ತರಗತಿ ಬಹಿಷ್ಕರಿಸಿ ಪ್ರತಿಭಟನೆ
ಕ.ಪ್ರ. ವಾರ್ತೆಸಕಲೇಶಪುರ ಅ. 21
ಉಪನ್ಯಾಸಕರ ಕೊರತೆ ಮತ್ತು ಮೂಲಭೂತ ಸೌಕರ್ಯಗಳನು ಒದಗಿಸುವಂತೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ತರಗತಿ ಬಹಿಷ್ಕರಿಸಿ ಪ್ರತಿಭಟಿಸಿದರು. ಪಟ್ಟಣದ ಕುಡುಗರಹಳ್ಳಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಧ್ಯಯನ ವರ್ಷ ಮುಗಿಯುತ್ತಾ ಬಂದರೂ ಈ ವರೆಗೂ ವಾಣಿಜ್ಯ, ರಾಜ್ಯಶಾಸ್ತ್ರ ವಿಭಾಗಕ್ಕೆ ಉಪನ್ಯಾಸಕರನು ನೇಮಿಸಿಲ್ಲ. ಇದರಿಂದಾಗಿ ತರಗತಿ ನಡೆಯದೆ ವಿದ್ಯಾರ್ಥಿಗಳು ಕಷ್ಟ ಅನುಭವಿಸುವಂತಾಗಿದೆ. ಹಾಗೂ ಕಾಲೇಜು ಗ್ರಂಥಾಲಯದಲ್ಲಿ ಗ್ರಂಧಪಾಲಕರಿಲ್ಲದೆ ಅಗತ್ಯ ಪುಸ್ತಕಗಳು ದೊರೆಯದಂತಾಗಿದೆ. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿಗೆ ಕುಡಿಯುವ ನೀರಿನ ಸೌಲಭ್ಯ, ಅಗತ್ಯ ಸುಸಜ್ಜಿತ ಶೌಚಾಲಯ ವಿಲ್ಲದೇ ವಿಶೇಷವಾಗಿ ಹೆಣ್ಣುಮಕ್ಕಳು ತೊಂದರೆ ಅನುಭವಿಸುವಂತಾಗಿದೆ. ಈ ಎಲ್ಲಾ ಸೌಲಭ್ಯ ಕೂಡಲೇ ಈಡೆರಿಸುವಂತೆ ಒತ್ತಾಯಿಸಿ ಸೋಮವಾರ ತರಗತಿಗಳನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಶಾಸಕರ ಭೇಟಿ: ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಚ್.ಕೆ.ಕುಮಾರಸ್ವಾಮಿ ವಿದ್ಯಾರ್ಥಿಗಳ ಸಮಸ್ಯೆಗಳನು ಆಲಿಸಿದ ಅವರು, ದೂರವಾಣಿ ಮೂಲಕ ಶಿಕ್ಷಣ ಇಲಾಖಾ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ಕಾಲೇಜಿನಲ್ಲಿ ಅಗತ್ಯವಿರುವ ಉಪನ್ಯಾಸಕರು ಹಾಗೂ ಗ್ರಂಥಪಾಲಕರನು ಕೂಡಲೇ ನೇಮಿಸುವಂತೆ ಸೂಚಿಸಿದರು. ಹಾಗೂ ಒಂದು ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಸಲಾಗುವುದು ಎಂದು ಭರವಸೆ ನೀಡಿದರು.
ಕಲಬೆರಕೆ ಹಾಲು ಪ್ರಕರಣ: ತನಿಖೆಗೆ ಒತ್ತಾಯ
ಹಾಸನ: ಜಿಲ್ಲೆಯಾದ್ಯಂತ ಗ್ರಾಮಾಂತರ ಪ್ರದೇಶಗಳಿಂದ ಹಾಲು ಸಂಗ್ರಹಿಸುವಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಕಲಬೆರಕೆ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರು ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾಜ ಸೇವಕ ಕೆ.ಎಸ್.ತೀರ್ಥಪ್ಪ ಒತ್ತಾಯಿಸಿದ್ದಾರೆ. ಈಗಾಗಲೇ ಜಿಲ್ಲೆಯ ಹಲವೆಡೆ ಹಾಲು ಸಂಗ್ರಹಿಸುವ ಲಾರಿಯವರು ಕಲಬೆರಕೆ ಮತ್ತು ಕಳವು ಮಾಡುತ್ತಿರುವ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಪ್ರತಿ ಕ್ಯಾನ್‌ನಿಂದ ಹಾಲನು ಕಳವು ಮಾಡಿ ಅದಕ್ಕೆ ಉಪ್ಪು, ಸಕ್ಕರೆ ನೀರು ಮತ್ತು ಯೂರಿಯಾ ಮಿಶ್ರಣ ಮಾಡಲಾಗುತ್ತಿತ್ತು ಎಂಬ ಅಂಶವನು ಸಿಕ್ಕಿಬಿದ್ದ ಲಾರಿ ಚಾಲಕರೇ ಒಪ್ಪಿಕೊಂಡಿದ್ದಾರೆ. ಮೇಲೋಟಕ್ಕೆ ಇಂತಹ ಪ್ರಕರಣಗಳಲ್ಲಿ ಲಾರಿ ಚಾಲಕರು ಮತ್ತು ಕ್ಲೀನರ್‌ಗಳೇ ತಪ್ಪಿತಸ್ಥರು ಎನುವುದು ಕಂಡುಬಂದರೂ ಇದರಲ್ಲಿ ಹಾಸನ ಹಾಲು ಒಕ್ಕೂಟದ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ, ಇದರಲ್ಲಿ ಯೂರಿಯಾ ಮಿಶ್ರಣ ಮಾಡಿಲ್ಲ ಎನುವ ವರದಿ ನೀಡಿದ್ದರು. ಆದರೆ, ಸಿಕ್ಕಿಬಿದ್ದ ಹಾಲಿನ ಲಾರಿಯಲ್ಲೇ ಯೂರಿಯಾ ಕೂಡ ಸಿಕ್ಕಿದೆ. ಆದಾಗ್ಯೂ ಹಾಸನ ಹಾಲು ಒಕ್ಕೂಟದ ಅಧಿಕಾರಿಗಳು ಯೂರಿಯಾ ಮಿಶ್ರಣ ಆಗಿಲ್ಲ ಎಂದು ಹೇಳುತ್ತಿರುವುದು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ. ಹಾಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಕೂಲಂಕಶ ತನಿಖೆಗೆ ಆದೇಶಿಸ ಬೇಕು ಎಂದು ಒತ್ತಾಯಿಸಿದ್ದಾರೆ.