ಸಹಕಾರ ಸಂಘದ ಸರ್ವ ಸದಸ್ಯರ ಸಭೆ
ಕ.ಪ್ರ.ವಾರ್ತೆ ಹಾಸನ ಸೆ. 23
ನಗರ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆ ಬ್ಯಾಂಕಿನ ಅಧ್ಯಕ್ಷ ಎಚ್.ಆರ್.ಎನ್. ಕಂಠಿ ಅಧ್ಯಕ್ಷತೆಯಲ್ಲಿ ನಡೆದು 2012-13ರ ಸಾಲಿನ ಆಡಳಿತ ವರದಿಯ ಬಗ್ಗೆ ಚರ್ಚೆ ನಡೆಸಲಾಯಿತು. ಮೃತರಿಗೆ ನಗರ ವಿವಿಧೋದ್ದೇಶ ಸಹಕಾರ ಸಂಘದಿಂದ 2 ಸಾವಿರ ರು. ನೀಡಲಾಗುತ್ತಿತ್ತು. ಸದಸ್ಯರ ಒಪ್ಪಿಗೆಯಂತೆ 3 ಸಾವಿರ ರು.ಗೆ ಏರಿಸುವ ನಿರ್ಧಾರವನ್ನು ಕಳುಹಿಸುವುದಾಗಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಎಂ. ಮಲ್ಲೇಶಗೌಡ ತಿಳಿಸಿದರು.
2014 ರಲ್ಲಿ ಬ್ಯಾಂಕಿನ ಚುನಾವಣೆ ನಡೆಯಲಿದ್ದು, ಯಾವ ಸದಸ್ಯರು 500 ರು ಕಟ್ಟಿದ್ದಾರೆ ಅವರು ಉಳಿದ ಹಣವನ್ನು ಸಂದಾಯ ಮಾಡುವಂತೆ ಹೇಳಿದರು.
ಈಗಾಗಲೇ ಈ ಬ್ಯಾಂಕಿನಲ್ಲಿ 300 ಜನ ಸದಸ್ಯರು ಇದ್ದಾರೆ. ಇದೇ ಕಟ್ಟಡದ ಮೇಲ್ಭಾಗದಲ್ಲಿ ಮತ್ತೊಂದು ಕಟ್ಟಡವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಬ್ಯಾಂಕಿನಿಂದ ಬಂದಂತಹ ಲಾಭಂಶವನ್ನು ಯಾವ ಯಾವ ನಿಧಿಗಳಿಗೆ ಕಳುಹಿಸಬೇಕು ಎಂಬುದರ ವಿಚಾರವಾಗಿ ಸದಸ್ಯರ ಜೊತೆ ಚರ್ಚಿಸಿದರು. ಸಮಗ್ರ ಬೈಲ ತಿದ್ದುಪಡಿಯನ್ನು ಮಾಡುವ ಬಗ್ಗೆ ತಿಳಿಸಿದರು.
ನಿರ್ದೇಶಕ ಎಚ್.ಪಿ. ಅರುಣಕುಮಾರ್, ಎಚ್.ಸಿ. ಮಂಜುನಾಥ್, ಕೆ. ಶೇಷಾದ್ರಿ, ಎಮ್.ಜಿ. ರತ್ನಮ್ಮ, ಸುಜೀತ್ ಇತರರು ಇದ್ದರು. ಸಭೆಯ ಮೊದಲು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.