ಬೆಳ್ಳಿಹಬ್ಬದ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ
ಕ.ಪ್ರ.ವಾರ್ತೆ ಹಾಸನ ಸೆ.26
ನಗರದ ನೆಹರು ರಸ್ತೆಯ ಮರಿಯಪ್ಪಗಲ್ಲಿಯಲ್ಲಿ ಶ್ರೀವಿದ್ಯಾ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ ಕಳೆದ 25 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬಂದಿರುವ ಗಣೇಶೋತ್ಸವ ಬೆಳ್ಳಿ ಹಬ್ಬದ ಸಂಭ್ರಮವನ್ನು ಅದ್ದೂರಿಯಿಂದ ನಡೆಸಲಾಯಿತು. ಬೆಳ್ಳಿ ಹಬ್ಬದ ಅಂಗವಾಗಿ ಈ ವರ್ಷ ಹತ್ತು ದಿನಗಳು ವಿಜೃಂಭಣೆಯಿಂದ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಎಚ್.ಎಸ್.ಪ್ರಕಾಶ್, ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪ, ನಗರಸಭೆ ಸದಸ್ಯ ಪ್ರಸನ್ನಕುಮಾರ್, ಎಚ್.ಬಿ.ಗೋಪಾಲ್, ಮಾಜಿ ಸದಸ್ಯ ಮಂಜು(ಬಂಗಾರಿ), ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ಎಚ್.ಎ.ಗೋವಿಂದರಾಜಶ್ರೇಷ್ಠಿ ಜನಮಿತ್ರ ಪತ್ರಿಕೆ ಪ್ರಧಾನ ಸಂಪಾದಕ ಕೆ.ಪಿ.ಎಸ್. ಪ್ರಮೋದ್, ಪತ್ರಕರ್ತ ಮದನಗೌಡ, ಆರ್.ಪಿ.ವೆಂಕಟೇಶ್‌ಮೂರ್ತಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ, ಚಿನ್ನ ಬೆಳ್ಳಿ ವರ್ತಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಮೋದ್, ತಾಲೂಕು ಚಿನ್ನ ಬೆಳ್ಳಿ ಅಧ್ಯಕ್ಷ ಮಂಜುನಾಥ್, ತೇರಾಪಂಥ್ ಅಧ್ಯಕ್ಷ ಚಾಂದ್‌ಮಲ್ ಸುರಾನ ಸಮಿತಿಯ ಪ್ರಮುಖರಾದ ಆರ್.ಮಹಾವೀರ್‌ಚಂದ್‌ಬನ್ಸಾಲಿ, ರಘುರಾಮ, ಪಾಂಡುರಂಗ, ನಾರಾಯಣ್, ಬಿ.ಎ.ಗಣೇಶ್ ಇತರರು ಇದ್ದರು.
ನಂತರ ನಡೆದ ಮೆರವಣಿಗೆಗೆ ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಾಡಿನ ಹಲವು ಪ್ರಖ್ಯಾತ ಕಲಾ ತಂಡಗಳು ಭಾಗವಹಿಸಿದ್ದವು. ನಂದಿ ಧ್ವಜ, ವಾದ್ಯವೃಂದ ಹಾಗೂ ವಿಶಿಷ್ಟವಾಗಿ ಅಲಂಕರಿಸಿದ ರಥ ಮತ್ತು ಧರ್ಮಸ್ಥಳದ ನಾನಾ ಕಲಾ ತಂಡಗಳು ಮೆರವಣಿಗೆಯ ಆಕರ್ಷಣೆಯಾಗಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆದ ನಂತರ ಗಣಪತಿಯನ್ನು ವಿಸರ್ಜಿಸಲಾಯಿತು.
ಅ. 10 ರಂದು ಭವಿಷ್ಯನಿಧಿ ಅದಾಲತ್
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಭಾರತ ಸರಕಾರವು ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಛೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಅ.10 ರಂದು ಭವಿಷ್ಯನಿಧಿ ಅದಾಲತ್ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ಅರ್ಜಿಯನ್ನು ಖುದ್ದಾಗಿ ಅ.10ರ ಬೆಳಗ್ಗೆ 11 ಕ್ಕೆ ಹಾಗೂ ಅ.9 ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಕೋರಿದ್ದಾರೆ. ಎಲ್ಲಾ ದೂರುಗಳನ್ನು ಅದೇ ದಿನ ಇತ್ಯರ್ಥ ಪಡಿಸಲು ಶ್ರಮ ವಹಿಸಲಾಗುತ್ತದೆ. ಸದಸ್ಯರು ಹಾಗೂ ಉದ್ಯೋಗದಾತರು ಢಿಢಿಢಿ.ಜಠಜ್ಝ್ಜಿಟಡ.್ಜ್ಟಢ.್ಝಟಿ ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಭವಿಷ್ಯನಿಧಿ ಮೊತ್ತವನ್ನು ಸದಸ್ಯರ ಖಾತೆಗೆ 24 ಘಂಟೆಗಳೊಳಗೆ ಜಮಾ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಎಲ್ಲಾ ಸದಸ್ಯರು ಅರ್ಜಿ ಜೊತೆಗೆ ತಮ್ಮ ಬ್ಯಾಂಕ್ ಪುಸ್ತಕದ ನಕಲು ಪ್ರತಿಯನ್ನು ಲಗತ್ತಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಹಕ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು. ಎಂದು ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರಾದ ಪ್ರಭಾವತಿ ಬಿ.ಜೋಶಿ ತಿಳಿಸಿದ್ದಾರೆ. ದೂ 08262-234106, ಇ-ಮೇಲ್: sro.chikamagalurzepfindia.gov.in