ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಲಕ ಅಪಹರಣ, ಸಿನಿಮಿಯ ರೀತಿಯಲ್ಲಿ ಬಚಾವ್

Srinivasa Murthy VN
Updated On : 21 Sept 2013, 12:53 pm

ಆಲೂರು: ಪಟ್ಟಣದ ಅಬ್ದುಲ್ ಅನೀಫ್ ಎಂಬುವರ ಪುತ್ರ ಮಹಮ್ಮದ್ ಸೈಫ್ (12) ನನ್ನು ಅಪಹರಣ ಮಾಡಿದ್ದು, ಬಾಲಕ ಸಿನಿಮೀಯ ರೀತಿಯಲ್ಲಿ ಬಚಾವ್ ಆಗಿ ಬಂದ ಘಟನೆ ಶುಕ್ರವಾರ ನಡೆದಿದೆ.
ಭೈರಾಪುರದ ಬೆಥೆಸ್ತಾ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ ಬೆಳಗಿನ ಜಾವ 6.30 ರಲ್ಲಿ ಹೋಂ ವರ್ಕ್‌ಗೆಂದು ಪೆನ್ಸಿಲ್ ತರಲು ಬಿ.ಎಂ.ರಸ್ತೆಯಲ್ಲಿ ಹೋಗುತ್ತಿದ್ದ. ಆಗ ಸಕಲೇಶಪುರ ಮಾರ್ಗದಿಂದ ಕೆಂಪು ಓಮ್ನಿಕಾರಿನಲ್ಲಿ ಬಂದ ನಾಲ್ವರು ಆತನ ಬಾಯಿ ಮುಚ್ಚಿ ಕಾರಿನಲ್ಲಿ ಅಪಹರಿಸಿ ಹಾಸನ ಬೈಪಾಸ್ ರಸ್ತೆಯಲ್ಲಿ ಹೋಗಿ, ಟೀ ಕುಡಿಯಲು ಕಾರನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಬಾಲಕ ಅವರಿಂದ ತಪ್ಪಿಸಿಕೊಂಡು ಜನರಿದ್ದ ಕಡೆಗೆ ಓಡಿದ ಕಾರಣ ಅಪಹರಣಕಾರರು ಅಲ್ಲಿಂದ ಕಾಲು ಕಿತ್ತಿದ್ದಾರೆ. ನಂತರ ಬಾಲಕ ಬೈಪಾಸ್ ಮೂಲಕ ಜವರಾಯಪಟ್ಟಣ ತನಕ ನಡೆದುಕೊಂಡು ಬಂದು, ನಂತರ ಟೆಂಪೋದಲ್ಲಿ ಆಲೂರಿಗೆ ಬಂದಿದ್ದಾನೆ. ವಿಷಯ ತಿಳಿದು ಗಾಬರಿಗೊಂಡ ಪೋಷಕರು ಸ್ಥಳೀಯರೊಡಗೂಡಿ ಅಪಹರಣಕಾರರನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದು, ಈವರೆಗೂ ಅಪಹರಣಕಾರರ ಸುಳಿವು ಸಿಕ್ಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement