ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೊಲೀಸರ ಕೊರತೆ: ಸಕಾಲಕ್ಕೆ ಕೋರ್ಟ್‌ಗೆ ಹಾಜರಿಯಿಲ್ಲ...

Srinivasa Murthy VN
Updated On : 19 Sept 2013, 12:36 pm

ಕನ್ನಡಪ್ರಭ ವಾರ್ತೆ ಹಾಸನ ಸೆ. 18
ಪೊಲೀಸರ ಕೊರತೆ ಸಿಕ್ಕಾಪಟ್ಟೆ ಇದೆ ಸಾರ್... ನ್ಯಾಯಾಲಯಕ್ಕೆ ಕಾಲ ಕಾಲಕ್ಕೇ ಕರೆದುಕೊಂಡು ಹೋಗಲು ಆಗುತ್ತಿಲ್ಲ. ಇದರಿಂದಾಗಿ ವಿಚಾರಣೆ ಹಾಜರಾಗಲು ಆಗದೇ ಹೆಚ್ಚು ಕಾಲ ಜೈಲಿನಲ್ಲಿ ಕೊಳೆಯುವಂತಾಗಿದೆ.
ಇದು ಹಾಸನ ನಗರದ ಕಾರಾಗೃಹದಲ್ಲಿರುವ ಕೈದಿಗಳು ಬುಧವಾರ ಜೈಲಿಗೆ ಭೇಟಿ ನೀಡಿದ್ದ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗುಂದ ಬಳಿ ತೋಡಿಕೊಂಡ ಅಳಲು.
 ಹುನುಗುಂದ ಅವರು, ಪುರುಷ ಮತ್ತು ಮಹಿಳೆ ಕೈದಿಗಳ ಕುಂದುಕೊರತೆ ವಿಚಾರಿಸಿ, ಕೈದಿಗಳನ್ನು ನೇರವಾಗಿ ಮಾತನಾಡಿ ಜೈಲಿನ ಸಮಸ್ಯೆ ಹಾಗೂ ಅವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.  
 ಸದಸ್ಯರಿಗೆ ಕೆಲ ಕೈದಿಗಳು ತಾವು ತಪ್ಪು ಮಾಡದಿದ್ದರೂ ನಮ್ಮನ್ನು ಜೈಲಿಗೆ ಹಾಕಲಾಗಿದೆ. ಅಷ್ಟೇ ಅಲ್ಲದೆ ವಿಚಾರಣೆಗೆಂದು ಕರೆದುಕೊಂಡು ಬಂದು ಜೈಲಿಗೆ ಹಾಕಲಾಗಿದೆ  ಹಾಗೂ ಇತರೆ ದೂರುಗಳನ್ನು ತೋಡಿಕೊಂಡರು.
 ಜೊತೆಗೆ ಜೈಲಿನಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಬೇಕಾದ ಪೊಲೀಸ್ ಸಿಬ್ಬಂದಿ ಇಲ್ಲ. ಈ ಸಮಸ್ಯೆ ಇರುವುದರಿಂದ ತಮ್ಮನ್ನು ಸರಿಯಾದ ವೇಳೆಗೆ ಕೋರ್ಟ್ ಮುಂದೆ ಹಾಜರು ಪಡಿಸಲು ಸಾಧ್ಯವಾಗುತ್ತಿಲ್ಲ.  
 ವರ್ಷಕ್ಕೆ ಮೂರ್ನಾಲ್ಕು ಬಾರಿ ಮಾತ್ರ ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತಿದೆ. ಪರಿಣಾಮವಾಗಿ ಬೇಗ ಮುಗಿಯುವಂತಹ ಪ್ರಕರಣಗಳು ನಿಧಾನವಾಗುತ್ತಿವೆ.. ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗಲು ಭಾರೀ ತೊಂದರೆ ಉಂಟಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು.
ಜೈಲ್ ಗೋಡೆ ಕುಸಿಯುವ ಭೀತಿ:   ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹುನುಗುಂದ ಅವರು, ಜೈಲಿನ ಕಟ್ಟಡ ಮತ್ತು ಗೋಡೆ ತುಂಬಾ ಹಳೆಯದಾಗಿದ್ದು, ಹೇಳಿಕೊಳ್ಳುವ ಭದ್ರತೆ ಇಲ್ಲದಾಗಿದೆ. ಜೈಲಿನ ಗೋಡೆ ಕುಸಿಯುವ ಭೀತಿಯ ಇದೆ. ಕಟ್ಟಡ ಹಳೇದಾಗಿರುವುದರಿಂದ ಗೋಡೆಗಳೆಲ್ಲಾ ಪಾಚಿ ಕಟ್ಟಿವೆ. ಜೈಲ್ ಗೋಡೆಯ ಮೇಲೆ ಕಬ್ಬಿಣದ ಕಂಬ ನೆಟ್ಟು ತಂತಿ ಬೇಲಿ ಅಳವಡಿಸಬೇಕು. ಆದರೆ ಆ ಕೆಲಸ ಮಾಡಲು ಮುಂದಾದರೆ ಗೋಡೆಯೇ ಕುಸಿದು ಬೀಳುವಂತಹ ಪರಿಸ್ಥಿತಿ ಇದೆ ಎಂದರು.
 ಈ ಹಿನ್ನೆಲೆಯಲ್ಲಿ ಜೈಲ್ ಭದ್ರತೆಗಾಗಿ ಯಾವ ಕ್ರಮ ಕೈಗೊಳ್ಳಬೇಕು ಅನ್ನುವುದರ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದರು.
ಬ್ರಿಟಿಷರ ಕಾಲದಲ್ಲಿ 1897 ರಲ್ಲಿ ನಿರ್ಮಾಣ:   ಜೈಲ್ ಅಧೀಕ್ಷಕ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾ ಕಾರಾಗೃಹವು ಬ್ರಿಟಿಷರ ಕಾಲದಲ್ಲಿ 1897 ರಲ್ಲಿ ನಿರ್ಮಾಣವಾಗಿದ್ದು, 6 ಬ್ಲಾಕ್ ಜೊತೆಗೆ 4 ಸೆಲ್ ಇದೆ. 219 ಖೈದಿಗಳಷ್ಟೇ  ಇಲ್ಲಿ ಉಳಿದುಕೊಳ್ಳಬಹುದು. ಆದ್ರೆ ಹಾಲಿ ಜೈಲ್‌ನಲ್ಲಿ 328 ಖೈದಿಗಳಿದಾದಾರೆ.  
 ಇಷ್ಟೂ ಕೈದಿಗಳನ್ನು ನೋಡಿಕೊಳ್ಳಲು ಇರೋದು ಅಧೀಕ್ಷಕ ಸೇರಿ ಕೇವಲ 28 ಮಂದಿ ಮಾತ್ರ. ಇನ್ನೂ 10 ಮಂದಿಯ ಕೊರತೆ ಇದೆ. ಇದು ಒಳಗಿನ ಸಮಸ್ಯೆಯಾದ್ರೆ, ಶಿಥಿಲ ಜೈಲ್ ಗೋಡೆ  ಯಾವಾಗ ಬೀಳುತ್ತದೋ ಗೊತ್ತಿಲ್ಲ.
  ಈ ಸ್ಥಿತಿಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೆಲ ಖೈದಿ ಗಾಂಜಾ, ಮದ್ಯ, ಮೊಬೈಲ್ ಇತ್ಯಾದಿಗಳನ್ನು ಜೈಲ್ ಒಳ ಎಸೆಯುವ ಯತ್ನ ಮಾಡುತ್ತಿದ್ದಾರೆ. ಈ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
 ಚಿಕ್ಕದಾದ ಕೋಣೆಯಲ್ಲೇ 18 ಮಹಿಳಾ ಕೈದಿಗಳು ಹಾಗೂ ಒಂದು ಮಗು ಇದೆ ಎಂದ ಅವರು, ಹೊಸ ಜೈಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಂತಿಗ್ರಾಮದ ಸಮೀಪ ರಂಗನಾಥಪುರ ಗ್ರಾಮದ ಜಾಗವನ್ನು ಗುರುತಿಸಲಾಗಿದೆ. ಅದು ಪ್ರಗತಿಯಲ್ಲಿದೆ ಎಂದು ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement