ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಲ್ಲಾ ಧರ್ಮದವರು ಸೇರಿ ಆಚರಿಸುವ ವಿಶಿಷ್ಟ ಓಣಂ ಹಬ್ಬ

Srinivasa Murthy VN
Updated On : 24 Sept 2013, 12:09 pm

ಕ.ಪ್ರ.ವಾರ್ತೆ ಸಕಲೇಶಪುರ ಸೆ. 23
ಎಲ್ಲಾ ಧರ್ಮದವರನ್ನು ಒಟ್ಟು ಸೇರಿಸುವ ದೇಶದ ಏಕೈಕ ಹಬ್ಬ ಓಣಂ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು. ಭಾನುವಾರ ಕೇರಳ ಸಮಾಜ ಪಟ್ಟಣದ ಓಂ ಮಂದಿರದಲ್ಲಿ ಹಮ್ಮಿಕೊಂಡಿದ್ದ ಓಣಂ ಹಬ್ಬದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೇರಳಿಗರು ಧರ್ಮಸಹಿಷ್ಣುಗಳು. ದೇಶದ ಎಲ್ಲೇ ಇದ್ದರೂ ಸ್ಥಳೀಯರೊಂದಿಗೆ ಹೊಂದಿಕೊಂಡು ಬದುಕುವ ಕಲೆ ಅವರಲ್ಲಿದೆ, ಹಾಗೆಯೇ ಅತಿ ವಿಶಿಷ್ಟ ಸಂಸ್ಕೃತಿ ಹೊಂದಿರುವ ಜನಾಂಗವಾಗಿದೆ ಎಂದರು. ಕೋಮು ಸೌಹಾರ್ಧಕ್ಕೆ ಹೆಸರಾಗಿರುವ ಕೇರಳ ಜನತೆ ಓಣಂ ಹಬ್ಬವನ್ನು ಎಲ್ಲಾ ಧರ್ಮದವರು ಸೇರಿ ಆಚರಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಉಪವಿಭಾಗಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಪುರಾತನ ಕಾಲದಿಂದಲೂ ಓಣಂ ಹಬ್ಬವನ್ನು ಜಾತಿ, ಧರ್ಮ ಬೇಧವಿಲ್ಲದೆ ಆಚರಿಸಲಾಗುತ್ತಿದೆ. ಕೇರಳಿಗರು ಎಲ್ಲೇ ಇದ್ದರೂ ಈ ಹಬ್ಬದಲ್ಲಿ ಒಂದುಗೂಡುವ ಸಂಪ್ರದಾಯವಿದೆ ಎಂದು ನುಡಿದರು. ಕಾರ್ಯಕ್ರಮದ ಅಂಗವಾಗಿ ನಾನಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಹಬ್ಬದ ಅಂಗವಾಗಿ ಹೂವಿನಲ್ಲಿ ಮೂಡಿಸಿದ್ದ ರಂಗೋಲಿಗಳು ನೋಡುಗರ ಗಮನ ಸೆಳೆದವು. ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ಸಂಘದ ಅಧ್ಯಕ್ಷ ಸಿ.ಆರ್. ಪಾಲ್, ಅಬ್ದುಲ್, ಶಂಕರಾನಂದ ಸರಸ್ವತಿ ಸ್ವಾಮಿಜಿ, ಪ್ರಸನ್ನಕುಮಾರ್, ಲಕ್ಷ್ಮಣ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement