ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯೋತ್ಸವ ಪೂರ್ವಭಾವಿ ಸಭೆ

Srinivasa Murthy VN
Updated On : 19 Oct 2013, 11:01 am

ರಾಮನಾಥಪುರ: ಪರಂಪರೆ, ಸಂಸ್ಕೃತಿ, ದಿನಾಚರಣೆ, ಹುಟ್ಟು ಹಬ್ಬಗಳನ್ನು ಉಳಿಸಿ ಹಾಗೂ ಬೆಳೆಸುವ ಜವಾಬ್ಧಾರಿ ಯುವ ಸಮೂಹದ ಮೇಲಿದೆ ಎಂದು ರಾಮನಾಥಪುರ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ. ಮಂಜೇಗೌಡ ತಿಳಿಸಿದರು. ರಾಮನಾಥಪುರ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಮಂಜು ಯುವ ಅಭಿಮಾನಿಗಳ ಸಂಘದ ವತಿಯಿಂದ ರಾಜ್ಯೋತ್ಸವ ಆಚರಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. 58ನೇ ಕನ್ನಡ ರಾಜ್ಯೋತ್ಸವ ಹಾಗೂ ಕ್ಷೇತ್ರ ಶಾಸಕ ಎ. ಮಂಜು 56ನೇ ಹುಟ್ಟು ಹಬ್ಬದ ಅಚರಣೆಯನ್ನು ಮಂಜು ಯುವ ಅಭಿಮಾನಿ ಬಳಗದವರು ಉತ್ತಮ ರೀತಿಯಲ್ಲಿ ಆಚರಿಸಲು ಸಹಕರಿಸಲು ಕೋರಿದರು. ಎ. ಮಂಜು ಯುವ ಅಭಿಮಾನಿ ಸಂಘದ ಸದಸ್ಯ ಲೋಕೇಶ್, ರಮೇಶ್, ಬ್ಲೂಮನ್ ಕಲೀಲ್, ಜಯಪ್ರಕಾಶ್, ಭರತ್, ಹೇಮಂತ್, ಸಿದ್ದಯ್ಯ, ಅಬು ಇತರರಿದ್ದರು.

ರೋಟರಿ ಕ್ವಾಂಟ ಕ್ಲಬ್‌ನಿಂದ ಜಿಲ್ಲಾ ನಕ್ಷೆ ಅನಾವರಣ
ಹಾಸನ:
ನಗರದ ರೋಟರಿ ಸುವರ್ಣ ಭವನದಲ್ಲಿ ರೋಟರಿ ಜಿಲ್ಲೆ -3180ನ ಗವರ್ನರ್ ಎಸ್.ಗುರುರಾಜ್ ಸಮ್ಮುಖದಲ್ಲಿ ರೋಟರಿ ಕ್ವಾಂಟ ಕ್ಲಬ್ ಸಭೆ ನಡೆಯಿತು.ಈ ಸಂದರ್ಭದಲ್ಲಿ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ, ಪ್ರಯಾಣಿಕರಿಗೆ, ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಮುಖ ಇಲಾಖೆಗಳ ದೂರವಾಣಿ ಸಂಖ್ಯೆಗಳಿರುವ ಫಲಕವನ್ನು ಮತ್ತು ಜಿಲ್ಲೆಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವಂತಹ ಜಿಲ್ಲಾ ನಕ್ಷೆಯನ್ನು ಅನಾವರಣಗೊಳಿಸಲಾಯಿತು. ಈ ಫಲಕಗಳು ಸಾರ್ವಜನಿಕರ ಹಣ, ಸಮಯ ಉಳಿತಾಯ ಮಾಡುವುದಲ್ಲದೆ, ತುರ್ತು ಸಮಯದಲ್ಲಿ ಬೇಕಾದಂತಹ ದೂರವಾಣಿ ಸಂಖ್ಯೆಗಳು ಸುಲಭವಾಗಿ ಲಭ್ಯವಾಗಿರುವುದರಿಂದ ಇಂತಹ ಫಲಕದ ಆವಶ್ಯಕತೆ ಇತ್ತು ಎಂದು ರೋಟರಿಯ ಸಮಾಜ ಉಪಯೋಗಿ ಕೆಲಸವನ್ನು ಸಾರ್ವಜನಿಕರು ಕೊಂಡಾಡಿದರು. ಕೆಲವು ಶಾಲೆಗಳಿಗೆ ಸಂಸ್ಥೆಯಿಂದ ಉಚಿತವಾಗಿ  ವಾರ್ತಾ ಪತ್ರಿಕೆಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಯಿತು. ಅಧ್ಯಕ್ಷ ಎಚ್.ಜೆ ಜಿತೇಂದ್ರ. ಕಾರ್ಯದರ್ಶಿ ಮಂಜುನಾಥ್, ಎನ್.ಬಿ.ರಮೆಶ್ ಮತ್ತು ರೋಟರಿ ಮಾಜಿ ಗವರ್ನರ್ ಗೋವರ್ಧನಕುಮಾರ್, ಎಸ್.ಕೆ.ನಾಗೇಂದ್ರನ್, ಭೂಷಣ್ ಇದ್ದರು.

ಕಾಲೇಜಲ್ಲಿ ಮಾದರಿ ಪಾರ್ಲಿಮೆಂಟ್ ಉದ್ಘಾಟನೆ
ಹೊಳೆನರಸೀಪುರ:
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಮಾದರಿ ಪಾರ್ಲಿಮೆಂಟ್ ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಡಾ.ಬಿ.ಸಿ.ಮಲ್ಲೇಶ್ ಉದ್ಘಾಟಿಸಿದರು. ವಿಶೇಷ ಪಾರ್ಲಿಮೆಂಟ್ ಸ್ಪೀಕರ್‌ರಾಗಿ ತೃತೀಯ ಬಿಎ ವಿದ್ಯಾರ್ಥಿನಿ ಎಸ್.ಕೆ.ರೋಹಿಣಿ, ಪ್ರಧಾನಮಂತ್ರಿಯಾಗಿ ಕೆ.ಕೆ.ಪ್ರತಾಪ್, ಗೃಹ ಸಚಿವರಾಗಿ ಮಧು, ರೈಲ್ವೆ ಸಚಿವರಾಗಿ ಕಾಂತರಾಜು, ವಿದೇಶಾಂಗ ಸಚಿವರಾಗಿ ಗಿರೀಶ್, ಹಣಕಾಸು ಸಚಿವರಾಗಿ ಶಿವಣ್ಣ, ರಕ್ಷಣಾ ಸಚಿವರಾಗಿ ಜಗದಾಂಬ ಕಾರ್ಯನಿರ್ವಹಿಸಿದರು. ವಿರೋಧ ಪಕ್ಷದ ನಾಯಕಿಯಾಗಿ ನಿಶ್ಚಿತ, ನಾಗರತ್ನ, ಮಲ್ಲಿಕಾರ್ಜುನ್ ಶಿವಕುಮಾರ್ ಕಾರ್ಯನಿರ್ವಹಿಸಿದರು. ರೇಲ್ವೆ ದರ ಹೆಚ್ಚಳದ ಬಗ್ಗೆ ವಿರೋಧ ಪಕ್ಷದ ಸದಸ್ಯೆ ನಾಗರತ್ನ ಸಚಿವರನ್ನು ತರಾಟೆಗೆ ತೆಗೆದು ಕೊಂಡರು. ಹಾಗೆಯೇ ಹಣದುಬ್ಬರದ ಕುರಿತಂತೆ ವಿರೋಧ ಪಕ್ಷದ ನಾಯಕಿ ನಿಶ್ಚಿತ ಸದನದಲ್ಲಿ ಗಂಭೀರವಾಗಿ ಚರ್ಚಿಸಿದರು. ಇದೇ ಸಂದರ್ಭದಲ್ಲಿ ಭಾರತ, ಚೀನಾ, ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಸ್ವಿಟ್ಜರ್‌ಲೆಂಡ್ ಶಾಸಕಾಂಗಗಳ ಬಗ್ಗೆ ಗೋಡೆಪತ್ರಿಕೆ ಅನಾವರಣಗೊಳಿಸಲಾಯಿತು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಿ.ಆರ್. ಶಾಂತ ನೇತೃತ್ವ ವಹಿಸಿದ್ದರು. ಮುಖ್ಯಸ್ಥೆ  ಪಿ.ಆರ್.ಶಾಂತ  ಸ್ವಾಗತಿಸಿದರು. ಎನ್.ವಿ. ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement