ಸಮುದಾಯ ಭವನಕ್ಕೆ ಶಂಕುಸ್ಥಾಪನೆ
ಬೇಲೂರು: ಮಾಜಿ ಪ್ರಧಾನಿ ಹಾಗೂ ಸಂಸದ ಎಚ್.ಡಿ.ದೇವೇಗೌಡ ಅವರು ಗ್ರಾಮದ ಮೇಲಿನ ಅಭಿಮಾನದಿಂದ ಸಮುದಾಯ ಭವನ ನೀಡಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜು ಹೇಳಿದರು.
ತಾಲೂಕಿನ ಮಾಲೂರು ಗ್ರಾಮದ ಕಾಲೋನಿಯಲ್ಲಿ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಅಗಮಿಸಿದಾಗ ಗ್ರಾಮದ ಮಹಿಳೆಯರು ಭವಾನಿ ರೇವಣ್ಣ ಅವರಿಗೆ ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದರ ಅನುದಾನದಲ್ಲಿ 5 ಲಕ್ಷ ರು. ನೀಡಿದ್ದಾರೆ ಎಂದರು.
ಗ್ರಾಮದ ಸುತ್ತಮುತ್ತಲಿನ 6 ಹಳ್ಳಿಗಳಿಗೆ ಸಮುದಾಯ ಭವನ ನಿರ್ಮಾಣ ಮಾಡುತ್ತಿರುವುದರಿಂದ ಅನುಕೂಲವಾಗಲಿದೆ. ಸಮುದಾಯ ಭವನಕ್ಕೆ ಇನ್ನಷ್ಟು ಅನುದಾನ ನೀಡುವಂತೆ ಮಾಜಿ ಪ್ರಧಾನಿ ಮತ್ತು ಜಿಪಂಗೆ ಮನವಿ ಮಾಡಲಾಗುವುದು. ಭವನ ನಿರ್ಮಾಣದಲ್ಲಿ ಯಾವುದೇ ಲೋಪದೋಷ ಕಂಡುಬರದ ರೀತಿಯಲ್ಲಿ ಗುತ್ತಿಗೆದಾರರು ಎಚ್ಚರಿಕೆ ವಹಿಸಬೇಕು ಎಂದರು.
ಜಿಪಂ ಸದಸ್ಯೆ ಜಿ.ಟಿ.ಇಂದಿರಾ, ಜೆಡಿಎಸ್ ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಜೆಡಿಎಸ್ ಮುಖಂಡ ಕರಿಕಟ್ಟಿಹಳ್ಳಿ ಲಿಂಗೇಶ್, ಕಳ್ಳೇರಿ ಗ್ರಾಪಂ ಅಧ್ಯಕ್ಷೆ ಶೈಲಾ, ಗ್ರಾಪಂ ಸದಸ್ಯೆ ಪಾರ್ವತಿ ಗ್ರಾಮದ ಹೊಯ್ಸಳ, ಭದ್ರಯ್ಯ, ರುದ್ರಮ್ಮ, ಗುತ್ತಿಗೆದಾರ ವಸಂತ್ ಇನ್ನೂ ಮೊದಲಾದವರು ಉಪಸ್ಥಿತರಿದ್ದರು.