ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸದಸ್ಯರ ನಡುವೆ ಮಾತಿನ ಚಕಮಕಿ, ಧರಣಿ

Srinivasa Murthy VN
Updated On : 26 Sept 2013, 11:59 am

ಕ.ಪ್ರ.ವಾರ್ತೆ ಚನ್ನರಾಯಪಟ್ಟಣ ಸೆ.26
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ನಡೆದ ಸಾಮಾನ್ಯ ಸಭೆಯಲ್ಲಿ  ಸದಸ್ಯರ ನಡುವೆ ಮಾತಿನ ಚಕಮಕಿ, ಕೆಲ ಕಾಲ  ಧರಣಿ ನಡೆಯಿತು.
ಸಂಘದ ಅಧ್ಯಕ್ಷ ಕಾಳೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ನಿರ್ದೇಶಕರ ಸಂಖ್ಯೆಯನ್ನು ಅಧಿಕಗೊಳಿಸಬೇಕು ಎಂದು ಕೆಲ ಸದಸ್ಯರು ತಿಳಿಸಿದರು. ಆದರೆ ಇದಕ್ಕೆ ವಿರುದ್ಧವಾಗಿ ಕೆಲ ಸದಸ್ಯರು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಿ, 11 ಸಂಘಗಳ ಆಡಳಿತ ಬದಲಾವಣೆ ಮಾಡಬೇಡಿ ಎಂದರು.
ಈ ವಿಷಯವಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ  ವಾತಾವರಣ ಉಂಟಾಯಿತು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಉದ್ರಿಕ್ತರನ್ನು ಸಮಾಧಾನಪಡಿಸಲು ಹರಸಾಹಸ ಪಟ್ಟರು.
ನಂತರ ಸಭೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗುವ ಎ. ತರಗತಿ ನಿರ್ದೇಶಕರ ಏಳು ಸ್ಥಾನಗಳಲ್ಲಿ ಒಂದನ್ನು ಕಡಿಮೆ ಮಾಡಬೇಕು. ಕೃಷಿ ಸದಸ್ಯರಿಂದ ಆಯ್ಕೆಯಾಗುವ ಬಿ. ತರಗತಿ ನಿರ್ದೇಶಕರ ಐದು ಸ್ಥಾನಗಳ ಪೈಕಿ ಒಂದನ್ನು ಹೆಚ್ಚಿಸಿ ಎರಡರಿಂದಲೂ 6-6 ನಿರ್ದೇಶಕರನ್ನು ಆಯ್ಕೆ ಮಾಡಲು ಬೈಲಾ ತಿದ್ದುಪಡಿ ಮಾಡಬೇಕೆಂದು ಕೆಲವು ಸದಸ್ಯರು ಹಾಗೂ ನಿರ್ದೇಶಕರು ಪಟ್ಟು ಹಿಡಿದರು.
ಕೆಲವರು ಈಗಿರುವಂತೆಯೇ ಮುಂದುವರಿಯಲಿ, ಬೇಕಾದರೆ ಕೃಷಿ ಸದಸ್ಯರಿಂದ 1000 ಷೇರು ಹಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಿರುವ ನಿರ್ದೇಶಕರಿಂದ 10,000 ರು. ಷೇರು ಹಣ ಸಂಗ್ರಹಹಿಸುವಂತೆ ಸಲಹೆ ನೀಡಿದರು.
ಟಿಎಪಿಸಿಎಂಸಿ ಅಧ್ಯಕ್ಷ ಜನಿವಾರ ಕಾಳೇಗೌಡ ಮಾತನಾಡಿ, ಈಗಾಗಲೇ 2382 ಕೃಷಿ ಸದಸ್ಯರಿಂದ 500 ರು. ಷೇರು ಹಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಆಯ್ಕೆಯಾಗಿರುವ ನಿರ್ದೇಶಕರಿಂದ 7500 ರು. ಷೇರು ಹಣ ಸಂಗ್ರಹಿಸುವುದಾಗಿ ತಿಳಿಸಿದರು.
ಆದರೆ ನಿರ್ದೇಶಕ ಆನಂದ್, ಮಳ್ಳೇನಹಳ್ಳಿ ರಾಜು ಹಾಗೂ ಕೆಲಸ ಸದಸ್ಯರು ಕೆಲಕಾಲ ಪ್ರತಿಭಟನೆ ನಡೆಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ನಟರಾಜ್ ಸಹಕಾರ ಸಂಘದ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾತನಾಡಿ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು. ಕೆಲ ನಿರ್ದೇಶಕರು  ತಹಸೀಲ್ದಾರ್ ಅವರಿಗೆ ಸಂಘದ ಆಡಳಿತದ ಬಗ್ಗೆ ಮನವಿ ಪತ್ರ ನೀಡಿ  ಪ್ರತಿಭಟನೆ ಹಿಂಪಡೆದರು.
ಸಭೆಯಲ್ಲಿ ನಿರ್ದೇಶಕ ಬಿ.ಎಚ್.ಶಿವಣ್ಣ, ಡಿ.ಎಲ್.ಮಂಜುನಾಥ್, ವಿ.ಎನ್.ರಾಜಣ್ಣ, ಕೆ.ಟಿ.ಮಂಜುನಾಥ್, ಪುಟ್ಟಸ್ವಾಮಿಗೌಡ, ಎಂ.ಎಸ್.ರಾಜು, ತಾರಾನಾಥ್,. ಮರುವನಹಳ್ಳಿ ರಂಗೇಗೌಡ, ಜಯರಾಂ, ಶಿವಣ್ಣ, ಶಂಕರಲಿಂಗೇಗೌಡ, ರೈತಸಂಘದ ಮುಖಂಡ ರವಿ, ಕುಂಬೇನಹಳ್ಳಿ ನಾಗರಾಜ್, ಅಣ್ಣಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement