ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಗಿ, ಜೋಳ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕಾರ್ಯಕ್ರಮ

Srinivasa Murthy VN
Updated On : 19 Oct 2013, 11:03 am

ಚನ್ನರಾಯಪಟ್ಟಣ: ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಕೃಷಿ ಕಾಲೇಜಿನ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಕೃಷಿ ವಿಭಾಗದ ವಿದ್ಯಾರ್ಥಿಗಳಿಂದ ತಾಲೂಕಿನ ಕೆ.ಮಲ್ಲೇನಹಳ್ಳಿಯಲ್ಲಿ ರಾಗಿ ಮತ್ತು ಜೋಳದ ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ವಿಜಯಲಕ್ಷ್ಮಿ, ಸಸ್ಯರೋಗ ವಿಜ್ಞಾನಿ ನಾಗರಾಜು, ಬೇಸಾಯ ಶಾಸ್ತ್ರ ವಿಜ್ಞಾನಿ ಬೈರಪ್ಪನವರ್, ಕೃಷಿ ವಿಸ್ತರಣಾ ವಿಜ್ಞಾನಿ ನಾಗೇಶ್, ಬೀಜಶಾಸ್ತ್ರ ವಿಜ್ಞಾನಿ ಬಸವರಾಜು ಇದ್ದರು. ಕಾರ್ಯಕ್ರಮದಲ್ಲಿ ರಾಗಿ ಮತ್ತು ಜೋಳದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಅವುಗಳ ಬೇಸಾಯ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿತೆ ನಡೆಸಲಾಯಿತು. ರಾಗಿ ಮತ್ತು ಜೋಳ ಬೆಳೆಯುವುದು ಹೇಗೆ, ಬೆಳೆದ ನಂತರ ಏನು ಮಾಡಬೇಕು, ಯಾವ ತಂತ್ರಜ್ಞಾನ ಉಪಯೋಗಿಸಬೇಕು, ಸಂಗ್ರಹಿಸುವುದು ಹೇಗೆ, ಅವುಗಳ ಮೌಲ್ಯವರ್ಧಿತ ಪದಾರ್ಥಗಳು ಅವುಗಳಿಂದ ಮಾನವನಿಗಾಗುವ ಉಪಯೋಗಗಳ ಬಗ್ಗೆ ಆಹಾರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಿಳಿಸಿಕೊಟ್ಟರು. ನಂತರ ರೈತರ ಮತ್ತು ಕೃಷಿ ಕಾಲೇಜು ವಿಜ್ಞಾನಿಗಳ ನಡುವೆ ಸಂಭಾಷಣೆ ಏರ್ಪಟ್ಟಿತು.

ಹೊಯ್ಸಳರ ಕಾಲದ ಗಣೇಶ ವಿಗ್ರಹ ಕಳವಿಗೆ ವಿಫಲ ಯತ್ನ
ಕ.ಪ್ರ. ವಾರ್ತೆ ಹಾಸನ ಅ.19

ಇಲ್ಲಿಯ ಇತಿಹಾಸ ಪ್ರಸಿದ್ಧ ಸದಾಶಿವ ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿದ್ದ 3 ಅಡಿ ಎತ್ತರದ ಹೊಯ್ಸಳರ ಕಾಲದ ಸುಂದರ ಗಣೇಶನ ವಿಗ್ರಹವನ್ನು ದೇಗುಲ ಬಾಗಿಲು ಒಡೆದು ಕಳವು  ಮಾಡಿಕೊಂಡು ಹೋಗುವಾಗ ಕಾಂಪೌಂಡ್‌ನಿಂದ ಆಚೆ ವಿಗ್ರಹವನ್ನು ತೆಗೆದುಕೊಂಡು ಹೋಗಲಾಗದೆ ಬಿಟ್ಟು ಹೋಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಎಂದಿನಂತೆ ಬೆಳಗ್ಗೆ ಪೂಜೆ ಮಾಡಲು ಬಂದ ಅರ್ಚಕ ರಘುದೀಕ್ಷಿತ್ ಇದನ್ನು ನೋಡಿ ಗ್ರಾಮಸ್ಥರಿಗೆ ತಿಳಿಸಿದರು. ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಭಾರತೀಯ ಪುರಾತತ್ವ ಇಲಾಖೆ ಹಾಸನ ವಲಯಾಧಿಕಾರಿ ಶರವಣನ್ ಸ್ಥಳಕ್ಕೆ ಭೇಟಿ ನೀಡಿ ದೇವಾಲಯದ ಕಬ್ಬಿಣದ ಬಾಗಿಲು ಒಡೆದಿರುವುದನ್ನು ಹೊಸದಾಗಿ ಮಾಡಿಸಿ ಹಿಂಬಾಗಿಲು ಬೀಗಗಳನ್ನು ಮಾಡಿಸಿ ಕೊಡುವುದಾಗಿ ತಿಳಿಸಿದರು. ಗ್ರಾಮಸ್ಥರು ರಾತ್ರಿ ವೇಳೆ ಕಾವಲುಗಾರರನ್ನು ನೇಮಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement