ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ಲಾಸ್ಟಿಕ್ ಕವರ್ ಮೇಲೆ ಅಂಗಡಿ ಹೆಸರು ಮುದ್ರಣಕ್ಕೆ ಹಣ ಪಡೆದು ವಂಚನೆ

Srinivasa Murthy VN
Updated On : 24 Sept 2013, 11:38 am

ಕ.ಪ್ರ.ವಾರ್ತೆ ಹಾಸನ ಸೆ. 24
ಅಂಗಡಿ ಹೆಸರಿನ ಪ್ಲಾಸ್ಟಿಕ್ ಕವರ್ ಕಡಿಮೆ ದರದಲ್ಲಿ ಮುದ್ರಿಸಿಕೊಡುವುದಾಗಿ ಹೇಳಿ ಹಣ ಪಡೆದ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ಹಾಸನದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ. ಹಣ ಪಡೆದು ವಂಚಿಸಿದ ವ್ಯಕ್ತಿಎಸ್.ರಾಜೇಶ್ ಎಂದು ಹೇಳಲಾಗಿದೆ.
ವಂಚಕ ರಾಜೇಶ್ ಕಳೆದ 15 ದಿನಗಳಲ್ಲಿ ನಗರದ ಬಟ್ಟೆ ಅಂಗಡಿಗಳು, ಬೇಕರಿಗಳು ಸೇರಿದಂತೆ ಹಲವಾರು ಅಂಗಡಿ ಮುಂಗಟ್ಟಿಗೆ ಹೋಗಿ ತಮ್ಮ ಅಂಗಡಿಯ ಹೆಸರನ್ನು ಮುದ್ರಿಸಿ ಕಡಿಮೆ ದರದಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ಸಿದ್ದಪಡಿಸಿ ಕೊಡುವುದಾಗಿ ಹೇಳಿ ಅಂಗಡಿ ಮಾಲೀಕರನ್ನು ನಂಬಿಸಿ ಅವರಿಂದ ಮುಂಗಡ ಹಣ ಪಡೆದು, ಹೋದವನು ಮತ್ತೆ ವಾಪಸ್ ಬಾರದೆ ಹಾಗೂ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದಾನೆ.
ನಗರದ ಬಟ್ಟೆ ಅಂಗಡಿ ಮಾಲೀಕರಾದ ಶೆಹರ್, ಎಚ್.ಆರ್.ಶ್ವೇತ, ಮಹಮ್ಮದ್, ಸುಂದರರಾಜ್, ಬೇಕರಿ ಮಾಲೀಕ ರಾಘವೇಂದ್ರ ಸೇರಿದಂತೆ ಇತರೆ ಅಂಗಡಿಗಳಿಗೆ ರಾಜೇಶ್ ತೆರಳಿ ಅವರಿಗೆ ಕಡಿಮೆ ದರದಲ್ಲಿ ಅಂಗಡಿಯ ಹೆಸರನ್ನು ಮುದ್ರಿಸಿ ಕೊಡುವುದಾಗಿ ಹೇಳಿ ನಂಬಿಸಿದ್ದಾನೆ. ಬೆಂಗಳೂರು ಹಾಗೂ ಹುಬ್ಬಳಿಯಲ್ಲಿ ಮಾತ್ರ ಈ ಪ್ಲಾಸ್ಟಿಕ್ ಕವರ್‌ಗಳ ಮೇಲೆ ಅಂಗಡಿ ಹೆಸರನ್ನು ಮುದ್ರಿಸುವಂತಹ ವ್ಯವಸ್ಥೆ ಇದೆ. ಅಲ್ಲಿಗಿಂತ  ಕಡಿಮೆ ಬೆಲೆಗೆ ಅಂಗಡಿ ಹೆಸರನ್ನು ಮುದ್ರಿಸಿ ಪ್ಲಾಸ್ಟಿಕ್ ಕವರ್ ನೀಡುವುದಾಗಿ ಹೇಳಿ, ಪ್ರತಿಯೊಬ್ಬರ ಹತ್ತಿರ 2 ರಿಂದ 3 ಸಾವಿರ ರು. ಪಡೆದುಕೊಂಡು ಹೋಗಿ, ಸುಳ್ಳು ಬಿಲ್ ನೀಡಿದ್ದಾನೆ. ಮೋಸ ಹೋದ ಅಂಗಡಿ ಮಾಲೀಕರು ಈಗ ಕಂಗಾಲಾಗಿದ್ದಾರೆ. ರಾಜೇಶ್ ವಿರುದ್ಧ ಅಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement