ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರೀಗಂಧ ಮರಗಳ ಕಳವು

Srinivasa Murthy VN
Updated On : 18 Oct 2013, 12:46 pm

ಹೊಳೆನರಸೀಪುರ: ತಾಲೂಕಿನ ಯಡೇಗೌಡನಹಳ್ಳಿ ಗ್ರಾಮಕ್ಕೆ ಸಮೀಪವಿರುವ ಹೊನ್ನೇನಹಳ್ಳಿ ಗ್ರಾಮಕ್ಕೆ ಸೇರಿದ ಖಾಸಗಿ ಭೂಮಿಯಲ್ಲಿ ಬೆಳೆದಿದ್ದ 20ಕ್ಕೂ  ಹೆಚ್ಚು ಶ್ರೀಗಂಧದ ಮರಗಳನ್ನು ರಾತ್ರಿಯ ವೇಳೆಯಲ್ಲಿ ಕಡಿದು ಮಾಲು ಸಮೇತ ಪರಾರಿ ಆಗಿರುವ ಘಟನೆ  ಬುಧವಾರ ನಡೆದಿದೆ.
 ಹೊನ್ನೇನಹಳ್ಳಿ ಗ್ರಾಮದ ಬಿ.ಚಂದ್ರಪ್ಪ ಅವರಿಗೆ ಸೇರಿದ ಭೂಮಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಶ್ರೀಗಂಧದ ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ. ಅದರಂತೆ ಸುತ್ತಮುತ್ತಲ ಭೂಮಿಯಲ್ಲಿ ಹಲವು ರೈತರುಗಳು ತಮ್ಮ ಭೂಮಿಯಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಿದ್ದು ಅ.14 ಮತ್ತು ಅ.15 ರ ರಾತ್ರಿ ಶ್ರೀಗಂಧ ಚೋರರು ಮರಗಳನ್ನು ಕಡಿದುಕೊಂಡು ಪರಾರಿ ಆಗಿರುವ ಬಗ್ಗೆ ಅರಣ್ಯ ಇಲಾಖೆಗೆ ಬಿ.ಚಂದ್ರಪ್ಪ ಅವರು ದೂರು ದಾಖಲಿಸಿದ್ದಾರೆ.
ಚಂದ್ರಪ್ಪ ಅವರ ಪ್ರಕಾರ ಹೊನ್ನೇನಹಳ್ಳಿ ಸುತ್ತಮುತ್ತಲ ರೈತರು  ಬಹು ಕಷ್ಟದಿಂದ ಶ್ರೀಗಂಧದ ಮರಗಳನ್ನು ಬೆಳೆಸುತ್ತಿದ್ದು, ತಮಗೆ ಸೇರಿದ ಭೂಮಿಯಲ್ಲಿ ಹಾಲಿ 35 ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಸಿದ್ದು ಅ.14 ಮತ್ತು ಅ.15 ರ ರಾತ್ರಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲಾಗಿದೆ ಎಂದು ತಿಳಿಸಿರುವ ಅವರು, ಒಂದು ವರ್ಷದ ಹಿಂದೆಯೂ ಕೂಡ ಕೆಲ ಆಗಂತುಕರು ಶ್ರೀಗಂಧದ ಮರಗಳನ್ನು ಕಡಿಯುವ ಸಂದರ್ಭದಲ್ಲಿ ತಮ್ಮ ಕೈಗೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದರು.
ಆಗಲೂ ಕೂಡ ತಾವು ಅರಣ್ಯ ಇಲಾಖೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಪಕ್ಕದ ತಾಲೂಕು ಕೃಷ್ಣರಾಜನಗರಕ್ಕೆ ಸೇರಿದ ಭೇರ್ಯ ಸಮೀಪದ ಮುಂಜನಹಳ್ಳಿ ಶಿವಣ್ಣ, ದೊಡ್ಡಳ್ಳಿ ಗ್ರಾಮದ ಸಮೀಪದ ಉದಯಗಿರಿ ಗ್ರಾಮದ ಕಾಳಯ್ಯ, ರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಿ ಕ್ರಮಕೈಗೊಂಡಿದ್ದರು. ಆದರೆ ಮೊನ್ನೆ ನಡೆದ ಘಟನೆಯಲ್ಲಿ ಈ  ವ್ಯಕ್ತಿಗಳ ಕೈವಾಡ ಇದೆ ಎಂಬ ಅರೋಪವನ್ನು ಮಾಡಿರುವ ಚಂದ್ರಪ್ಪ ಈ ಬಗ್ಗೆ ತಾವು ಪಟ್ಟಣದ ಅರಣ್ಯ ಇಲಾಖೆಗೆ ದೂರು ನೀಡಿ ಘಟನೆಗೆ ಕಾರಣರಾದ ಆಗುಂತಕರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement