ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಬ್ಬರು ಕದೀಮರ ಸೆರೆ: ಚಿನ್ನಾಭರಣ ವಶ

Srinivasa Murthy VN
Updated On : 26 Oct 2013, 12:13 pm

ಅರಸೀಕೆರೆ: ತಾಲೂಕಿನ ಮಾಲೇಕಲ್ ತಿರುಪತಿ, ಶಶಿವಾಳ, ಹರಳಕಟ್ಟ, ಹುಲ್ಲೇಕೆರೆ, ಜಾವಗಲ್, ಬೇಲೂರು ತಾಲೂಕಿನ ಹಗರೆ, ಹೊಸ ಉತ್ಪಾತನಹಳ್ಳಿ ಹಾಗೂ ಹಾಸನ ತಾಲೂಕಿನ ನಿಟ್ಟೂರು ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಳ್ಳತನದ ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಇಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸುವ ಮೂಲಕ ಸುಮಾರು 6.5 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಐ.ಜಿ.ಮಂಜುನಾಥ್, ವೃತ್ತ ನಿರೀಕ್ಷಕ ಗಂಗಾಧರಪ್ಪ ಮಾರ್ಗದರ್ಶನದಲ್ಲಿ ಎಸ್‌ಐ ಸುನಿಲ್, ಇನ್ನಿತರ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಹಾವೇರಿ ತಾಲ್ಲೂಕಿನ ಕುರುಗುಂಡ ಗ್ರಾಮದ ಗಣೇಶ (18) ಹಾಗೂ ಕಡೂರು ತಾಲೂಕಿನ ಸಿಂಗಟಗೆರೆ ಮಹಮ್ಮದ್ (19)ನನ್ನು ಬಂಧಿಸಲಾಗಿದೆ.ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಸುಮಾರು 90 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಆಭರಣಗಳು, ಮೊಬೈಲಲ್ಪೋನ್ಗ್‌ಳು, ದ್ವಿಚಕ್ರ ವಾಹನಗಳು ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಪತ್ತೆಹಚ್ಚಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

'ಗ್ರಾಮ ಮಟ್ಟದಲ್ಲೇ ಗಣಕ ತರಬೇತಿ ಅಗತ್ಯ'
ಹೊಳೆನರಸೀಪುರ:
ರಾಜ್ಯ ಸರ್ಕಾರವು ಎಲ್ಲಾ ವರ್ಗದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವರ ಗ್ರಾಮ ಮಟ್ಟದಲ್ಲೇ ಉಚಿತವಾಗಿ ಕಂಪ್ಯೂಟರ್ ಬಳಕೆಯ ಕುರಿತಂತೆ ತರಬೇತಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಾಹಿತಿ ತಂತ್ರಜ್ಞಾನದ ಅಸಮತೋಲನ ಹೋಗಲಾಡಿಸಬೇಕಾಗಿದೆ ಎಂದು ತಾಲೂಕಿನ ಹಳ್ಳಿ ಮೈಸೂರು ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಟಿ. ರವಿಕುಮಾರ್ ತಿಳಿಸಿದರು.
ಅವರು ಮಂಗಳವಾರ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ವಿಭಾಗದ ವತಿಯಿಂದ ಏರ್ಪಡಿಸಿದ್ದ ಇ-ಮೇಲ್ ಖಾತೆ ನಿರ್ವಹಣೆ ಮತ್ತು ಸಾಮಾಜಿಕ ಜಾಲತಾಣಗಳ ಬಗೆಗಿನ ಅರಿವು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಎಚ್.ಜೆ. ಬೋರಯ್ಯ ಮಾತನಾಡಿ, ಮಾಹಿತಿ ತಂತ್ರಜ್ಞಾನವು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಮಹತ್ವ ಹೊಂದಿದ್ದು, ಕೇವಲ ಅಕ್ಷರ ಜ್ಞಾನ ಹೊಂದಿದವನು ಮಾತ್ರವೇ ಅಕ್ಷರಸ್ಥ ಎನಿಸಿಕೊಳ್ಳುವುದಿಲ್ಲ. ಬದಲಾಗಿ ಕಂಪ್ಯೂಟರ್ ಜ್ಞಾನವನ್ನು ಉಳ್ಳವರು ಮಾತ್ರವೇ ಸಾಕ್ಷರರು ಎನಿಸಿಕೊಳ್ಳಲು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಇಂದು ತಂತ್ರಜ್ಞಾನವೆಂಬುದು ಅತಿ ಹೆಚ್ಚಿನ ಅವಶ್ಯಕತೆಯಂತೆ ಬೆಳೆದು ನಿಂತಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿ ಉತ್ತಮ ವಿದ್ಯಾಭ್ಯಾಸ, ಉದ್ಯೋಗ ಮತ್ತಿತರ ಸೌಲಭ್ಯ ಪಡೆಯಲು ಇ-ಮೇಲ್ ಖಾತೆ ಅವಶ್ಯಕ ಎಂದು ತಿಳಿಸಿದರು.
ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ಇತರ ಉಪನ್ಯಾಸಕರು ಇದ್ದರು. ಗ್ರಂಥಪಾಲಕ ಎಂ.ಸಿ. ವಿನೋದ್‌ಕುಮಾರ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಕೆ. ಶಿವರಾಜು ವಂದಿಸಿದರು.

ಕಸಾಪ ಜಿಲ್ಲಾಧ್ಯಕ್ಷರ ವಿರುದ್ಧ ಕ್ರಮ ಜರುಗಿಸಿ: ಓಭಳೇಶಘಟ್ಟಿ
ಸಕಲೇಶಪುರ:
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಜನಾರ್ದನ್ ವಿರುದ್ಧ ರಾಜ್ಯಾಧ್ಯಕ್ಷರು ಕ್ರಮಕೈಗೊಳ್ಳ ಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ  ಓಭಳೇಶಘಟ್ಟಿ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಸಾಪ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಸರ್ವ ಸದಸ್ಯರ ಒಪ್ಪಿಗೆ ಪಡೆಯದೆ ಸರ್ವಾಧಿಕಾರಿ  ಧೋರಣೆ ತೋರಿ ತಮ್ಮಿಷ್ಟದಂತೆ ಅಧ್ಯಕ್ಷರ ಆಯ್ಕೆ ನಡೆಸಿದ್ದಾರೆ ಎಂದು ದೂರಿದ್ದಾರೆ.ಕಳೆದ ಬಾರಿ ಸಹ ಅಧ್ಯಕ್ಷರ ಆಯ್ಕೆ ವಿಚಾರದಲ್ಲೂ ಇದೇ ರೀತಿಯ ಧೋರಣೆ ಪ್ರದರ್ಶಿಸಿದ್ದರು. ಇದರಿಂದ ತಾಲೂಕಿನಲ್ಲಿ ಸಾಹಿತ್ಯ ಪರಿಷತ್ ಕ್ಷೀಣಿಸಿದ್ದು ಮತ್ತೆ ಹೊಸದಾಗಿ ಅಸ್ತಿತ್ವ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಆಯ್ಕೆ ಜಿಲ್ಲಾಧ್ಯಕ್ಷರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಾಣಿಘಟ್ಟಿ ಮತ್ತತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement