ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿವಿಧ ಶೈಕ್ಷಣಿಕ ಕೋರ್ಸ್‌ಗಳಿಗೆ ಅರ್ಜಿ ವಿತರಣೆ

Srinivasa Murthy VN
Updated On : 24 Sept 2013, 12:10 pm

ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು- ಹಾಸನ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ನಾನಾ ಶೈಕ್ಷಣಿಕ ಕೋರ್ಸ್‌ಗಳ ಪ್ರವೇಶಾತಿ ಪ್ರಾರಂಭವಾಗಿದೆ.ಅದಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಹಾಸನ ಪ್ರಾದೇಶಿಕ ಕೇಂದ್ರ, ಆದಿಚುಂಚನಗಿರಿ ಕಲ್ಯಾಣಮಂಟಪ ಕಟ್ಟಡ, ಎಂ.ಜಿ. ರೋಡ್, ರವೀಂದ್ರ ನಗರ, ಹಾಸನ ಇಲ್ಲಿ ಕರೆಸ್ಪಾಂಡೆನ್ಸ್‌ಗೆ ಅರ್ಜಿ ವಿತರಿಸಲಾಗುತ್ತಿದೆ.
B.A, B.Com, M.A, M.Com, M.Sc in Physics, Maths, Chemistry, Biochemistry, Microbiology, Computer, Clinical Nutrition, Environoment Science, Information Science, Geography, Psychology, M.Sc.It., M.B.A., M.L.I.Sc., M.B.A. (Law), M.A.M.T.M.,  B.L.I.Sc., L.L.M., B.Ed., M. Ed., P.G. Diploma, Diploma Certificate ಕೋರ್ಸ್‌ಗಳಿಗೆ ಅರ್ಜಿ ನೀಡಲಾಗುತ್ತಿದ್ದು ಆಸಕ್ತರು ನಿಗಧಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಪ್ರವೇಶ ಪಡೆಯಬಹುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ 25 ರಿಯಾಯಿತಿ ನೀಡಲಾಗುವುದು.ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ, ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಲಿ 18 ವರ್ಷ ತುಂಬಿದವರೂ ಬಿ.ಎ, ಬಿ.ಕಾಂಗೆ ನೇರವಾಗಿ ಪ್ರವೇಶಾತಿ ಪಡೆಯಬಹುದು.
ಪ್ರವೇಶಾತಿ ಪಡೆದ ಎಸ್‌ಸಿ, ಎಸ್‌ಟಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಬಡವಿದ್ಯಾರ್ಥಿಗಳಿಗೆ ಸಮಾಜಕಲ್ಯಾಣ ಇಲಾಖೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿಗಳಿಂದ ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ.
  ಮಾಹಿತಿಗಾಗಿ ಹಾಸನ ಪ್ರಾದೇಶಿಕ ಕೇಂದ್ರ, ಆದಿಚುಂಚನಗಿರಿ ಕಲ್ಯಾಣಮಂಟಪ ಕಟ್ಟಡ, ಎಂ.ಜಿ. ರೋಡ್, ರವೀಂದ್ರ ನಗರ, ಹಾಸನ ಇಲ್ಲಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಪಿ. ಹರೀಶ್, ಪ್ರಾದೇಶಿಕ ನಿರ್ದೇಶಕರು, ಹಾಸನ ಸಂಪರ್ಕಿಸಬಹುದು. ದೂ - 08172 269244,  ಮೊ. 98441 45234.
 ಹೆಚ್ಚಿನ ಮಾಹಿತಿಗಾಗಿ ಕರಾಮುವಿ ವೆಬ್‌ಸೈಟ್ www.ksoumysore.edu.in  ಅಥವಾ 08172 269244   ಸಂಪರ್ಕಿಸಬಹುದು ಎಂದು ಪ್ರಾದೇಶಿಕ ನಿರ್ದೇಶಕ ಪಿ.ಹರೀಶ್ ತಿಳಿಸಿದ್ದಾರೆ.

ಚಿತ್ರಕಲಾ ಶಿಕ್ಷಕರ ವರ್ಣಮಿಲನ ಪ್ರದರ್ಶನ
ಹಾಸನ: ಯಾವುದೇ ಕಲೆ ಇರಲಿ, ಅದು  ಪ್ರೇಕ್ಷಕನನ್ನು ವೀಕ್ಷಕನನ್ನಾಗಿ ಮಾಡುವಂತಹ ಶಕ್ತಿ ಕಲೆಗಾರನಲ್ಲಿ ಇರಬೇಕು  ಎಂದು ಕುಶಾಲನಗರದ ಸಂಪನ್ಮೂಲ ವ್ಯಕ್ತಿ ಹಾಗೂ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಹೇಳಿದರು.
 ನಗರದ ಹಾಸನಾಂಬ ಕಲಾಕ್ಷೇತ್ರ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಏರ್ಪಡಿಸಿದ್ದ ಚಿತ್ರಕಲಾ ಶಿಕ್ಷಕರ ವರ್ಣಮಿಲನ ಪ್ರದರ್ಶನದ ಪ್ರಾತ್ಯಕ್ಷಿಕತೆ -ವಿಚಾರ ಸಂಕಿರಣ ಎರಡನೆ ದಿವಸದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಕಲೆ ಮನುಷ್ಯನನ್ನು ಬೆಳೆಸುತ್ತದೆ. ಯಾವುದೇ ಕೆಲಸದಲ್ಲಿ ಛಲದಿಂದ ಬಂದರೆ ಗುರಿ ಸಾಧ್ಯ ಎಂದ ಅವರು, ಕಲೆ ಯಾವುದೇ ಆಗಲಿ ಹಿಂದೆ ಯಾವುದೇ ರೀತಿಯಲ್ಲಿ ಪ್ರಚಾರ ಸಿಗುತ್ತಿರಲಿಲ್ಲ. ಈಗ ಆಧುನಿಕತೆಯಲ್ಲಿ ಯಾವುದೆ ಒಂದು ವಿಷಯವು ಪ್ರಚಾರವನ್ನು ಗಿಟ್ಟಿಸಿಕೊಳ್ಳುತ್ತದೆ ಎಂದರು.
  ಮನುಷ್ಯ ತನ್ನ ಜೀವನದಲ್ಲಿ ಯಾವುದಾದರೂ ಮಾಡಿದ ಉತ್ತಮ ಕೆಲಸ ಎಂದೆಂದಿಗೂ ಜೀವಂತವಾಗಿರುತ್ತದೆ ಎಂದು ಅವರು ಅಂತಹ ಕಾರ್ಯವನ್ನು ಕಲೆಯಲ್ಲಿ ತೋರಿಸುತ್ತಿರುವುದು ಶ್ಲಾಘನೀಯ ಎಂದರು.
  ಸಾಹಿತಿ ರೂಪ ಹಾಸನ್, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಕಸಾಪ ಗೌರವ ಕಾರ್ಯದರ್ಶಿ  ಗೊರೂರು ಶಿವೇಶ್, ನಿರ್ಮಲಾ ಚಿತ್ರಕಲಾ ಮಹಾವಿದ್ಯಾಲಯ ಪ್ರಾಂಶುಪಾಲ  ಆರ್.ಸಿ. ಕಾರದಕಟ್ಟೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement