ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಣ್ಯಭೂಮಿ ಒತ್ತುವರಿ ತೆರವಿಗೆ ಖಂಡನೆ

Srinivasa Murthy VN
Updated On : 16 Oct 2013, 12:34 pm

ಹಾಸನ: ಅರಣ್ಯ ಇಲಾಖೆ ಇಲಾಖೆ ನೋಟಿಸಸ್ನೀಡದೆ ಏಕಾಏಕಿ ಅರಣ್ಯಭೂಮಿ ಒತ್ತುವರಿ ತೆರವುಗೊಳಿಸುತ್ತಿರುವುದು ವಿಷಾಯದನೀಯ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ತೀವ್ರವಾಗಿ ಖಂಡಿಸಿದೆ. ಕಾಫಿ ಬೆಳೆಯುವ ಮಲೆನಾಡು ಭಾಗದಲ್ಲಿ ಒತ್ತುವರಿ ಭೂಮಿಯನ್ನು ತೆರವುಗೊಳಿಸುತ್ತಿರುವುದು ಈ ಭಾಗದ ರೈತಬೆಳೆಗಾರರನ್ನು ನಿರ್ಗತಿಕರನ್ನಾಗಿಸುತ್ತಿದೆ. ಅರಣ್ಯ ಮತ್ತು ಕಂದಾಯ ಭೂಮಿ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗವು ಮಾನ್ಯ ಅರಣ್ಯ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಾಗ, ಜಂಟಿ ಸರ್ವೇ ಕಾರ್ಯ ನಡೆಸುವವರೆಗೂ ತೆರವು ಕಾರ್ಯ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದರು ಎಂದು ಅಧ್ಯಕ್ಷ ಡಾ.ಎನ್.ಕೆ. ಪ್ರದೀಪ್ ತಿಳಿಸಿದ್ದಾರೆ.
ಶೇ. 50 ನಷ್ಟ: ಸಚಿವರ ಭರವಸೆ ಹುಸಿಯಾಗಿದ್ದು, ಅರಣ್ಯ ಇಲಾಖೆ ನೋಟೀಸ್ ನೀಡದೆ ಏಕಾಏಕಿ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸುತ್ತಿರುವುದು ವಿಷಾಧನೀಯ. ಈ ವರ್ಷ ಅತಿಯಾಗಿ ಸುರಿದ ಭಾರಿ ಮಳೆಯಿಂದ ಕಾಫಿ ಬೆಳೆಯಲ್ಲಿ ಶೇ. 50ರಷ್ಟು ಭಾರಿ ನಷ್ಟ ಸಂಭವಿಸಿದ್ದು, ನಷ್ಟದ ಪ್ರಮಾಣ ಸುಮಾರು 800 ಕೋಟಿಗಳಷ್ಟಾಗಿದೆ. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿ ಮತ್ತು ಆರ್ಥಿಕ ನಷ್ಟದಿಂದ ಚೇತರಿಸಿಕೊಳ್ಳಲು ಬೆಳೆಗಾರರಿಗೆ ಎರಡು ವರ್ಷಗಳೇ ಬೇಕಾಗಲಿದೆ. ಇದೀಗ ಒತ್ತುವರಿ ಭೂಮಿಯನ್ನು ತೆರವುಗೊಳಿಸುತ್ತಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮಾನವೀಯ: ಕಾಫಿ ಬೆಳೆಗಾರರಾದ ಹಾಗೂ ಮಾಜಿ ಸಚಿವ ಸಗೀರ್ ಅಹಮ್ಮದ್ ಅವರ ಮಗನ ಅರಣ್ಯ ಭೂಮಿ ಒತ್ತುವರಿ ಜಾಗವನ್ನು ತೆರವುಗೊಳಿಸಲು ಮುಂದಾದಾಗ ಮುಖ್ಯಮಂತ್ರಿಗಳಲ್ಲಿ, ಅರಣ್ಯ ಸಚಿವರಲ್ಲಿ, ಹಾಗೂ ಅರಣ್ಯ ಅಧಿಕಾರಿಗಳಲ್ಲಿ   ಮೂರು ತಿಂಗಳುಗಳ ಕಾಲಾವಕಾಶ ನೀಡುವಂತೆ ಕೇಳಿಕೊಂಡರು ಸಹ ಲೆಕ್ಕಿಸದೆ ಒತ್ತುವರಿ ತೆರವು ಗೊಳಿಸಿರುವುದು ಅಮಾನವೀಯ ಎಂದು ಖಂಡಿಸಿದ್ದಾರೆ. ಆದ್ದರಿಂದ ಒತ್ತುವರಿಯಾದ ಕಾಫಿ ತೋಟಗಳನ್ನು ತೆರವು ಗೊಳಿಸುವ ಕಾರ್ಯವನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರಮೊಂದನ್ನು ಒದಗಿಸಿಕೊಡಬೇಕು. ತೆರವು ಕಾರ್ಯ ಮುಂದುವರೆಸಿದ್ದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟವು ಸಮಸ್ತ ಕಾಫಿ ಬೆಳೆಗಾರರನ್ನೊಳಗೊಂಡು ಉಗ್ರ ಹೋರಾಟ ನಡೆಸುವುದೆಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement