ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬೇಡಿಕೆ ಪ್ರಮಾಣದಷ್ಟು ಹಂದಿ ಮಾಂಸ ಸಿಗ್ತಾ ಇಲ್ಲ

Srinivasa Murthy VN
Updated On : 19 Sept 2013, 10:11 am

ಕ.ಪ್ರ.ವಾರ್ತೆ ಹಾಸನ ಸೆ.19
ಜಿಲ್ಲೆಯಲ್ಲಿ ಹಂದಿ ಮಾಂಸ ಸೇವನೆ ಹೆಚ್ಚಾಗಿದ್ದು, ಸ್ಥಳೀಯವಾಗಿ ಬೇಡಿಕೆಯನ್ನು ಪೂರೈಸಲಾಗುತ್ತಿಲ್ಲ ಎಂದು   ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಶ್ರೀನಿವಾಸ್ ತಿಳಿಸಿದರು.
ಹಾಸನ ಪಶುವೈದ್ಯಕೀಯ ಕಾಲೇಜಿನಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಿದ್ದ ಆಧುನಿಕ ಹಂದಿ ಸಾಕಾಣಿಕೆ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಎನ್. ನರಸಿಂಹಮೂರ್ತಿ ಮಾತನಾಡಿ, ಹಂದಿಯ ಪ್ರತಿಯೊಂದು ಭಾಗವು ಉಪಯೋಗಕ್ಕೆ ಬರುತ್ತದೆ ಮತ್ತು ಉತ್ತಮ ತಳಿ ಸಾಕುವುದರ ಜೊತೆಗೆ ಸ್ಥಳೀಯ ತಳಿಗಳನ್ನು ಮೇಲ್ದರ್ಜೆಗೆ ಏರಿಸುವುದರಿಂದ ಆರ್ಥಿಕ ಸಬಲತೆ ಮತ್ತು ಆಹಾರ ಭದ್ರತೆ ಹೊಂದಬಹುದೆಂದು ತಿಳಿಸಿದರು.
ಹೇಮಾವತಿ ಹಂದಿ ಸಾಕಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ನಾಗೇಂದ್ರ ಮಾತನಾಡಿ, ರೈತರು ಹಂದಿ ಸಾಕಾಣಿಕೆಯಲ್ಲಿ ಆಧುನಿಕ ವಿಧಾನ ಅಳವಡಿಸಿಕೊಳ್ಳಲು ಕರೆ ನೀಡಿದರು.
ಶೈಕ್ಷಣಿಕ ಜಾನುವಾರು ಸಾಕಾಣಿಕೆ ಸಂಕೀರ್ಣ ವಿಭಾಗದ ಮುಖ್ಯಸ್ಥ ಡಾ.ಎಂ.ಸಿ. ಶಿವಕುಮಾರ್ ಸ್ವಾಗತಿಸಿದರು.  ಡೀನ್ ಡಾ. ಎಚ್. ಎನ್. ನರಸಿಂಹಮೂರ್ತಿ, ಉಪ ನಿರ್ದೇಶಕ ಡಾ. ಪಿ. ಶ್ರೀನಿವಾಸು ಉದ್ಘಾಟಿಸಿದರು. ಉದ್ಘಾಟನಾ ಭಾಷಣ ಮಾಡಿದ ಡಾ. ಪಿ. ಶ್ರೀನಿವಾಸು ಹಂದಿ ಸಾಕಾಣಿಕೆದಾರರಿಗೆ ಇಲಾಖೆಯಿಂದ ಸಿಗುವ ಸೌಲಭ್ಯ, ಡಾ.ಎಂ. ಸಿ. ಶಿವಕುಮಾರ್ -ಹಂದಿ ಸಾಕಾಣಿಕೆ ಮಹತ್ವ, ಡಾ. ಜಿ.ಎಸ್. ನವೀನ್ - ದೇಶಿಯ ಮತ್ತು ವಿದೇಶಿ ಹಂದಿಯ ತಳಿಗಳು,  ಡಾ. ಆರ್.ಗುರುಪ್ರಸಾದ್ - ಹಂದಿ ಸಾಕಾಣಿಕೆಯಲ್ಲಿ ಬಳಸುವ ಸಲಕರಣೆಗಳು ಹಾಗೂ ಹಂದಿ ಸಾಕಾಣಿಕೆಯ ಮೇಲೆ ಹವಾಮಾನದ ಪ್ರಭಾವ ಹಾಗೂ ಡಾ. ಎಸ್.ಬಿ. ಪ್ರಸನ್ನ ಅವರು ಹಂದಿಗಳಿಗೆ ಆಧುನಿಕ ನಿರ್ವಹಣಾ ಪದ್ಧತಿ ಬಗ್ಗೆ ತಿಳಿಸಿದರು.
ಎರಡನೇ ದಿನದ ಕಾರ್ಯಕ್ರಮದಲ್ಲಿ  ಡಾ. ಮಹದೇವಪ್ಪ ಡಿ. ಗೌರಿ ಅವರು ಹಂದಿಗಳಿಗಾಗಿ ಕಡಿಮೆ ಖರ್ಚಿನ ವಸತಿ,  ಡಾ. ಹೆಚ್. ಸಿ. ಇಂದ್ರೇಶ್ ಹುಟ್ಟಿದ ಹಂದಿ ಮರಿಗಳ ಪಾಲನೆ, ಡಾ. ಬಿ. ಎನ್. ಸುರೇಶ್ - ಹಂದಿಗಳ ಪೋಷಣೆ ಮತ್ತು ಆಹಾರ ನಿರ್ವಹಣೆ, ಡಾ.ಎಚ್.ಎಸ್.ಮಧುಸೂದನ್ - ಹಂದಿಗಳಿಗೆ ಕಡಿಮೆ ವೆಚ್ಚದಲ್ಲಿ ದಾಣಿ ಮಿಶ್ರಣ ತಯಾರಿಕೆ ಹಾಗೂ ಡಾ. ಟಿ. ಕೆ. ರೂಪ - ಹಂದಿಗಳಲ್ಲಿ ಹಸಿರು ಮೇವಿನ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಹಂದಿಗಳಲ್ಲಿ ಸಂತಾನೋತ್ಪತ್ತಿಯ ಬಗ್ಗೆ ಡಾ. ಎ. ಸಹದೇವ್, ಹಂದಿಗಳನ್ನು ಕಾಡುವ ರೋಗಗಳು, ಲಸಿಕಾ ಕಾರ್ಯಕ್ರಮ ಹಾಗೂ ಮುಂಜಾಗ್ರತೆ ಕ್ರಮಗಳು ಬಗ್ಗೆ ಡಾ. ಎಂ. ಶಿವಕುಮಾರ್, ಹಂದಿಗಳಲ್ಲಿ ಪರಾವಲಂಬಿ ಜೀವಿಗಳು ಬಗ್ಗೆ ಡಾ. ಪಿ.ಎಂ. ತಿಮ್ಮಾರೆಡ್ಡಿ, ಹಂದಿ ಮಾಂಸ ಮತ್ತು ಉತ್ಪನ್ನಗಳು ಬಗ್ಗೆ ಡಾ. ಚಂದ್ರೇಗೌಡ ಸಿ.ಟಿ ಹಾಗೂ ಹಂದಿ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಡಾ. ಸುಶಾಂತ್ ಹಂಡಗೆ ವಿವರಿಸಿದರು. ತರಬೇತಿಯಲ್ಲಿ  ಜಿಲ್ಲೆಯ ಆರಕಲಗೂಡು, ಆಲೂರು ಮತ್ತು ಸಕಲೇಶಪುರದ 40ಕ್ಕೂ ಹೆಚ್ಚು ಯುವ ರೈತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement