ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಾಫೆಡ್‌ನಿಂದ ಇನ್ನೆರಡು ದಿನ ಕೊಬ್ಬರಿ ಖರೀದಿ: ಶಾಸಕ

Srinivasa Murthy VN
Updated On : 25 Sept 2013, 11:47 am

ಅರಸೀಕೆರೆ:  ನಾಫೆಡ್ ಕೇಂದ್ರದ ಮೂಲಕ ರೈತರಿಂದ ಕೊಬ್ಬರಿ ಖರೀದಿಸಲು  ಸೆ.26 ಮತ್ತು 27 ರಂದು ಎರಡು ದಿನಗಳ ಅವಕಾಶ ಕಲ್ಪಿಸಲಾಗಿದೆ ಎಂದು  ಶಾಸಕ ಕೆ.ಎಂ.ಶಿವಲಿಂಗೇಗೌಡ ಬುಧವಾರ ತಿಳಿಸಿದರು.
 ಪಟ್ಟಣದ ಕೃಷಿ ಉತ್ಪನ್ನ  ಮಾರುಕಟ್ಟೆ ಪ್ರಾಂಗಣದಲ್ಲಿ ತಾಲೂಕಿನ ರೈತರಿಂದ  ಬೆಂಬಲ ಬೆಲೆಯನ್ನು ನೀಡಿ ಕೊಬ್ಬರಿ ಖರೀದಿಸಲು ಜೂನ್ 20 ರಂದು ಪ್ರಾರಂಭಗೊಂಡಿದ್ದ ನಾಫೆಡ್ ಕೇಂದ್ರ ಇದುವರೆಗೂ ತಾಲೂಕಿನ ಸುಮಾರು 7 ಸಾವಿರ ರೈತರಿಂದ ಸುಮಾರು 75 ಸಾವಿರ ಕ್ವಿಂಟಲ್ ಕೊಬ್ಬರಿಯನ್ನು ಖರೀದಿಸಿದೆ.
 ಈಗಾಗಲೇ ಕೊಬ್ಬರಿ ಖರೀದಿಸಲು ರೈತರಿಗೆ 7 ಸಾವಿರ ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದ್ದು,  ಸುಮಾರು 7.5 ಕೋಟಿ ರು ಸಹಾಯಧನ  ತಾಲೂಕಿನ ರೈತರಿಗೆ ದೊರಕುವಂತಾಗಿದೆ.  ಆದರೆ  ಇನ್ನೂ 200 ಕಾರ್ಡ್‌ಗಳನ್ನು ಹೊಂದಿರುವ ರೈತರು ಈಗ ಕೊಬ್ಬರಿಯನ್ನು ಮಾರುಕಟ್ಟೆಗೆ  ತರುತ್ತಿರುವ ಕಾರಣ ಅವರಿಂದ  ಕೊಬ್ಬರಿಯನ್ನು ಖರೀದಿಸುವ ಸಲುವಾಗಿ ಸೆ.26 ಗುರುವಾರ ಮತ್ತು  ಸೆ. 27 ಶುಕ್ರವಾರ ಎರಡು ದಿನಗಳ ಅವಕಾಶ  ಕಲ್ಪಿಸಲಾಗಿರುವ ಕಾರಣ ನಾಫೆಡ್ ಕೇಂದ್ರ ಎರಡು ದಿನ ಕಾರ್ಯನಿರ್ವಹಿಸಲಿದೆ. ನಂತರ  ಮಾರುಕಟ್ಟೆಗೆ ಬರುವ ಕೊಬ್ಬರಿಯನ್ನು ಖರೀದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
 ಮುಂದಿನ ದಿನಗಳಲ್ಲಿ ಕೊಬ್ಬರಿಗೆ  ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುವ ಆಶಾಭಾವನೆಯಿದ್ದು, ಆದಕಾರಣ ನಾಫೆಡ್ ಕೇಂದ್ರ ತನ್ನ ಕಾರ್ಯವನ್ನು  ಮುಕ್ತಾಯಗೊಳಿಸಲಿದೆ ಎಂದರು.
 ತಾಲೂಕಿನ ರೈತರ ಸಂಕಷ್ಟದ ಪರಿಸ್ಥಿತಿಗೆ ಸ್ಪಂದಿಸಿ  ನಾಫೆಡ್ ಕೇಂದ್ರ ಆರಂಭಿಸಿದ ರಾಜ್ಯ ರೈತರ ಸಹಕಾರ  ಮಹಾಮಂಡಳಿ ಅಧಿಕಾರಿಗಳ ವರ್ಗಕ್ಕೂ ನಾಫೆಢ್ ಕೇಂದ್ರದ ಅಧಿಕಾರಿಗಳಿಗೆ ಸ್ಥಳೀಯ ಎಪಿಎಂಸಿ ಆಡಳಿತ  ಮಂಡಳಿ ಸದಸ್ಯರು ಮತ್ತು ಅಧಿಕಾರಿ ವರ್ಗ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಗೆ ತಾವು ತಾಲೂಕಿನ ರೈತರ  ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. ಅಜ್ಜಪ್ಪ, ಮಾಜಿ ಅಧ್ಯಕ್ಷ ಮುರುಂಡಿ ಶಿವಲಿಂಗಪ್ಪ, ಸದಸ್ಯ ಕಳ್ಳಹಳ್ಳಿ ನಾಗರಾಜು, ಎನ್.ಎಸ್.ಸಿದ್ದರಾಮಶೆಟ್ಟಿ, ಈಶ್ವರಪ್ಪ ಉಪಸ್ಥಿತರಿದ್ದರು.

ಆರೋಗ್ಯ ಉಚಿತ ತಪಾಸಣೆ ಶಿಬಿರ
ಹಾಸನ: ಜಿಲ್ಲಾ ರೋಟರಿ ಕ್ವಾಂಟ ಸಂಸ್ಥೆ ಹಾಗೂ ಬೆಂಗಳೂರಿನ ಸಾಗರ್ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ 27ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಬಿ.ಎನ್.ರಮೇಶ್ ತಿಳಿಸಿದರು.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೃದಯ ರೋಗ, ನರರೋಗ, ಮೂತ್ರಪಿಂಡ ರೋಗಗಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುತ್ತಿದ್ದು, ಅರ್ಥಿಕವಾಗಿ ಕಷ್ಟದಲ್ಲಿ ಇರುವವರಿಗೆ, ಬಡವರಿಗೆ ಅನುಕೂಲದ ಹಿತದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ನ್‌ಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಶಿಬಿರವು ನಡೆಯಲಿದೆ ಎಂದರು.
 ತಪಾಸಣೆಯಲ್ಲಿ ಸಾಗರ್ ಆಸ್ಪತ್ರೆಯ ಡಾ.ಶ್ರೀಧರ, ಡಾ.ಕುಮಾರ್, ಡಾ.ಗಿರೀಶ್ ಭಾಗವಹಿಸಲಿದ್ದು, ಉಚಿತವಾಗಿ ತಪಾಸಣೆ, ಬಿಪಿ, ಇಸಿಜಿ, ಎಕೋ ಸ್ಕಾನಿಂಗ್ಪ್‌ರೀಕ್ಷೆ ಮಾಡಲಾಗುತ್ತಿದ್ದು, ಯಶಸ್ವಿನಿ, ಬಿಪಿಎಲ್, ಆರೋಗ್ಯ ಭಾಗ್ಯ, ಕಾರ್ಡು ಹೊಂದಿರುವವರಿಗೆ ಬಿಎಸ್‌ಎನ್‌ಎಲ್, ಇಸ್ರೋ ಸಂಸ್ಥೆಉದ್ಯೋಗಿಗಳಿಗೆ ಮತ್ತು ಟಿಪಿಎ ವಿಮಾದಾರರಿಗೆ ಅವಶ್ಯಕತೆ ಕಂಡು ಬಂದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ.
ಮಾಹಿತಿಗೆ ಸುಬ್ರಮಣ್ಯ 9591991807, ಉಮೇಶ್ಕುಮಾರ್ 9591991829, ರವಿ 9964698097 ಸಂಪರ್ಕಿಸಬಹುದಾಗಿದೆ. ಸಂಸ್ಥೆಯ ಅಧ್ಯಕ್ಷ ಜಿತೇಂದ್ರ, ಕಾರ್ಯದರ್ಶಿ ಇ.ಮಂಜುನಾಥ್, ರವಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement