ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

16 ಎಮ್ಮೆಗಳ ಅಕ್ರಮ ಸಾಗಣೆ: ಇಬ್ಬರ ಬಂಧನ

Srinivasa Murthy VN
Updated On : 24 Sept 2013, 11:37 am

ಕ.ಪ್ರ.ವಾರ್ತೆ ಜಾವಗಲ್ ಸೆ. 24
ಜಾವಗಲ್ ಕೆರೆ ಕೋಡಿಹಳ್ಳಿ ಗೇಟ್ ಸಮೀಪ ಸೋಮವಾರ ರಾತ್ರಿ ಅಕ್ರಮವಾಗಿ ಸಾಗಿಸುತ್ತಿದ್ದ 16 ಎಮ್ಮೆಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗಂಡಸಿ ಹೋಬಳಿ ಹೊನ್ನಕುಮಾರನಹಳ್ಳಿಯ ಪ್ರಶಾಂತ ಹಾಗೂ ಮೊಸಳೆ ಗ್ರಾಮದ ಶಿವಕುಮಾರ ಬಂಧಿತರು.
ಜಾವಗಲ್ ಪಿಎಸ್‌ಐ ಮಹೇಶ್ ಹಾಗೂ ಸಿಬ್ಬಂದಿ ಗ್ರಾಮ ಗಸ್ತಿಗಾಗಿ ಠಾಣಾ ಸಿಬ್ಬಂದಿ ಪ್ರಭಾಕರ್ ಮತ್ತು ಆದಿತ್ಯ ಅವರೊಂದಿಗೆ ಜೀಪ್‌ನಲ್ಲಿ ಸಂಕೀಹಳ್ಳಿ ಮತ್ತು ಕೋಳಗುಂದ ಗ್ರಾಮಕ್ಕೆ ಹೋಗುವಾಗ ಕೋಡಿಹಳ್ಳಿ ಗೇಟ್ ಬಳಿ   ಟಾರ್ಪಾಲ್ ಮುಚ್ಚಿಕೊಂಡು ಬಾಣಾವರದಿಂದ ಬರುತ್ತಿದ್ದ ಲಾರಿಯನ್ನು ತಡೆದು ಪರಿಶೀಲಿಸಿದಾಗ 16 ಎಮ್ಮೆಗಳನ್ನು ತುಂಬಿಕೊಂಡು ಹೋಗುತ್ತಿದ್ದುದು ಕಂಡುಬಂತು.
ಈ ಸಂಬಂಧ ಆರೋಪಿ ಚಾಲಕ ಶಿವಕುಮಾರನನ್ನು ವಿಚಾರಿಸಿದಾಗ ಯಾವುದೇ ಪರವಾನಗಿ ಇಲ್ಲದೆ ಅಜ್ಜಂಪುರ ಸಂತೆಯಿಂದ ಖರೀದಿಸಿ ಹಾಸನ ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರ ಮೇರೆಗೆ ಆತನ ಜತೆಯಿದ್ದ ಪ್ರಶಾಂತಕುಮಾರನನ್ನೂ ಬಂಧಿಸಿದ್ದಾರೆ. ಘಟನೆಯಲ್ಲಿ ಮಹದೇವರ ಹಳ್ಳಿಯ ಮಂಜೇಗೌಡ ಎಂಬಾತ ಪರಾರಿಯಾಗಿದ್ದಾನೆ. ಪೊಲೀಸರು ಎಮ್ಮೆಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಮಹಿಳೆ ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಸಾಲ ವಾಪಸ್ ನೀಡದ ಕಾರಣಕ್ಕೆ ಆಟೋ ವಶಪಡಿಸಿಕೊಂಡಿದ್ದರಿಂದ ಮನನೊಂದ ಆಟೋ ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉದಯಗಿರಿ ಬೀಡಿ ಕಾಲೋನಿ ನಿವಾಸಿ ಹಾಗೂ ಆಟೋ ಚಾಲಕ ಸಮಿವುಲ್ಲಾ (48) ಆತ್ಮಹತ್ಯೆ ಮಾಡಿಕೊಂಡವರು. ಇವರು ನಜರ್‌ಬಾದ್‌ನ ಪ್ರಕಾಶ್ ಎಂಬವರ ಬಳಿ ಸಾಲ ಪಡೆದಿದ್ದರು. ಆದರೆ, ಸಂಪೂರ್ಣ ಹಣ ವಾಪಸ್ ನೀಡದ ಕಾರಣ ಪ್ರಕಾಶ್ ಆಟೋವನ್ನು ವಶಪಡಿಸಿಕೊಂಡಿದ್ದರು.ಸಾಲದ ಹಣ ಸಂಪೂರ್ಣ ವಾಪಸ್ ನೀಡಿದರೆ ಮಾತ್ರ ಆಟೋ ನೀಡುವುದಾಗಿ ಹೇಳಿದ್ದರು. ಇದರಿಂದ ಮನನೊಂದ ಸಮಿವುಲ್ಲಾ ಮಂಡಿ ಠಾಣೆ ಎದುರು ಆಟೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ವಿಷ ಸೇವಿಸಿ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ನರ್ಸ್ ಆತ್ಮಹತ್ಯೆ: ಕೆ.ಆರ್. ಮೊಹಲ್ಲಾ ರಾಮಾನುಜ ರಸ್ತೆ ನಿವಾಸಿ ಗುರುಮೂರ್ತಿ ಎಂಬವರ ಪತ್ನಿ ಸುಮಲತಾ (36) ಸೋಮವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement