ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಫಿ ಮಂಡಳಿ ಅಧಿಕಾರಿಗಳ ವಿರುದ್ಧ ಕರ್ತವ್ಯ ಚ್ಯುತಿ ನಿರ್ಣಯ

Srinivasa Murthy VN
Updated On : 19 Sept 2013, 10:10 am

ಸಕಲೇಶಪುರ: ಕಾಫಿ ಮಂಡಳಿ ಅಧಿಕಾರಿಗಳ ವಿರುದ್ಧ ಕರ್ತವ್ಯ ಚ್ಯುತಿ ನಿರ್ಣಯವನ್ನು ತಾಲೂಕು ಪಂಚಾಯ್ತಿ ತ್ರೈಮಾಸಿಕ ಸಭೆಯಲ್ಲಿ ಕೈಗೊಳ್ಳಲಾಗಿದೆ. ಗುರುವಾರ ನಡೆದ ತಾಲೂಕು ಪಂಚಾಯ್ತಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಶಾಸಕ ಎಚ್.ಕೆ ಕುಮಾರಸ್ವಾಮಿ, ತಾಲೂಕಿನ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುವ ಕಾಫಿ ಬೆಳೆ ತಾಲೂಕಿನ ಪ್ರಮುಖ ವಾಣಿಜ್ಯ  ಬೆಳೆಯಾಗಿದೆ.
ಕಳೆದ ಜೂನ್, ಜುಲೈನಲ್ಲಿ ಸುರಿದ ಧಾರಾಕಾರ ಮಳೆಗೆ ಕಾಫಿ ಬೆಳೆ ಶೇ 75 ರಷ್ಟು ನಾಶವಾಗಿದೆ. ಈ ಬಗ್ಗೆ ಸ್ಥಳಕ್ಕೆ ತೆರಳಿ ವರದಿ ನೀಡುವಂತೆ ಕಾಫಿ ಮಂಡಳಿ ಅಧಿಕಾರಿಗಳಿಗೆ ತಿಳಿಸಿದ್ದರೂ ಇದುವರೆಗೆ ಯಾವುದೆ ಕಾಫಿ ತೋಟಗಳಿಗೆ ಬೇಟಿ ನೀಡಿ ವರದಿ ನೀಡಿಲ್ಲ.
ಜೊತೆಗೆ ಕೆಡಿಪಿ ಯಂತಹ ಪ್ರಮುಖ ಸಭೆಗಳಿಗೆ ಆಗಮಿಸುವಂತೆ ಮಾಹಿತಿ ನೀಡಿದ್ದರೂ ಸಹ ಗೈರು ಹಾಜರಾಗುವ ಮೂಲಕ ಉಡಾಫೆ ವರ್ತನೆ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕರ್ತವ್ಯ ಚ್ಯುತಿ ಹಾಗೂ ನಿರ್ಲಕ್ಷದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಕಾಫಿ ಮಂಡಳಿ ಹಿರಿಯ ಅಧಿಕಾರಿಗಳಿಗೆ ನಿರ್ಣಯವನ್ನು ಕಳುಹಿಸಿಕೊಡಲಾಗುವುದು ಎಂದು ಹೇಳಿದರು. ತಾಲೂಕಿನಲ್ಲಿ 4800 ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಬೆಳೆಯಲಾಗುತ್ತಿದ್ದು, ಇದರಲ್ಲಿ ಕೊಕ್ಕೆ ಕಂದು ರೋಗ  ಹಾಗೂ ಅತಿವೃಷ್ಟಿಯಿಂದಾಗಿ ಏಲಕ್ಕಿ ಬೆಳೆಯ ಶೇ.45 ರಷ್ಟು ಬೆಳೆ ನಷ್ಟವಾಗಿದೆ ಎಂಬ ವರದಿಯನ್ನು ಸಭೆಯಲ್ಲಿ  ಮಂಡಿಸಲಾಯಿತು. ತಾಲೂಕಿನಲ್ಲಿ 5 ಸಾವಿರ ಎಕರೆ ಭತ್ತದ ಗದ್ದೆಗಳು ನಾಶವಾಗಿದ್ದು ಪ್ರತಿ ಎಕರೆ ಭತ್ತದ ಗದ್ದೆಗೆ 1800 ರು. ಪರಿಹಾರ ನೀಡಲಾಗುತ್ತಿದ್ದು, ಈಗಾಗಲೇ 3918 ಅರ್ಜಿಗಳನ್ನು ಪರಿಹಾರ ಕೋರಿ ತಾಲೂಕು ಆಡಳಿತಕ್ಕೆ ಸಲ್ಲಿಸಲಾಗಿದೆ ಎಂಬ ವರದಿಯನ್ನು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಯೋಗೇಶ್ ತಿಳಿಸಿದರು. ತಾಲೂಕಿನಲ್ಲಿ ಶೇ.40 ರಷ್ಟು  ಹೆಚ್ಚುಮಳೆಯಾಗಿದ್ದು, ವಾಡಿಕೆ ಮಳೆ 1760 ಮಿ.ಮೀ. ಮಳೆಯಾಗಬೇಕಿದ್ದರೆ ಈ ಬಾರಿ 2935 ಮೀ.ಮೀ ಮಳೆಯಾಗಿದೆ ಎಂದು ಹೇಳಿದರು.

ಕಳವು ಆರೋಪಿ ಬಂಧನ
ಹೊಳೆನರಸೀಪುರ: ಪಟ್ಟಣದ ನಾನಾ ಬಡಾವಣೆಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಅಪರಾಧ ವಿಭಾಗದ ಪಿಎಸ್ಸೈ ಸವಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಇತ್ತೀಚೆಗೆ ಹೆಚ್ಚಿರುವ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಹಾಸನದ ಟಿಪ್ಪುನಗರ ವಾಸಿ  ಶಾಹೀದ್ ಉರುಫ್ ಮನ್ಸೂರ್ ಪಾಷಾ ಎಂಬಾತನನ್ನು ಬಂಧಿಸಲಾಗಿದೆ ಎಂದು   ತಿಳಿಸಿದ್ದಾರೆ. ಈತನು ಪಟ್ಟಣದ ವೆಂಕಟೇಶ್ವರ ಬ್ಲಾಕ್, ಹೇಮಾವತಿ ಬಡಾವಣೆ, ಹೌಸಿಂಗ್ ಬೋರ್ಡ್‌ಗಳಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿಯಿಂದ ಪೊಲೀಸರು, 1.45ಲಕ್ಷ ರು ಮೌಲ್ಯದ 46ಗ್ರಾಂ ಚಿನ್ನದ ಆಭರಣ ಹಾಗೂ 556 ಗ್ರಾಂನಷ್ಟು ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement