ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಲ ಬಾಧೆ: ರೈತ ಆತ್ಮಹತ್ಯೆ

Srinivasa Murthy VN
Updated On : 21 Sept 2013, 9:57 am

ಅರಕಲಗೂಡು: ಬೆಳೆ ಸಾಲ ಪಡೆದಿದ್ದ ರೈತರೊಬ್ಬರು ಸಾಲ ತೀರಿಸಲು ಹೆದರಿ ಆತ್ಮಹತ್ಯೆ ಮಾಡಿಕೊಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ತಾಲೂಕಿನ ಅಂಕನಾಯಕನ ಹಳ್ಳಿ ಕಾವಲು ಗ್ರಾಮದ ಅಣ್ಣೇಗೌಡರ ಮಗ ರವಿ(35) ಆತ್ಮಹತ್ಯೆಗೆ ಶರಣಾದ ಯುವ ರೈತ. ತನ್ನ ಮನೆಯಿಂದ ಜಮೀನು ಬಳಿಯ ತನ್ನ ಮತ್ತೊಂದು ಮನೆಯಲ್ಲಿ ಮಲಗುವುದಾಗಿ ತೆರಳಿದ ರವಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೊರೂರಿನ ಕಾರ್ಪೊರೇಷನ್ ಬ್ಯಾಂಕ್‌ನಿಂದ ರು. 35 ಸಾವಿರ  ಸಾಲ ಮಾಡಿದ್ದರು ಎನ್ನಲಾಗಿದ್ದು, ಇನ್ನೂ ಕೆಲವು ಕಡೆ ಕೈ ಸಾಲ ಮಾಡಿದ್ದರು. ಈ ಬಾರಿ ಬೆಳೆದ ಬೆಳೆಯೂ ಕೈಕೊಟ್ಟ ಕಾರಣ. ಹೆದರಿದ ರವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅರಕಲಗೂಡು ಪಿಎಸ್‌ಐ ಭರತ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೇಮಾವತಿಗೆ 10 ಸಾವಿರ ಕ್ಯುಸೆಕ್ ನೀರು
ಹಾಸನ: ಹೇಮಾವತಿ ಜಲಾಶಯಕ್ಕೆ ಶನಿವಾರ 10 ಸಾವಿರ ಕ್ಯುಸೆಕ್ ನೀರು ಬರುತ್ತಿದ್ದು, 4300 ಕ್ಯುಸೆಕ್  ಹೊರಬಿಡಲಾಗುತ್ತಿದೆ. ಗರಿಷ್ಠ ನೀರಿನ ಮಟ್ಟ 2922 ಅಡಿ, ಇಂದಿನ ನೀರಿನ ಮಟ್ಟ 2921.89 ಅಡಿಯಾಗಿದ್ದು, 36.996 ಟಿಎಂಸಿ ನೀರು ಸಂಗ್ರಹವಾಗಿದೆ.
ಯಗಚಿ ಜಲಾಶಯ:  ನೀರಿನ ಮಟ್ಟ 3068. 890 ಅಡಿ, ಒಳ ಹರಿವು 500 ಕ್ಯುಸೆಕ್, ಹೊರ ಹರಿವು ನಾಲೆಗೆ 100 ಕ್ಯುಸೆಕ್, ನದಿಗೆ 400 ಕ್ಯುಸೆಕ್ ಒಟ್ಟು ನೀರಿನ ಸಂಗ್ರಹ ಮಟ್ಟ 3.600 ಟಿಎಂಸಿ.
ವಾಟೆ ಹೊಳೆ:  ಇಂದಿನ 3067.65 ಅಡಿ, ಒಳ ಹರಿವು 230 ಕ್ಯುಸೆಕ್, ಹೊರ ಹರಿವು  25 ಕ್ಯುಸೆಕ್ ಒಟ್ಟು ನೀರಿನ ಸಂಗ್ರಹ 1.409 ಟಿಎಂಸಿ.
ತಾಲೂಕುವಾರು ಮಳೆ ವಿವರ: ಅರಕಲಗೂಡು 3.2 ಮಿಮೀ, ಬೇಲೂರು 0.8, ಹೊಳೇನರಸೀಪುರ 2.2 , ಸಕಲೇಶಪುರ 8.6, ಹಾಸನ 2.4 ಮಿ.ಮೀ ಮಳೆಯಾಗಿದೆ.
ಹೋಬಳಿವಾರು: ಆಲೂರು ತಾಲೂಕಿನ ಪಾಳ್ಯ 10.8, ಕೆ.ಹೊಸಕೋಟೆ 5.5, ಕುಂದೂರು 4.2, ಅರಕಲಗೂಡು 3.2, ಮಲ್ಲಿಪಟ್ಟಣ 10, ರಾಮನಾಥಪುರ 40.2, ಬಸವಾಪಟ್ಟಣ  03.2, ಕೊಣನೂರು 18.7, ದೊಡ್‌ಡಮಗ್ಗೆ 4.2, ದೊಡ್ಡಬೆಮ್ಮತ್ತಿ 6.2, ಅರಸೀಕೆರೆಯ ಗಂಡಸಿ 0.8, ಕಣಕಟ್ಟೆ  4.4, ಯಳವಾರೆ 1, ಜಾವಗಲ್ 2.6, ಬೇಲೂರು  1.8, ಹಳೇಬೀಡು 1, ಹಗರೆ 0.2., ಬಿಕ್ಕೋಡು3.8, ಗೆಂಡೆಹಳ್ಳಿ  5.2, ಹಾಸನ 2.4, ಕಟ್ಟಾಯ 0.2, ದುದ್ದ 0, ಗೊರೂರು 0.5, ಹೊಳೆನರಸೀಪುರ 2.2, ಹಳ್ಳಿಮೈಸೂರು  7.8, ಸಕಲೇಶಪುರ 8.6, ಬಾಳ್ಳುಪೇಟೆ, ಯಸಳೂರು 25, ಶುಕ್ರವಾರ ಸಂತೆ 18.03, ಮರೇನಹಳ್ಳಿ 25, ಹೊಸೂರು 54.4, ಬೆಳಗೊಡು 7.8, ಹಾನುಬಾಳು 13.2, ಆಲೂರು ತಾಲೂಕಿನ ಪಾಳ್ಯ 10.8, ಕೆ.ಹೊಸಕೋಟೆ 5.5, ಕುಂದೂರು 4.2, ಅರಕಲಗೂಡು 3.2, ಮಲ್ಲಿಪಟ್ಟಣ 10, ಹೆತ್ತೂರು 28.6 ಮಿ.ಮೀ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement