ಜನ ವಸತಿಯಿಲ್ಲದ ಕಡೆ ಬೋರ್ವೆಲ್: ತೀರ್ಥಪ್ಪ ಖಂಡನೆ
ಹಾಸನ: ಜನ ವಾಸಿಸುವೆಡೆ ಬೋರ್ವೆಲ್ ಕೊರೆಸುವುದನ್ನು ಬಿಟ್ಟು ಜನ ವಾಸವಿರದ ಜಾಗದಲ್ಲಿ ಬೋರ್ ವೆಲ್ ಕೊರೆಸಿರುವುದಕ್ಕೆ ಸಮಾಜ ಸೇವಕ ಕೆ.ಎಸ್.ತೀರ್ಥಪ್ಪ ಖಂಡಿಸಿದ್ದಾರೆ. ಬೇಲೂರು ತಾಲೂಕು ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮ ಪಂಚಾಯ್ತಿ ಪೌಂಪ್ಹೌಸ್ ಹತ್ತಿರ ಬೋರ್ವೆಲ್ ಕೊರೆಸಲಾಗಿದೆ. ಆದರೆ ಅಲ್ಲಿ ಯಾವ ಮನೆಗಳೂ ಇಲ್ಲ. ಊರಿನೊಳಗೆ ಬೋರ್ವೆಲ್ ಮಾಡಿಸಿ ಕೊಡಿ ಎಂದು ಹೇಳಿದರೂ ಕೊಡಲು ಸಂಬಂಧಪಟ್ಟವರಿಗೆ ಸಾಧ್ಯವಾಗಿಲ್ಲ. ಪಂಪ್ಹೌಸ್ ಬಳಿ ಒಂದು ಮನೆಯೂ ಇಲ್ಲ. ಊರಿನೊಳಗಿರುವ ಬೋರ್ವೆಲ್ ಕೆಟ್ಟು ಹೋಗಿದೆ. ಬೋರ್ವೆಲ್ ದುರಸ್ತಿಪಡಿಸಲಾಗಿದೆ ಎಂದು ಗುತ್ತಿಗೆದಾರರಿಗೆ ಬಿಲ್ ನೀಡಲಾಗಿದೆ. ಆದರೆ ಬೋರ್ವೆಲ್ ಸರಿಯಾಗಿಲ್ಲ ಎಂದು ದೂರಿದ್ದಾರೆ.
ಹೊಳಲು ಗ್ರಾಮದಲ್ಲೂ ಬೋರ್ವೆಲ್ ಕೊಟ್ಟು ಹೋಗಿ ಅದಕ್ಕೆ ಮೋಟಾರ್ ಇಳಿಸಲಾಗಿದ್ದರೂ ಕೆಸಗೋಡು ಗ್ರಾಮ ಪಂಚಾಯ್ತಿ ಪಿಡಿಓ ಕಾರ್ಯದರ್ಶಿ ಇತ್ತ ತಿರುಗಿ ನೋಡಿಲ್ಲ.
ಮಲ್ಲಮ್ಮ ದೇವಾಲಯ ಮುಂದೆ ಬೋರ್ವೆಲ್ ಕೊರೆಸಿದ್ದರೆ ಸಾಕಾಗಿತ್ತು. ಅದು ಬಿಟ್ಟು ಪೈಪ್ಲೈನ್ ಮಾಡಲಾಗಿದೆ. ಇದು ಸರಿಯಲ್ಲ. ಸಿಂಗುವಳ್ಳಿ, ಹೊಸ ವಸಂತಕೂಲ್, ಗದ್ದವಳ್ಳಿಗೆ ಪೈಪ್ಲೈನ್ ಮಾಡಲಾಗಿದೆ. ಆದರೆ ಉಳಿದ ಗ್ರಾಮಗಳಿಗೆ ಈ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.