ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಪರೀಕ್ಷಾ ಒತ್ತಡ ಹೆಚ್ಚಿದಂತೆ ಮಾನಸಿಕ ಖಿನ್ನತೆ'

Srinivasa Murthy VN
Updated On : 24 Sept 2013, 11:37 am

ಕ.ಪ್ರ.ವಾರ್ತೆ ಹಾಸನ ಸೆ. 24
ಪರೀಕ್ಷಾ ಒತ್ತಡ ಹೆಚ್ಚಾದಂತೆ ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನರಾಗುತ್ತಾರೆ ಎಂದು ಸಂವರ್ಧನ  ಕೋಚಿಂಗ್ ಸೆಂಟರ್‌ನ ನಿರ್ದೇಶಕ ಕೆ.ವಿ.ಮಂಜುನಾಥ್ ತಿಳಿಸಿದರು.
ಸಂವರ್ಧನ ಕೋಚಿಂಗ್ ಸೆಂಟರ್ ಆಯೋಜಿಸಿದ್ದ ಪರೀಕ್ಷಾ ಒತ್ತಡ ನಿವಾರಣೆ ಹೇಗೆಂಬ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಈ ಖಿನ್ನತೆ ನೇರವಾಗಿ ಅವರ ಫಲಿತಾಂಶದ  ಮೇಲೆ ಪ್ರಭಾವ ಬೀರುತ್ತದೆ. ಒತ್ತಡ, ಖಿನ್ನತೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳ  ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ  ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶದ ಬಗ್ಗೆ ಹೆಚ್ಚಿನ ಮಹತ್ವ  ಹಾಗೂ ಉದ್ವೇಗವನ್ನು ಬೆಳೆಸಿಕೊಂಡಿರುವುದರಿಂದ ಪರೀಕ್ಷಾ ಒತ್ತಡ, ಮಾನಸಿಕ ಖಿನ್ನತೆ, ಮಾನಸಿಕ ದೌರ್ಬಲ್ಯ ಹಾಗೂ ಶಾರೀರಿಕ ಕಾಯಿಲೆಗಳು ಹೆಚ್ಚುತ್ತಿದೆ. ಇದನ್ನು ತಡೆಗಟ್ಟುವತ್ತ ಗಮನಹರಿಸಬೇಕಾಗಿದೆ ಎಂದು  ನುಡಿದರು.
ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಒತ್ತಡ ಬಗೆಹರಿಸಿಕೊಳ್ಳುವ ಬಗ್ಗೆ ಮಾಹಿತಿಯನ್ನು ಇಂತಹ ಕಾರ್ಯಕ್ರಮಗಳಿಂದ ಪಡೆದುಕೊಳ್ಳಬಹುದು. ಒತ್ತಡವನ್ನು ನಿವಾರಿಸಿದಾಗ ಮಾತ್ರ ಫಲಿತಾಂಶ ಉತ್ತಮ ವಾಗಲು ಸಾಧ್ಯ. ಮುಂದಿನ ಜೀವನದಲ್ಲೂ ಒತ್ತಡಗಳನ್ನು  ಬದಿಗೊತ್ತುವ ಕಲೆಯನ್ನು ಇಂದಿನ ಯುವ ಪೀಳಿಗೆ  ವಿದ್ಯಾರ್ಥಿ ಜೀವನದಲ್ಲೇ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಎಚ್.ಪಿ. ಪರಮೇಶ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ  ನರಮಂಡಲದ ಕಾರ್ಯ ವೈಖರಿ, ಮೆದುಳಿನ ಬಳಕೆ, ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಡಾ.ಎಸ್.ಎ. ನಿತಿನ್ ಮಾಹಿತಿ ನೀಡಿದರು. ಪರೀಕ್ಷಾ ಒತ್ತಡ ನಿವಾರಣೆ ಬಗ್ಗೆ ಆರೋಗ್ಯಕರ ವಾತಾವರಣವನ್ನು  ವಿದ್ಯಾರ್ಥಿಗಳು  ಸೃಷ್ಟಿಸಿಕೊಳ್ಳುವ ಅಗತ್ಯತೆ ಬಗ್ಗೆ ಡಾ.ಸುಹಾಸ್‌ಕುಮಾರ್ ಶೆಟ್ಟಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement