ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪಠ್ಯದಲ್ಲಿ ವಾಲ್ಮೀಕಿ ಜೀವನ ಕಥೆ ಅಳವಡಿಸಲಿ'

Srinivasa Murthy VN
Updated On : 19 Oct 2013, 11:03 am

ಆಲೂರು: ಸಮಾಜದಲ್ಲಿ ಸುಧಾರಣೆ ತರುವಂತಹ ರಾಮಾಯಣದಂತಹ ಶ್ರೇಷ್ಠ ಗ್ರಂಥ ರಚಿಸಿದ ವಾಲ್ಮೀಕಿ ಜೀವನ ಕಥೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಪಟ್ಟಣದ ಗಣಪತಿ ಪೆಂಡಾಲ್‌ನಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು,   600 ಕೋಟಿ ಜನರಿಗೆ ಮಾದರಿಯಾಗುವಂತಹ ಮಹಾ ಗ್ರಂಥವನ್ನು ಬರೆದು ಮನುಷ್ಯನನ್ನು ಮನುಷ್ಯನಾಗಿ ಬದಲಾಯಿಸುವ ವಾಲ್ಮೀಕಿಯವರ ಜೀವನ ಇಂದಿನ ಪೀಳಿಗೆಗೆ ಆದರ್ಶವಾಗಲೆಂದರು.
ಪ್ರೊ.ಮಂಜಯ್ಯ ಮಾತನಾಡಿ, ರತ್ನಾಕರನೆಂಬ ಒಬ್ಬ ಕೆಟ್ಟ ಕೆಲಸ ಮಾಡುತ್ತಿದ್ದ ಮಾಮೂಲಿ ಬೇಡ ನಂತರ ನಾರದರಿಂದ ಉಪದೇಶ ಪಡೆದು ತಪಸ್ಸು ಮಾಡುವಾಗ ಆತನ ಮೈ ಸುತ್ತ ಹುತ್ತ ಬೆಳೆದು ನಂತರ ವಾಲ್ಮೀಕಿ ಎಂಬ ಹೆಸರನ್ನು ಪಡೆದರು. ಅವರ ಜೀವನದಲ್ಲಾದ ಬದಲಾವಣೆಯಿಂದ ಸಾಮಾನ್ಯನಿಂದ ಅಸಾಮಾನ್ಯ ವ್ಯಕ್ತಿಯಾಗಿ ತದ ನಂತರ ರಾಮಾಯಣ ಗ್ರಂಥವನ್ನು ರಚಿಸಿದರು ಎಂದು ತಿಳಿಸಿದರು.
ತಾಪಂ ಅಧ್ಯಕ್ಷೆ ಯಶೋಧ ಹರೀಶ್, ಅಜ್ಜೇಗೌಡ, ಪಟ್ಟಣ ಪಂಚಾಯ್ತಿ ಸದಸ್ಯ ಸೈಯ್ಯದ್ ಜಾಫರ್, ನಾಗರತ್ನ, ತಹಸೀಲ್ದಾರ್ ಶಾರದಾಂಬ, ಚಂದ್ರಶೇಖರ್, ವಾಸುದೇವ್, ಶಿವಕುಮಾರಪ್ಪ, ದೇವರಾಜ್‌ನಾಯಕ್ ಇತರರು ಇದ್ದರು. ಬಹುತೇಕ ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿದ್ದು, ಮುಂದಿನ ದಿನಾಚರಣೆಗಳಲ್ಲಿ ಇದೇ ರೀತಿ ಮುಂದುವರಿದಲ್ಲಿ ಗೈರು ಹಾಜರಾಗುವವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಶಾರದಾಂಬ ತಿಳಿಸಿದರು.

'ಉಪ್ಪಾರ ಜನಾಂಗ ಸಂಘಟಿತರಾಗುವ ಅಗತ್ಯವಿದೆ'
ಕ.ಪ್ರ. ವಾರ್ತೆ ಚನ್ನರಾಯಪಟ್ಟಣ ಅ.19

ರಾಜ್ಯದಲ್ಲಿ ಉಪ್ಪಾರ ಜನಾಂಗದವರು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸಂಘಟಿತರಾಗುವ ಅಗತ್ಯವಿದೆ ಎಂದು ಚಾಮರಾಜನಗರ ಕ್ಷೇತ್ರ ಶಾಸಕ ಪುಟ್ಟರಂಗಶೆಟ್ಟಿ ಕರೆ ನೀಡಿದರು.
ಪಟ್ಟಣದ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ತಾಲೂಕು ಭಗೀರಥ ಉಪ್ಪಾರ ಸಂಘದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾಲದಲ್ಲಿ ಹಿಂದುಳಿದ ಜನಾಂಗದವರಿಗೆ ಹೆಚ್ಚು ಪ್ರೋತ್ಸಾಹ ಸಿಕ್ಕಿದ್ದು ಬಿಟ್ಟರೆ ಇಲ್ಲಿಯ ತನಕ ಯಾರೂ ಕೂಡ ಸರಿಯಾದ ಸವಲತ್ತನ್ನು ನೀಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ ಜನಾಂಗದವರಿಗೆ ಲಭ್ಯವಾಗಬೇಕಾಗಿರುವ ಸರ್ಕಾರದ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ವಿದ್ಯೆ, ಒಗ್ಗಟ್ಟು, ಹೋರಾಟ ಈ ಮೂರು ಅಂಶಗಳು ಮೈಗೂಡಿಸಿಕೊಂಡು ಸಮಾಜದವರು ಒಗ್ಗಟ್ಟಾದರೆ ಅಧಿಕಾರ ಪಡೆದುಕೊಳ್ಳಬಹುದು. ನಿಮ್ಮ ಮಕ್ಕಳಿಗೆ ಯಾವುದೇ ಆಸ್ತಿಯನ್ನು ಮಾಡದಿದ್ದರೂ ಪರವಾಗಿಲ್ಲ,  ಮಕ್ಕಳಿಗೆ ವಿದ್ಯೆಯನ್ನು ಕೊಟ್ಟು ಅವರನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಮುಂದಿನ ದಿನಗಳಲ್ಲಿ ಉಪ್ಪಾರ ಜನಾಂಗದ ಬೃಹತ್ ಸಮಾವೇಶವನ್ನು ಬೇಲೂರು ತಾಲೂಕಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ಹೊಸದುರ್ಗ ಭಗೀರಥ ವಿದ್ಯಾಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಒಗ್ಗಟ್ಟಿನಿಂದ ಸಂಘಟಿತರಾಗಿ ಸಮಾಜಕ್ಕೆ ಗುರುತರ ಸೇವೆ ಸಲ್ಲಿಸಲು ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲೂಕು ಸಮುದಾಯಭವನ ನಿರ್ಮಾಣಕ್ಕೆ ತಮ್ಮ ಶಾಸಕ ನಿಧಿಯಿಂದ 5 ಲಕ್ಷ ರು. ನೀಡುವುದಾಗಿ ಹೇಳಿದರು. ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ನೀಲಪ್ಪ, ಜಿಲ್ಲಾ ಗೌರವಾಧ್ಯಕ್ಷ ಗೋಪಾಲಗೌಡ, ತಾಲೂಕು ಉಪಾಧ್ಯಕ್ಷ ಜನಾರ್ದನ್, ಪುರಸಭೆ ಅಧ್ಯಕ್ಷ ಸಿ. ಜಿ. ಮಂಜುನಾಥ್, ಸುಧಾಚಿಕ್ಕಣ್ಣ, ಮಾಧವರಾಜ್, ರಾಮಲಿಂಗಯ್ಯ, ಅಣ್ಣಯ್ಯ, ಸುಶೀಲಮ್ಮ, ಮೀನಾಕ್ಷಿ, ಶಿವರಾಂ, ರಾಧ, ಪ್ರಕಾಶ್, ಜಯಕುಮಾರ್, ಲೊಕೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement