ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾನಪದ ಕಲೆ ಪುನರುತ್ಥಾನಕ್ಕೆ ಕರೆ

Srinivasa Murthy VN
Updated On : 19 Sept 2013, 12:35 pm

ಹೊಳೆನರಸೀಪುರ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಜಾನಪದದ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ನಶಿಸುವ ಹಂತ ತಲುಪಿರುವ ಜಾನಪದ ಕಲೆಯನ್ನು ಪುನರುತ್ಥಾನಗೊಳಿಸುವತ್ತ ಮುಂದಾಗುವಂತೆ ಇಲ್ಲಿನ ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕು ಜಾನಪದ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಾನಪದ ವೇದಿಕೆ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗ್ರೀನ್‌ವುಡ್ ಆಂಗ್ಲ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನಪದ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಕಲೆಯು ಉಳಿದಿರುವುದು ಕೇವಲ ಗ್ರಾಮೀಣ ಭಾಗಗಳಲ್ಲಿ ಮಾತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಸೋಗಿಗೆ ಒಳಗಾಗಿ ಯುವ ಜನತೆ ನಮ್ಮ ಜನಪದೀಯ ಸಂಸ್ಕೃತಿಯನ್ನು ನಿರ್ಲಕ್ಷಿಸುತ್ತಿರುವ ಕಾರಣ ಜನಪದೀಯ ಕಲೆ, ಆಟ, ಸಂಸ್ಕೃತಿ ಮೂಲೆಗುಂಪಾಗುತ್ತಿದೆ ಎಂದು ವಿಷಾದಿಸಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯೋಪಾಧ್ಯಾಯಿನಿ ಎ.ಎನ್.ಪ್ರಸವಿಯವರು ಮಾತನಾಡಿ, ಜಾನಪದ  ಪ್ರಾಚೀನ ಕಲೆ. ಅಂದಿನಿಂದಲೂ ಇಂದಿನವರೆವಿಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಾಸು ಹೊಕ್ಕಾಗಿರುವ ಜೊತೆಗೆ ನಮ್ಮ ಸಂಸ್ಕೃತಿಯನ್ನು ಹೆಚ್ಚು ಹೆಚ್ಚಾಗಿ ಶ್ರೀಮಂತಗೊಳಿಸಿದ ಕೀರ್ತಿ ಜಾನಪದಕ್ಕಿದೆ ಎಂದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಜಾನಪದ ವೇದಿಕೆಯ ಸಂಚಾಲಕ ಡಾ.ಬಿ.ಸಿ.ಮಲ್ಲೇಶ್ ಮಾತನಾಡಿ, ಜಾನಪದ ಕಲೆಗಳ ಮಹತ್ವ, ಅವುಗಳು ನಡೆದುಬಂದ ಹಾದಿ ಹಾಗೂ ಅವುಗಳ ಉಳಿವಿಗೆ ನಮ್ಮ ಹಕ್ಕುಬಾಧ್ಯತೆಗಳ ಕುರಿತಂತೆ ಮಾಹಿತಿ ನೀಡಿದರು.  ಜಾನಪದ ಪರಿಷತ್ ಅಧ್ಯಕ್ಷ ಬಾ.ರಾ.ಸುಬ್ಬರಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯಿನಿ ಮಂಜುಳ, ಪ್ರೇಮಾ ಮಂಜುನಾಥ್, ರೂಪಾಮುಕುಂದ್, ಕಾವ್ಯಶ್ರೀ ಕೃಷ್ಣ, ದಿಲೀಪ್‌ಕುಮಾರ್ ಇದ್ದರು. ಜಾನಪದ ನೃತ್ಯದಲ್ಲಿ ನವೀದ್ ತಂಡ-ಪ್ರಥಮ, ಸ್ಫೂರ್ತಿ ತಂಡ-ದ್ವಿತೀಯ, ಸಿಂಧೂ ತಂಡ-ತೃತೀಯ ಬಹುಮಾನ ಪಡೆದರು. ಲಿಖಿತಾ ತಂಡವು ವಿಶೇಷ ಬಹುಮಾನ ಪಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement