ಬುಡಕಟ್ಟು ಒಕ್ಕೂಟ ವಿಕಾಸ ಚಿಂತನಾ ಸಭೆ
ಬೇಲೂರು: ಕರ್ನಾಟಕ ಅರಣ್ಯ ಮೂಲ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಮಟ್ಟದ ಸಭೆಯನ್ನು ತಾಲೂಕಿನ ಹಗರೆ ಆಶ್ರಯ ಶಾಲೆಯಲ್ಲಿ ಎರಡು ದಿನಗಳ ನೆಟ್‌ವರ್ಕ್ ಸಭೆ ನಡೆಸಲಾಯಿತು.
ಸಭೆಯಲ್ಲಿ ಬುಡಕಟ್ಟು ಸಮುದಾಯಗಳ ಹಕ್ಕಿಪಿಕ್ಕಿ, ಕೊರಗ, ಜೇನುಕುರುಬ, ಎರವ, ಸೋಲಿಗ, ಹಸಲರು, ಗೊಂಡಿ, ಸಿದ್ದಿ ಸಮುದಾಯ ಈ ಜನಾಂಗಗಳ ಬುಡಕಟ್ಟು ಸಮುದಾಯಗಳ ಭಾಷಾ ಮತ್ತು ಸಂಸ್ಕೃತಿ ಆದಿವಾಸಿಗಳ ಅಸ್ತಿತ್ವ ಸಮಾನ ಹಕ್ಕು, ಗಿರಿಜನರ ಉದ್ಯೋಗ ಉಪಯೋಜನೆಗಳು ಅರಣ್ಯಹಕ್ಕು, ಮೀಸಲಾಯಿತಿ, ಬಗ್ಗೆ ಸುದೀರ್ಘ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಮುಂದಿನ ದಿನದಲ್ಲಿ ಸಮುದಾಯದ ವಿಕಾಶಕ್ಕೆ ಅನುಸರಿಸಬೇಕಾದ ಮಾರ್ಗಗಳು ಹಾಗೂ ಕಾನೂನಾತ್ಮಕ ಸಮುದಾಯಕ್ಕೆ ದಕ್ಕೆ ತರುವ ಅಧಿಕಾರಿಗಳು ಮತ್ತು ಉನ್ನತ ವರ್ಗದ ವಿರುದ್ಧ ಖಂಡನೆ, ಹಾಗೂ ದೌರ್ಜನ್ಯಗಳ ಇನ್ನು ಮುಂದೆ ನಡೆಯದ ರೀತಿಯಲ್ಲಿ ಜನ ಪ್ರತಿನಿಧಿಗಳಲ್ಲಿ ಮನವಿ ಮಾಡುವ ವಿಚಾರ ಮತ್ತು ರಾಜ್ಯ ಮಟ್ಟದಲ್ಲಿ ಸಂಘಟಿತರಾಗಿ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳವುದು ಗಿರಿಜನ ಉಪಯೋಜನೆ ಸಂಪನ್ಮೂಲ ವ್ಯಕ್ತಿಯಾದ ವೆಂಕಟೇಶ್ ಮಾಹಿತಿ ನೀಡಿದರು. ಆದಿವಾಸಿ ಒಕ್ಕೂಟದ ಅಧ್ಯಕ್ಷ ಮತ್ತಡಿಕೊರಗ ಇದ್ದರು. ಒಕ್ಕೂಟದ ವತಿಯಿಂದ ಅ.10 ರಿಂದ 5 ದಿನ ಕೊಡಗು ಜಿಲ್ಲೆಯಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.