ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಅವಶ್ಯಕ

Srinivasa Murthy VN
Updated On : 16 Oct 2013, 12:35 pm

ಹಾಸನ: ಪ್ರತಿಯೊಬ್ಬರೂ ಕಾನೂನಿನಲ್ಲಿ ಇರುವ ಸೌಲಭ್ಯವನ್ನು ತಿಳಿಯಲು ಅರಿವು ಅತ್ಯಗತ್ಯ ಎಂದು ಸರ್ಕಾರಿ ಕಾನೂನು ಕಾಲೇಜು ಸಹ ಪ್ರಾಧ್ಯಾಪಕಿ ಪದ್ಮಲತಾ ತಿಳಿಸಿದರು.
ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಕಾನೂನು ಕಾಲೇಜ್, ಹಾಗೂ ನಾನಾ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಇತ್ತೀಚೆಗೆ  ಏರ್ಪಡಿಸಲಾಗಿದ್ದ ಕಾನೂನು ಸಾಕ್ಷರಥ, ಜನತಾ ನ್ಯಾಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯ: ಯಾವುದೇ ವ್ಯಕ್ತಿ ಮಾನಸಿಕ ದೌರ್ಬಲ್ಯದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಕೊಡಿಸಲು ಮನೆಯವರಿಗೆ ಆರ್ಥಿಕ ತೊಂದರೆ ಇದ್ದಲ್ಲಿ ಮತ್ತು ಅಂತಹ ವ್ಯಕ್ತಿಗಳಿಂದ ಶಾಂತಿ ಭಂಗವಾಗುತ್ತಿದ್ದಲ್ಲಿ ಅಂತಹವರನ್ನು ಸಮೀಪದ ಪೊಲೀಸ್ ಠಾಣೆಗೆ ಹಾಜರುಪಡಿಸಿದಲ್ಲಿ ಪೊಲೀಸರ ಸಹಾಯದಿಂದ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಅಥವಾ ನ್ಯಾಯಾಲಯದ ಮೂಲಕ ಮಾನಸಿಕ ರೋಗ ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಿ ಚಿಕಿತ್ಸೆ ಕೊಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಹೇಳಿದರು.
ಮಾನಸಿಕ ಖಿನ್ನತೆಯಿಂದ ಹಲವು ಮಂದಿ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇದರಿಂದ ಅನೇಕರು ಅನಾರೋಗ್ಯ, ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅಂತಹವರಿಗೆ ಸೂಕ್ತ ಚಿಕಿತ್ಸೆ ಕಾನೂನಿನ ರಕ್ಷಣೆ ಅಗತ್ಯವಿದೆ. ವಿವಿಧ ಕಾನೂನನ್ನು ಬಡವರು, ಮಾನಸಿಕ ನೋವಿನಿಂದ ಬಳಲುತ್ತಿರುವವರು, ಪ್ರವಾಹ, ಕ್ಷಾಮ, ದೌರ್ಜನ್ಯಕ್ಕೆ ಹಾಗೂ ಜೀತದಾಳು ಸೇರಿದಂತೆ ಇತರೆ ವ್ಯಕ್ತಿಗಳಿಗೆ 1971 ರಿಂದ ಈ ಪದ್ಧತಿ ಜಾರಿಗೆ ತರಲಾಗಿದೆ.
ನ್ಯಾಯ: ನ್ಯಾಯಕ್ಕಾಗಿ ಪ್ರತಿಯೊಬ್ಬರೂ ಹೋರಾಡಬಹುದು. ಅನೇಕ ವ್ಯಕ್ತಿಗಳು ಹಣ ಕೊಟ್ಟು ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಿಲ್ಲದವರ ಬಗ್ಗೆ ಗಮನ ನೀಡಲಾಗಿದೆ. ಅಂತಹವರಿಗೆ ಇಂತಹ ಕಾರ್ಯಕ್ರಮ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಶಾಮಭಟ್, ನ್ಯಾಯಾಧೀಶೆ ಮಂಜುಳ, ಸರ್ಕಾರಿ ಕಲಾ ಕಾಲೇಜ್ ಉಪನ್ಯಾಸಕ ಸದಾಶಿವಪ್ರಸಾದ್, ಎನ್‌ಎಸ್‌ಎಸ್ ಘಟಕದ  ಜಯರಾಂ, ನಿಂಗಪ್ಪ, ಉಪನ್ಯಾಸಕ ನೀಲಕಂಠ ಮನ್ವಚಾರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ರಮೇಶ್ ಇತರರು ಇದ್ದರು. ನಾಗಲಕ್ಷ್ಮಿ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು. ಪವನ್ ಪ್ರಾರ್ಥಿಸಿದರು. ಗೋಪಾಲ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement