ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಮತೋಲನ ಆಹಾರದಿಂದ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ

Srinivasa Murthy VN
Updated On : 26 Sept 2013, 11:59 am

ಕ.ಪ್ರ.ವಾರ್ತೆ ಬೇಲೂರು ಸೆ. 26
ಹಾಲು ಉತ್ಪಾದಕರು ಹೈನುರಾಸುಗಳಿಗೆ ಹಸಿರು ಹಾಗೂ ಒಣಮೇವು ಮತ್ತು ಪಶು ಆಹಾರವನ್ನು ಸಮತೋಲನವಾಗಿ ನೀಡಿ ಗುಣಮಟ್ಟದ ಹಾಲು ಉತ್ಪಾದನೆಗೆ ಪೂರಕವಾಗಬೇಕು ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಚ್.ಎಸ್.ಮೋಹನ್ ಕರೆ ನೀಡಿದರು.
ತಾಲೂಕಿನ ಹೆಬ್ಬಾಳು ಸಮುದಾಯ ಭವನದಲ್ಲಿ ಪ್ರಸಕ್ತ ಸಾಲಿನ ಹಾಲು ಉತ್ಪಾದಕರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳ ಲಾಭಾಂಶ ಕಡಿಮೆಯಾಗಲು ಗುಣ ಮಟ್ಟದ ಹಾಲು ಕಾರಣ ಈ ದಿಸೆಯಲ್ಲಿ ರೈತರು ಎಚ್.ಆರ್.ತಳಿಯಿಂದ ಹಾಲು ಹೆಚ್ಚಿಗೆ ಉತ್ಪಾದನಾ ತಳಿ ಎಂದು ಒಲವು ತೊರಿದ ಪರಿಣಾಮ ಈ ತಳಿಯಲ್ಲಿ ಜಿಡ್ಡಿನ ಅಂಶವಿಲ್ಲದ ಹಾಲಿನಲ್ಲಿ ಗುಣಮಟ್ಟ ಇರಲು ಸಾಧ್ಯವಾಗುತ್ತಿಲ್ಲ. ಈ ದಿಸೆಯಲ್ಲಿ ರೈತರಲ್ಲಿ ಜರ್ಸಿ, ಎಮ್ಮೆ, ನಾಟಿ ಹಸುಗಳನ್ನು ಸಾಕುವ ಕಡೆ ಗಮನ ನೀಡಬೇಕು ಎಂದು ಮನವಿ ಮಾಡಿದರು.
 ಸಂಘವು ಪ್ರಸಕ್ತ 2.11 ಲಕ್ಷ ರು. ಲಾಭಗಳಿಸಿದೆ. ಈ ವರ್ಷ ನೂತನ ಕಟ್ಟಡ ಆರಂಭ ಮಾಡಲಾಗುತ್ತದೆ. ಷೇರುದಾರರಿಗೆ ಬೋನಸ್ ನೀಡಲಾಗುವುದು ಎಂದು ಘೋಷಣೆ ಮಾಡಿದ ಅವರು,  ಉತ್ಪಾದಕರು ಮತ್ತು ಆಡಳಿತ ಮಂಡಳಿ ನಡುವೆ ಉತ್ತಮವಾದ ಸಂಬಂಧವಿದ್ದರೆ ಮಾತ್ರ ಸಂಘ-ಸಂಸ್ಥೆ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದರು.
 ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ  ಬಿ.ಬೋರಯ್ಯ ಮಾತನಾಡಿ,  2011-12 ಸಾಲಿನ 1,82,613 ಲಕ್ಷ ರು  ಈ ಬಾರಿ ಹಾಲು ಉತ್ಪಾದಕರಿಗೆ ಬೋನಸ್ ನೀಡಲಾಗುತ್ತದೆ, ಹಾಸನ ಹಾಲು ಒಕ್ಕೂಟದಲ್ಲಿ ಹೆಬ್ಬಾಳು ಹಾಲು ಉತ್ಪಾದಕರ ಸಂಘ ಉತ್ತಮ ಹೆಸರು ಪಡೆದಿದ್ದು, ನೂತನ ಕಟ್ಟಡ ಮಾಡುವ ಮೂಲಕ ಸಂಘ ಇನ್ನು ಉತ್ತಮವಾಗಿ ಬೆಳೆಯಲಿ ಎಂದು ಹೇಳಿದರು.
 ರೈತರಿಗೆ ಸಂಘದಿಂದ ಅನೇಕ ಸೌಲಭ್ಯಗಳು ಉಪಯೋಗ ಮಾಡಿಕೊಳ್ಳಬೇಕು, ಗುಣ ಮಟ್ಟದ ಹಾಲು ಉತ್ಪಾಧನೆಯಲ್ಲಿ ಆಡಳಿತ ಮಂಡಳಿಯ ಕರ್ತವ್ಯ ಇರುತ್ತದೆ, ಸಿಬ್ಬಂದಿ  ಜಾಗೃತಿಯಿಂದ ಹಾಲು ಅಳೆಸಿ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿ ಎಂದರು.  ಸಂಘದ ಕಾರ್ಯದರ್ಶಿ ಶಂಕರೇಗೌಡ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಸಂಘವು 1.29 ಕೋಟಿ ಹಾಲು ಖರೀದಿ ಮಾಡಿದ್ದು, 1,29,14319 ಕೊಟಿ ರು. ಉತ್ಪಾದಕರಿಗೆ ಪಾವತಿ ಮಾಡಿ ಸುಮಾರು 2,11 ಲಕ್ಷ ಲಾಭಾಂಶ ಪಡೆದಿದೆ, ಅಲ್ಲದೆ ಬಿಎಂಸಿ ನಿರ್ವಹಣೆಯಲ್ಲಿ ನಮಗೆ ಕಡಿಮೆ ದರದಲ್ಲಿ ನಿರ್ವಹಣಾ ವೆಚ್ಚ ಒಕ್ಕೂಟದಿಂದ ಬರುತ್ತಿದೆ, ಈ ನಿಟ್ಟಿನಲ್ಲಿ ಒಕ್ಕೂಟದವರು ಇಂದಿನ ಡೀಸೆಸ್ ಹಾಗೂ ಇನ್ನಿತರ ವೆಚ್ಚಗಳನ್ನು ಗಮನಿಸಿ ನಿರ್ವಹಣೆ ವೆಚ್ಚ ಹೆಚ್ಚಿಸಿ ಸಂಘದ ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಮನವಿ ಮಾಡಿದರು.
  ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿಘ್ನೇಶಯ್ಯ, ಸದಸ್ಯರಾದ  ವೀರೇಗೌಡ, ಶಿವಕುಮಾರ್, ಲಕ್ಷ್ಮಣ್, ವಿರೂಪಾಕ್ಷ, ದಾನಮ್ಮ, ಪರಮೇಶ್, ಶೇಷೇಗೌಡ ಲಿಂಗೇಶ್ ಇತರರು ಇದ್ದರು. ಜಗದೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement