ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂಗೆ ಅಂಗಮಾರಿ: ರೈತರ ಸಂಕಷ್ಟ

Srinivasa Murthy VN
Updated On : 19 Sept 2013, 12:34 pm

-ಪಿ.ರವಿಕುಮಾರ್
ಹಾಸನ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಆಲೂ ಬೆಳೆಗೆ ಕಳೆದ 5 ವರ್ಷಗಳಿಂದ ಮಹಾಮಾರಿ ಅಂಗಮಾರಿ ರೋಗ ಆವರಿಸಿ ಆಲೂಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ಅನ್ನದಾತ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾನೆ.
ರೈತರು ಆಲೂ ಬೆಳೆಯನ್ನು ಬಹು ವರ್ಷಗಳಿಂದ ಬೆಳೆದುಕೊಂಡು ಬರುತ್ತಿದ್ದಾರೆ. ಪ್ರಾರಂಭದಲ್ಲಿ ಈ ಬೆಳೆ ರೈತರಿಗೆ ಲಾಭದಾಯವಾಗಿತ್ತು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಬೆಳೆಗೆ ಅಂಗಮಾರಿ ರೋಗ ಅವರಿಸಿದ ಪರಿಣಾಮ ಬೆಳೆ ಸಂಪೂರ್ಣವಾಗಿ ನಾಶವಾಗುತ್ತಿದೆ. ಇದು ಒಂದು ರೀತಿಯಲ್ಲಿ ಜೂಜಿನ ಬೆಳೆಯಾಗಿ ಪರಿಣಮಿಸಿದೆ.
ವರ್ಷಾರಂಭದಲ್ಲಿ ಕಾಲಕ್ಕೆ ಸರಿಯಾಗಿ ಮಳೆಯಾದರೆ ರೈತರು ಬೆಳೆಗೆ ಅನುಕೂಲವಾಗುವ ರೀತಿಯಲ್ಲಿ ಭೂಮಿಯನ್ನು ಹದಗೊಳಿಸುತ್ತಾರೆ. ಜೂನ್ ವೇಳೆಗೆ ಆಲೂ ಬಿತ್ತನೆ ಮಾಡುತ್ತಾರೆ. ಬಿತ್ತನೆ ಆಲೂಗಡ್ಡೆಯನ್ನು ಶೀಥಲಗೃಹಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಪಂಜಾಬ್ ಸೇರಿದಂತೆ ನಾನಾ ರಾಜ್ಯಗಳಿಂದ ಬಿತ್ತನೆ ಆಲೂ ಬೀಜವನ್ನು ವರ್ತಕರು ತರಿಸಿ ಶೀಥಲಗೃಹದಲ್ಲಿ ದಾಸ್ತಾನು ಮಾಡುತ್ತಾರೆ.
ಶೀಥಲಗೃಹದಿಂದ ಬಿತ್ತನೆಗೆಂದು ತರುವ ಆಲೂಗಡ್ಡೆಯನ್ನು ರೃತರು 8 ರಿಂದ 10 ದಿನಗಳ ಕಾಲ ಅದನ್ನು ಗಾಳಿಗೆ ಹರಡುತ್ತಾರೆ. ನಂತರ ಹರಡಿದ ಆಲೂಗಡ್ಡೆಯನ್ನು ಬಿತ್ತನೆ ಮಾಡಲಾಗುತ್ತದೆ. ಬಿತ್ತನೆ ಮಾಡಿದ 4 ತಿಂಗಳಲ್ಲಿ ಆಲೂ ಬೆಳೆ ಕೃಗೆ ಬರುತ್ತದೆ.
ಆದರೆ ಕಳೆದ ಕೆಲವು ವರ್ಷಗಳಿಂದ ಆಲೂ ಬೆಳೆಗೆ ಅಂಗಮಾರಿ ರೋಗದಿಂದ ನಾಶ ಹೊಂದುತ್ತಿರುವುದರಿಂದ  ರೈತರು ಸಂಕಷ್ಟಕ್ಕೆ ಸಿಲುಕಿ, ಈ ಸಂಬಂಧ ಅನೇಕ ರೃತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
ಕಳೆದ ನಾಲ್ಕೈದು ವರ್ಷಗಳಿಂದ ಆಲೂ ಬೆಳೆ ನಾಶದಿಂದ ಕೃಸುಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ರೃತ ಕುಟುಂಬಕ್ಕೆ ಸರ್ಕಾರದಿಂದ ಇಂದಿಗೂ ಸೂಕ್ತ ಪರಿಹಾರ ನೀಡಿಲ್ಲ. ಆದಾಗ್ಯೂ ರೃತರು ಸಾಂಪ್ರದಾಯಿಕ ಆಲೂ  ಬೆಳೆಯುವ ಕಾರ್ಯದಲ್ಲಿ ಹಿಂದೆ ಸರಿದಿಲ್ಲ. ಆದರೂ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಜಿಲ್ಲೆಯಲ್ಲಿ ಆಲೂ ಬೆಳೆ ಕೃಗೊಂಡು ಬೆಳೆಗೆ ಅಂಗಮಾರಿ ರೋಗ ತಗುಲಿ ಬೆಳೆ ಬಾರದೆ ಕೈಸುಟ್ಟುಕೊಂಡ ಕೆಲವು ರೈತರು ಇತರೆ ಬೆಳೆಯತ್ತ ಮುಖ ಮಾಡದೆ ಈ ಸಾಂಪ್ರದಾಯಿಕ ಬೆಳೆ ಬೆಳೆಯುವತ್ತ ಮುಂದಾಗಿದ್ದಾರೆ.
ಕಳೆದ 3 ವರ್ಷಗಳಿಂದ ಭೀಕರ ಬರಗಾಲದಿಂದ ತತ್ತರಿಸಿ ಹೋಗಿದ್ದ ಜಿಲ್ಲೆಯ ಜನತೆ ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಉತ್ತಮ ಬೆಳೆ ತೆಗೆಯಬಹುದೆಂದು ಸಂತಸಪಟ್ಟಿದ್ದರು. ಆದರೆ ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದಾಗಿ ಅನ್ನದಾತ ಬಿತ್ತಿದ್ದ ಆಲೂ ಬೆಳೆ ಸಂಪೂರ್ಣವಾಗಿ ನಾಶವಾಗಿದೆ. ಜೊತೆಗೆ ನಕಲಿ ಬಿತ್ತನೆ ಬೀಜದಿಂದಾಗಿ ಬೆಳೆ ನಾಶವಾಗಿದ್ದರೆ ಮತ್ತೆ ಕೆಲವು ಕಡೆಗಳಲ್ಲಿ ಬಿತ್ತನೆ ಆಲೂ ಕೊಳೆತು ಹೋಗಿದೆ. ಆಲೂ ಬೆಳೆಗೆ ಅಂಗಮಾರಿ ರೋಗವನ್ನು ತಡೆಗಟ್ಟುವಲ್ಲಿ ಸಂಬಂಧಪಟ್ಟ ಇಲಾಖೆಗಳು ಹಲವು ರೀತಿಯಲ್ಲಿ ಸಾಹಸ ಪಟ್ಟರೂ ರೋಗವನ್ನು ತಡೆಗಟ್ಟುವಲ್ಲಿ ಯಶಸ್ಸು ಪಡೆದಿಲ್ಲ. ತೋಟಗಾರಿಕೆ ಇಲಾಖೆಯವರು ಆಲೂ ಬೆಳೆಗೆ ಅಂಗಮಾರಿ ತಗುಲದಂತೆ ರೈತರಿಗೆ ಕರಪತ್ರ ಮತ್ತು ಆಟೋಗಳ ಮೂಲಕ ಹಳ್ಳಿಹಳ್ಳಿಗಲ್ಲಿ ಯಾವ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದರೂ ರೋಗವನ್ನು ಕಿಂಚಿತ್ತೂ ನಿಯಂತ್ರಣಕ್ಕೆ ತರಲು ಇಲಾಖೆಯಿಂದ ಸಾಧ್ಯವಾಗಿಲ್ಲ.
ಒಂದೆಡೆ ಆಲೂ ಬೆಳೆಗೆ ಅಂಗಮಾರಿ ರೋಗ ಆವರಿಸಿದ್ದರೆ ಮತ್ತೊಂದೆಡೆ ಅತಿವೃಷ್ಟಿಯಿಂದಾಗಿ ಬೇರೆ ಯಾವ ಬೆಳೆಯೂ ಬಾರದೆ, ಅನ್ನದಾತ ಅನಿವಾರ್ಯವಾಗಿ ಸರ್ಕಾರದ ಸಹಾಯ ಹಸ್ತ ಕೋರಿದ್ದಾನೆ.
ಒಟ್ಟಾರೆ ಜಿಲ್ಲೆಯಲ್ಲಿ ವರ್ಷದ ಪ್ರಾರಂಭದಲ್ಲಿ ಬಿದ್ದ ಮಳೆಯಿಂದ ರೈತರ ಹರ್ಷಕ್ಕೆ ಕಾರಣವಾಗಿದ್ದು, ತದನಂತರ ಅತೀಯಾದ ಮಳೆಯಿಂದ ಬೆಳೆ ಕರಗಿ ಹೋಗಿ ಅನ್ನದಾತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಆಲೂಗಡ್ಡೆ ಪ್ಯಾಕೇಜ್‌ಗೆ ಆಗ್ರಹ:  ಆಲೂ ಬೆಳೆಗೆ ನಾಲ್ಕೈದು ವರ್ಷಗಳಿಂದ ಅಂಗಮಾರಿ ರೋಗ ಆವರಿಸಿ ಸಂಪೂರ್ಣ ನಾಶವಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಪ್ಯಾಕೇಜ್ ನೀಡುವಂತೆ ಸರ್ಕಾರದ ಸಹಾಯ ಹಸ್ತ ಚಾಚಿದ್ಧಕ್ಕೆ ಸರ್ಕಾರ 5 ಸಾವಿರ ರು.ಗಳ ಪ್ಯಾಕೇಜ್ ನೀಡುತ್ತಿದೆ. ಆದರೆ ಈ ಪ್ಯಾಕೇಜ್‌ನಲ್ಲಿ ನೇರವಾಗಿ ರೈತರಿಗೆ ಹಣವನ್ನು ನೀಡದ ಕಾರಣ  ಅಸಮಾಧಾನ ಉಂಟಾಗಿದೆ. ಹೆಚ್ಚಿನದಾಗಿ ಗೊಬ್ಬರ ಮಾದರಿಯಲ್ಲಿ ಪ್ಯಾಕೇಜ್ ನೀಡುತ್ತಿರುವುದರ ಬದಲಾಗಿ ನೇರವಾಗಿ 5 ಸಾವಿರ ರು. ನೀಡಲು ರೈತರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement