ಹೊಲಿಗೆ, ಕಸೂತಿ ಉಚಿತ ತರಬೇತಿ
ಹಾಸನ: ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಓದು ಬರಹ ಬರುವಂತಹ 40 ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ, ಕಸೂತಿ ಮತ್ತು ಎಂಬ್ರಾಯಿಡರಿ ಒಳಗೊಂಡಂತೆ ಡ್ರೆಸ್ ಮೇಕಿಂಗ್ ಬಗ್ಗೆ ಲೋಕ ಶಿಕ್ಷಣ ನಿರ್ದೇಶ ನಾಲಯದ ಯಗಚಿ ವಿದ್ಯಾಪೀಠ, ಕಂದಲಿ, ಹಾಸನ ತಾ. ಇಲ್ಲಿ ನ. 5 ರಿಂದ ಉಚಿತವಾಗಿ ತರಬೇತಿ ನೀಡಲು ಅರ್ಜಿ ಕರೆಯಲಾಗಿದೆ. ಆಸಕ್ತಿಯುಳ್ಳವರು ಅರ್ಜಿ ಸಲ್ಲಿಸಬಹುದು ಎಂದು ಕಂದಲಿ ಯಗಚಿ ವಿದ್ಯಾ ಪೀಠದ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ತರಬೇತಿ ಅವಧಿ 5 ತಿಂಗಳು. ತರಬೇತಿ ವಸತಿ ರಹಿತ ಆಗಿರುತ್ತದೆ. ಮಹಿಳಾ ಅಭ್ಯರ್ಥಿಗಳು 7 ನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ ವ್ಯಾಸಂಗ ಮಾಡಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು. ವಯಸ್ಸು 18 ರಿಂದ 35. ತರಬೇತಿ ಅವಧಿಯಲ್ಲಿ 500 ರು. ಶಿಷ್ಯವೇತನ ನೀಡಲಾಗುವುದು. ನೇರ ಸಂದರ್ಶನ ಮೂಲಕ ಆಯ್ಕೆ ಕೊಳ್ಳಲಾಗುವುದು.
ಕಡೆಯ ದಿನಾಂಕ ಅ.30. ಅರ್ಜಿ ಸಲ್ಲಿಸಿದವರು ಅ.31 ರ ಬೆಳಗ್ಗೆ 11.30 ಕ್ಕೆ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ದಾಖಲಾತಿಗಳೊಂದಿಗೆ ಯಗಚಿ ವಿದ್ಯಾ ಪೀಠದ ಕಚೇರಿಯಲ್ಲಿ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಆಚಾರ್ಯರು, ಯಗಚಿ ವಿದ್ಯಾಪೀಠ ಇವರನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ದೂ. 08172-266387 ಮತ್ತು 269958 ಎಂದು ತಿಳಿಸಿದ್ದಾರೆ.
ಪತ್ರಿಕೋದ್ಯಮ ಪದವೀಧರರಿಗೆ ಕೌಶಲ್ಯ ತರಬೇತಿ
ಹಾಸನ: ವಾರ್ತಾ ಇಲಾಖೆಯು 2013-14ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿ ಕೌಶಲ್ಯ ತರಬೇತಿ ಕಾರ್ಯಕ್ರಮ ಹಾಗೂ ನಿರೂಪಣಾ ಕೌಶಲ್ಯ ತರಬೇತಿ ಕಾರ್ಯಕ್ರಮ ಏರ್ಪಡಿಸುತ್ತಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನು ಆಹ್ವಾನಿಸಿದೆ.
ಅಭ್ಯರ್ಥಿ ಪತ್ರಿಕೋದ್ಯಮ, ಸಮೂಹ ಸಂವಹನ ವಿದ್ಯುನ್ಮಾನ ಮಾಧ್ಯಮ ವಿಷಯದಲ್ಲಿ ಶೇಕಡ 50ರಷ್ಟು ಅಂಕದೊಂದಿಗೆ ಪದವಿ, ಸಾತಕ ಪದವಿ, ಪಿ.ಜಿ ಡಿಪ್ಲೊಮಾ ಪಡೆದಿರಬೇಕು. ಅಭ್ಯರ್ಥಿ 18 ರಿಂದ 35 ವರ್ಷ ವಯೋವುತಿಯಲ್ಲಿರಬೇಕು. ನಿಗದಿತ ನಮೂನೆಯಲ್ಲಿ ಸ್ವವಿವರಗಳೊಂದಿಗೆ ಅ.31 ರೊಳಗಾಗಿ ಭರ್ತಿ ಮಾಡಿದ ಅರ್ಜಿಯನು ಅಗತ್ಯ ದಾಖಲಾತಿಗಳೊಂದಿಗೆ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, ಸಂ.17, ಭಗವಾನ ಮಹಾವೀರ ರಸ್ತೆ, ಬೆಂಗಳೂರು 560001 ಇಲ್ಲಿಗೆ ಸಲ್ಲಿಸಬೇಕು.ಅರ್ಜಿಯನು ಅಂತರ್ಜಾಲ ತಾಣ www.karnatakavarthe.org ಯಿಂದ ಪಡೆಯಬಹುದು.