ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅನ್ನದಾತನ ಮಕ್ಕಳೂ ಉನ್ನತ ಹುದ್ದೆಗೇರಲಿ

Srinivasa Murthy VN
Updated On : 22 Sept 2013, 11:37 am

ಕನ್ನಡಪ್ರಭ ವಾರ್ತೆಹಾಸನ ಸೆ. 22
ರೈತರ ಮಕ್ಕಳೂ ಕೂಡ ಅಧಿಕಾರಿಗಳು, ಡಾಕ್ಟರ್   ಹಾಗೂ ಎಂಜಿನಿಯರ್‌ಗಳಾಗಬೇಕು ಎಂದು  ಭವಾನಿ ರೇವಣ್ಣ ಕಿವಿಮಾತು ಹೇಳಿದರು.  
ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯ  ಹೆಚ್.ಡಿ.ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ  ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಶಿಕ್ಷಕರ ಮಕ್ಕಳು ಶಿಕ್ಷಕರಾಗಬೇಕು  ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗಬೇಕು, ಡಾಕ್ಟರ್ ಮಕ್ಕಳು ಡಾಕ್ಟರ್ ಆಗಬೇಕು ಎನ್ನುವ ಮನೋಭಾವ ಬದಲಾಗಿ ರೈತರ ಮಕ್ಕಳು ಸಹ ಡಾಕ್ಟರ್, ಅಧಿಕಾರಿಗಳು, ಉಪನ್ಯಾಸಕರು, ಇಂಜನಿಯರ್‌ಗಳಾಗಬೇಕು ಎಂದು ಹೇಳಿದರು.  
ಅವಕಾಶ ಸದುಪಯೋಗವಾಗಲಿ: ಅವಕಾಶಗಳನ್ನು ಪ್ರತಿಯೊಬ್ಬ ರೈತರ ಮಕ್ಕಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಪಡೆಯಬೇಕು ಎನ್ನುವ ಹಿನ್ನಲೆಯಲ್ಲಿಯೇ ಸ್ಥಳೀಯ ಮಟ್ಟದಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಮತ್ತು ಉನ್ನತ ಶಿಕ್ಷಣದ ಅವಕಾಶಗಳನ್ನು ಮಾಡಿಕೊಡುವ ಪ್ರಯತ್ನವನ್ನು  ಶಾಸಕ ಹೆಚ್.ಡಿ.ರೇವಣ್ಣ ಮಾಡಿಕೊಟ್ಟಿದ್ದಾರೆ.  ನಮಗೆ ಆ ದಿನಗಳಲ್ಲಿ ಉನ್ನತ ಶಿಕ್ಷಣದ ಅವಕಾಶಗಳು ಸಿಗದಿದ್ದರಿಂದಲೇ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತೆರೆಯಲಾಗಿದೆ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ಕರೆ ನೀಡಿದರು.
ನಮ್ಮಲ್ಲಿಯೇ ಹಾಸ್ಯವಿದೆ: ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಹಾಸ್ಯ ಪ್ರತಿಯೊಬ್ಬ ವ್ಯಕ್ತಿಯ ಬದುಕಿನೊಳಗೆ ಇದೆ ಅದನ್ನು  ಬೇರೆಲ್ಲೋ ಹುಡುಕುವ ಅವಶ್ಯಕತೆ ಇಲ್ಲ.  ನಿತ್ಯ ಸಮಾಜಿಕ ಬದುಕಿನೊಳಗೆ ಅವು ಕಂಡು ಬರುತ್ತಿರುತ್ತವೆ. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕಷ್ಟೆ. ಪ್ರತಿಯೊಬ್ಬರೂ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇಂತಹ ಸಾಂಸ್ಕೃತಿಕ ಮತ್ತು  ಕ್ರೀಡಾ ವೇದಿಕೆಗಳು ಅವಕಾಶವನ್ನು ಕಲ್ಪಿಸುತ್ತವೆ ಇದನ್ನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಬಳಸಿಕೊಳ್ಳಲು ಹಾಗೂ  ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದರ ಮೂಲಕ ಜ್ಞಾನವನ್ನು ಬೆಳಸಿಕೊಳ್ಳುವಂತೆ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಜಿ.ಡಿ.ನಾರಾಯಣ ಮಾತನಾಡಿ,  ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸರ್ಕಾರಿ ಶೈಕ್ಷಣಿಕ ಸೌಲಭ್ಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳು ಬಳಸಿಕೊಳ್ಳುವ ಮೂಲಕ ಜ್ಞಾನ ಸ್ವಾವಲಂಬಿಗಳಾಗುವ ಜೊತೆಗೆ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.  
ಶಾಸಕ ಹೆಚ್.ಡಿ.ರೇವಣ್ಣ ನೀಡಿದ ಕೊಡುಗೆಗಳನ್ನು ಮತ್ತು ಗ್ರಾಮೀಣ ಬಡ ರೈತರ ಮಕ್ಕಳ ಕುರಿತಾದ  ಕಳಕಳಿಯನ್ನು ಸ್ಮರಿಸಿದರು. ರೇವಣ್ಣ ಅವರ ಈ ಸಾಧನೆಯ ಹಿನ್ನೆಲೆ ಪ್ರೇರಕ ಶಕ್ತಿಯಾಗಿರುವ ಭವಾನಿ ರೇವಣ್ಣ ಅವರ ಪಾತ್ರವನ್ನು ತಿಳಿಸಿದರು.
ಪ್ರತಿಯೊಬ್ಬರಲ್ಲೂ ಪ್ರತಿಭೆ ಇದೆ:  ಎನ್.ಟಿ.ಶ್ರೀನಿವಾಸ ಮಾತನಾಡಿ,  ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ  ಪ್ರತಿಭೆಗಳನ್ನು ಹೊರತರಲು ಅವರಿಗೆ ಸೂಕ್ತವಾದ ವೇದಿಕೆಯನ್ನು ಒದಗಿಸುವುದು ಹಾಗೂ ಅವರಲ್ಲಿಯ ಪ್ರತಿಭೆಯನ್ನು ಪೋಷಿಸುವುದು ಸಾಂಸ್ಕೃತಿಕ ಮತ್ತು  ಕ್ರೀಡಾ ವೇದಿಕೆಯ ಗುರಿಯಾಗಿದೆ ಎಂದು ತಿಳಿಸಿದರು.
   ಎನ್.ಎಸ್.ಎಸ್ ಅಧಿಕಾರಿ ಪಾರ್ಥೇಶ್‌ಗೌಡ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ  ಜಿ.ಪಿ.ಯೋಗೇಶ್, ವಾಣಿಜ್ಯಶಾಸ್ತ್ರದ ಮುಖ್ಯಸ್ಥ   ಮುನಿ ರಾಜು ಮತ್ತು ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಪಿ.ನಂದನ್ ಹಾಗೂ ಸ್ನಾತಕೋತ್ತರ ಇತಿಹಾಸ ವಿಭಾಗದ ಸಂಯೋಜಕ  ಲಿಂಗಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಅವಕಾಶಗಳನ್ನು ಪ್ರತಿಯೊಬ್ಬ ರೈತರ ಮಕ್ಕಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಪಡೆಯಬೇಕು ಎನ್ನುವ ಹಿನ್ನಲೆಯಲ್ಲಿಯೇ ಸ್ಥಳೀಯ ಮಟ್ಟದಲ್ಲಿ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಮತ್ತು ಉನ್ನತ ಶಿಕ್ಷಣದ ಅವಕಾಶ ಮಾಡಿಕೊಡುವ ಪ್ರಯತ್ನವನ್ನು  ಶಾಸಕ ಹೆಚ್.ಡಿ.ರೇವಣ್ಣ ಮಾಡಿಕೊಟ್ಟಿದ್ದಾರೆ.
-ಭವಾನಿ ರೇವಣ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement