದರಿಂದ ಜನರ ಆರೋಗ್ಯ ನೆಮ್ಮದಿ ಕಂಡುಕೊಳ್ಳುವಲ್ಲಿ ಮುಂದಾಗಬೇಕೆಂದರು.
ಗ್ರಾಮಪಂಚಾಯ್ತಿ ಅಧ್ಯಕ್ಷ ಬಿ. ಜಿ. ರಾಜು ಉದ್ಘಾಟಿಸಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಡಿ. ಜೆ. ಕಣಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಗದೀಶ್ ಸ್ವಾಗತಿಸಿದರು. ರಮೇಶ್ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ನಗರಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಪುಟ್ಟಣ್ಣ ಮಾತನಾಡಿ, ನಿಮ್ಮ ರಕ್ತದ ಗುಂಪನ್ನು ಪರೀಕ್ಷಿಸಿಕೊಳ್ಳುವುದರ ಮೂಲಕ ನೀವು ಮಾಡುವ ರಕ್ತದಾನ ಶ್ರೇಷ್ಠ ಕಾರ್ಯವಾಗಿರುತ್ತದೆ. ಅಪಘಾತ, ರಕ್ತ ಹೀನತೆ, ಗಬಿಣೀಯರಿಗೆ ಬೇಕಾಗುವ ರಕ್ತಕ್ಕೆ ಜಾತಿ ಧರ್ಮ ಲೇಪನವಿರುವುದಿಲ್ಲ ಇಲ್ಲಿ ಜಾತಿ ಧರ್ಮದ ಹೆಸರನ್ನು ಕೇಳದೆ ರಕ್ತದ ಗುಂಪನ್ನು ಮಾತ್ರ ಕೇಳಲಾಗುತ್ತದೆ ಎಂದು ಹೇಳಿದರು.
ಪಂಪ್ಸೆಟ್ ಸಕ್ರಮಕ್ಕೆ ಸೂಚನೆ
ಹಾಸನ: ಅಕ್ರಮ ನೀರಾವರಿ ಪಂಪಸೆಟ್ದಾರರಿಂದ ಅರ್ಜಿ ನೋಂದಾಯಿಸಿ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಗಡವು ನೀಡಿದ್ದು ಕೆಲವು ಅರ್ಜಿದಾರರು ತಮ್ಮ ಪಂಪಸೆಟ್ಗಳನ್ನು ಸಕ್ರಮಗೊಳಿಸಲು ಶುಲ್ಕ ಪಾವತಿಸಿದ್ದು ಅಂತಹ ಪಂಪಸೆಟ್ಗಳನ್ನು ಸಕ್ರಮಗೊಳಿಸಿದ್ದು ಇನ್ನೂ ಹಲವು ಅರ್ಜಿದಾರರು ನೋಂದಣಿ ಶುಲ್ಕ ಪಾವತಿಸಿ ಇನ್ನಿತರ ಶುಲ್ಕ ಪಾವತಿಸಿಲ್ಲ. ಪಂಪ್ಸೆಟ್ದಾರರಿಂದ ಸಕ್ರಮ ಶುಲ್ಕ ಹಾಗೂ ಠೇವಣಿ ಪಾವತಿಸಿಕೊಂಡು ಅಗತ್ಯ ದಾಖಲೆ ಪಡೆದು ಮೂಲಭೂತ ಸೌಕರ್ಯ ಒದಗಿಸಿ ಪಂಪಸೆಟ್ಗಳನ್ನು ಸಕ್ರಮಿಕರಣ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಚೆಸ್ಕಾಂ ವ್ಯಾಪ್ತಿಯಲ್ಲಿ ಅನಧಿಕೃತ ನೀರಾವರಿ ಪಂಪ್ಸೆಟ್ಗಳನ್ನು ಹೊಂದಿರುವ ಅರ್ಜಿ ಶುಲ್ಕ ಪಾವತಿಸಿರುವ ಬಳಕೆದಾರರು ಈ ಸದವಕಾಶ ಉಪಯೋಗಿಸಿಕೊಂಡು ತಮ್ಮ ಅಕ್ರಮ ಅನಧಿಕೃತ ಪಂಪಸೆಟ್ಗಳನ್ನು ಸಕ್ರಮಗೊಳಿಸಿಕೊಳ್ಳಲು ಕೂಡಲೇ ಸ್ಥಳೀಯ ಚಾವಿಸನಿನಿ ಉಪ-ವಿಭಾಗ ಕಚೇರಿ ಸಂಪರ್ಕಿಸಿ ಸಕ್ರಮ ಶುಲ್ಕ ಹಾಗೂ ಅಗತ್ಯ ಠೇವಣಿ ಪಾವತಿಸಿ ಕೊಂಡು ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ, ವೃತ್ತ ಕಚೇರಿ ಅಧೀಕ್ಷಕ ಎಂಜಿನಿಯರ್ ರವಿ ಕೋರಿದ್ದಾರೆ.