ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೇಮಾವತಿಯಿಂದ ಅಕ್ರಮ ಮರಳು ಸಾಗಣೆ: 8 ಲಾರಿ, 3 ಟ್ರ್ಯಾಕ್ಟರ್ ವಶ

Srinivasa Murthy VN
Updated On : 20 Sept 2013, 11:26 am

ಹೊಳೆನರಸೀಪುರ: ತಾಲೂಕಿನ ನಾನಾ ಕಡೆಗಳಲ್ಲಿ ಹೇಮಾವತಿ ನದಿಯಿಂದ ಅನಧಿಕೃತವಾಗಿ ಮರಳು ತೆಗೆದು ಹೊರ ಊರುಗಳಿಗೆ ಸಾಗಿಸುತ್ತಿದ್ದ ಲಾರಿ ಹಾಗೂ ಟ್ರ್ಯಾಕ್ಟರ್‌ಗಳನ್ನು ಉಪ ವಿಭಾಗಾಧಿಕಾರಿ ಶರತ್ ನೇತೃತ್ವದಲ್ಲಿ ತಹಸೀಲ್ದಾರ್ ಶಿವಶಂಕರ್ ವಶಪಡಿಸಿಕೊಂಡಿದ್ದಾರೆ.
ಹೇಮಾವತಿ ನದಿಯಿಂದ ಮರಳು ತೆಗೆಯುವುದನ್ನು ನಿಷೇಧಿಸಿದ್ದರೂ, ಕಾನೂನು ಉಲ್ಲಂಘಿಸಿ ರಾಜಾರೋಷವಾಗಿಯೇ ಮರಳು ಸಾಗಿಸುತ್ತಿದ್ದ 8 ಲಾರಿ ಹಾಗೂ 3 ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.
ತಾಲೂಕಿನ ವಳಂಬಿಗೆ, ಯಳ್ಳೇಶಪುರ, ಹಳೇಕೋಟೆ ಹಾಗು ಹಂಗರಹಳ್ಳಿ ಬಳಿಯಲ್ಲಿ ನದಿಯಿಂದ ಲಕ್ಷಾಂತರ ರು. ಬೆಲೆಬಾಳುವ ಮರಳು ತೆಗೆದು ಸಾಗಿಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಲಾಗಿದ್ದು, ದಂಡ ವಿಧಿಸುವ ಕುರಿತಂತೆ ಜಿಲ್ಲಾಧಿಕಾರಿ ಕ್ರಮಕ್ಕೆ ಒಪ್ಪಿಸಿರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.
ಹೇಮಾವತಿ ನದಿ ಪಾತ್ರದಲ್ಲಿ ಮರಳು ತೆಗೆಯಲು ಯಾವುದೇ ಟೆಂಡರ್ ಕರೆಯಲಾಗಿಲ್ಲ. ಆದರೂ ಅನಧಿಕೃತವಾಗಿ ಮರಳು ಮಾಫಿಯಾದವರು ನಿತ್ಯವೂ ರಾಜಾರೋಷವಾಗಿಯೇ ನದಿಯಿಂದ ಮರಳು ತೆಗೆದು ಸಾಗಿಸುತ್ತಿದ್ದರೂ ತಾಲೂಕು, ಜಿಲ್ಲಾಡಳಿತ ಹಾಗೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣ ಮರಳು ಲೂಟಿ ನಿರಂತರವಾಗಿ ನಡೆದೇ ಇದೆ.  ಈಚೆಗೆ ತಾಲೂಕಿಗೆ ನೂತನವಾಗಿ ಬಂದಿರುವ ತಹಸೀಲ್ದಾರ್ ಶಿವಶಂಕರ್ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಶಿರಸ್ತೇದಾರ್ ಉಲಿವಾಲ ಮೋಹನ್‌ಕುಮಾರ್, ರಾಜಸ್ವ ನಿರೀಕ್ಷಕ ನಾಗರಾಜು ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement