ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಸ್ಥೆಯಿಂದ ಮಹಿಳಾ ಸಬಲೀಕರಣಕ್ಕೆ ಉತ್ತೇಜನ: ಆಂಥೋನಿ

Srinivasa Murthy VN
Updated On : 19 Oct 2013, 11:01 am

ಕನ್ನಡಪ್ರಭ ವಾರ್ತೆ ರಾಮನಾಥಪುರ ಅ.19
ಸಮೀಪದ ಹೊನಗನಹಳ್ಳಿಯ ಸರ್ಕಾರಿ ಶಾಲಾ ಆವರಣದಲ್ಲಿ ಸಿಎಂಎಸ್‌ಎಸ್ ಸೇವಾ ಸಂಸ್ಥೆ ಮತ್ತು ಸಮೃದ್ಧಿ ಸ್ವ ಉದ್ಯೋಗ ತರಬೇತಿ ಸಂಸ್ಥೆ,  ಜಿಲ್ಲಾಪಂಚಾಯ್ತಿ ಆಶ್ರಯದಲ್ಲಿ ಗ್ರಾಮದ ಮಹಿಳೆಯರಿಂದ ತಯಾರಿಸಲ್ಪಟ್ಟ ಹಪ್ಪಳ, ಊದುಬತ್ತಿ, ಉಪ್ಪಿನಕಾಯಿ ಕಿರು ಉದ್ದಿಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಮರಿಯನಗರ ಧರ್ಮಕೇಂದ್ರ ಗುರುಗಳಾದ ಫಾದರ್ ಡೇವಿಡ್ ಅಂಥೋನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿಎಂಎಸ್‌ಎಸ್ ಸಂಸ್ಥೆಯವರು ಮಹಿಳೆಯರನ್ನು ಸಬಲೀಕರಣಗೊಳಿಸಲು ಕುರಿ ಸಾಕಾಣಿಕೆ, ಹಸು ಸಾಕಾಣಿಕೆ, ಹಪ್ಪಳ, ಊದುಬತ್ತಿ ತಯಾರಿಸುವ ಕಿರು ಉದ್ದಿಮೆಗಳಲ್ಲಿ ಸಕ್ರಿಯಗೊಳಿಸುವುದರ ಮೂಲಕ ಉತ್ತೇಜಿಸಲಾಗುತ್ತಿದೆ.
  ಗ್ರಾಮದ ಮಹಿಳೆಯರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ಬಿಡುವು ಮಾಡಿಕೊಂಡು ಈ ರೀತಿ ಕಿರುಉದ್ದಿಮೆಗಳಲ್ಲಿ ತೊಡಗಿಸಿಕೊಂಡಿರುವುದು ನಿಜಕ್ಕೂ ಹೆಮ್ಮೆ ವಿಷಯ ನೀವು ಮಾಡುತ್ತಿರುವ  ಕೆಲಸದಲ್ಲಿ ಶ್ರದ್ದೆ ತೋರಿ ರಾಜ್ಯಕ್ಕೆ ದೇಶಕ್ಕೆ ಒಳ್ಳೆ ಹೆಸರು ಕೀರ್ತಿ ತನ್ನಿ ಎಂದು ನುಡಿದರು.
 ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಇ. ಜಗದೀಶ್ ಮಾತನಾಡಿ, ಹೊನಗಾನಳ್ಳಿ ಚಿಕ್ಕ ಗ್ರಾಮವಾದರೂ ಇಲ್ಲಿನ ಮಹಿಳೆಯರು ಸಾಮರಸ್ಯದಿಂದ ಒಂದುಗೂಡಿ ಕಿರು ಉದ್ದಿಮೆ ಆರಂಭಿಸಿರುವುದು ಇತರ ಗ್ರಾಮದವರಿಗೆ ಮಾದರಿ ಎಂದು ಹೇಳಿದರು.
 ಗ್ರಾಮದ ಅಂಗವಿಕಲೆ ಗುಣ (26) ಅವರಿಗೆ  ಕೊಣನೂರು ಲಯನ್ಸ್‌ನಿಂದ ವೀಲ್ ಚೇರ್ ನೀಡಲಾಯಿತು. ಕಿರುಉದ್ದಿಮೆ ಕ್ಷೇತ್ರ ಸಂಯೋಜಕ ನೀರಕ್ಷ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಘುನಂದನ, ಹಂಡ್ರಂಗಿ ಗ್ರಾಮ ಪಂಚಾಯ್ತಿ  ಉಪಾಧ್ಯಕ್ಷ ಶ್ರೀನಾಥ, ಲೂಸಿಯ, ಶುಭಜ್ಯೋತಿ ಮಹಾಸಂಘ ಅಧ್ಯಕ್ಷೆ ಜಯಮ್ಮ, ಸೋಮಶೇಖರ ಇದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement