ಈ ಬಾರಿಯ ಚುನಾವಣೆ ಮಹತ್ವದ್ದು: ಕಾಂತರಾಜ್
ಆಲೂರು: ದೇಶದ ಉತ್ತಮ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಚುನಾವಣೆ ಅತ್ಯಂತ ಮಹತ್ವವಾದುದೆಂದು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಆರ್. ಕಾಂತರಾಜ್ ಹೇಳಿದರು.
ಅವರು ಪಟ್ಟಣದ ಬಿಜೆಪಿ ಕಚೇರಿಯ ಸಂಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 34 ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್‌ನ ಅಸಮರ್ಥ ನಾಯಕತ್ವದಿಂದಾಗಿ ದೇಶವನು ಭಯೋತ್ಪಾದನೆ, ಆಕ್ರಮಣ, ಅತಿಕ್ರಮಣ, ಹಗರಣ ಬೆಲೆ ಏರಿಕೆ ಮುಂತಾದ ಸಮಸ್ಯೆಗಳು ಕಾಡುತ್ತಿವೆ. ಅವುಗಳನು ಹೋಗಲಾಡಿಸಿ ನವ್ಯ ಸಮಾಜ ಕಟ್ಟಬೇಕಾದರೆ ಸಮಾನತೆ, ಸಹಬಾಳ್ವೆಯಿಂದ ಸಸಿ ನೆಟ್ಟು ಪೋಷಿಸಬೇಕಾದರೆ, ಈ ಬಾರಿಯ ಚುನಾವಣೆಯಲ್ಲಿ ನರೇಂದ್ರ ಮೋದಿ ಕೈ ಬಲಪಡಿಸಬೇಕು. ಅದಕ್ಕೆ ಎಲ್ಲರೂ ಸಂಘಟಿತರಾಗಬೇಕೆಂದರು.
ಜಿಲ್ಲಾ ಬಿಜೆಪಿ ಕಾರ್ಯಕಾರಿ ಸಮಿತಿ ನಿರ್ದೇಶಕ ಎ.ಎಚ್. ರಮೇಶ್ ಮಾತನಾಡಿ, ಪರಕೀಯರ ಆಗಮನದಿಂದ ದೇಶ ಕಷ್ಟಕ್ಕೆ ಸಿಲುಕಿತ್ತು ಅನಂತರ 1947ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಕಾಂಗ್ರೆಸ್‌ನ ಆಳ್ವಿಕೆಯಿಂದ ದೇಶ ಹಲವಾರು ಸಮಸ್ಯೆಗಳನು ಎದುರಿಸಬೇಕಾಯಿತು. ಈ ಒಂದು ಕಾರಣದಿಂದ 22 ಪಕ್ಷಗಳು ಸಂಘಟಿತವಾಗಿ 1980 ರಲ್ಲಿ ಬಿಜೆಪಿ ಉದಯವಾಯಿತು. ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶ ನೆಮ್ಮದಿ ಕಂಡಿತ್ತು. ಮತ್ತೆ ಮೋದಿಯನು ಗೆಲ್ಲಿಸುವುದರ ಮೂಲಕ ಪಕ್ಷವನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.
ತಾಲೂಕು ಶಕ್ತಿ ಕೇಂದ್ರದ ಅಧ್ಯಕ್ಷ ಪೀತಾಂಬರ್, ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಕೆ.ಆರ್. ಲೋಕೇಶ್, ಜಿಲ್ಲಾ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಾಲಲೋಚನ, ಮುಖಂಡರಾದ ಧರ್ಮಪ್ಪ, ಸಿ.ಟಿ. ಪಾಲಾಕ್ಷ, ಹೋಬಳಿ ಅಧ್ಯಕ್ಷ ಆರ್. ನಾಗರಾಜ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.
'ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಿ'
ಜಾವಗಲ್: ಜಾವಗಲ್ ಹೋಬಳಿ ಪ್ರಜ್ಞಾವಂತ ಮತದಾರರು ಕಾಂಗ್ರೆಸ್,ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಪಂ ಸದಸ್ಯ ಲಕ್ಷ್ಮಣ್ ತಿಳಿಸಿದರು.
ಜಾವಗಲ್‌ನಲ್ಲಿ ಭಾನುವಾರ ಬಿಜೆಪಿ ಸಂಸ್ಥಾಪನಾ ದಿನವಾದ್ದರಿಂದ ಪ್ರತಿ ಮನೆಗಳಿಗೆ ಭೇಟಿ ನೀಡಿ ನರೇಂದ್ರಮೋದಿ ನಾಯಕತ್ವಕ್ಕೆ ಬೆಂಬಲ ಕೋರಿ ಹಾಸನ ಜಿಲ್ಲಾ ಬಿಜೆಪಿ ಅಭ್ಯರ್ಥಿ ವಿಜಯಶಂಕರ್ ಅವರಿಗೆ ಮತ ನೀಡುವಂತೆ ದೇಶದ ಸುಭದ್ರತೆ ಉತ್ತಮ ಆಡಳಿತಕ್ಕಾಗಿ ನರೇಂದ್ರ ಮೋದಿ ಅವರನು ಬೆಂಬಲಿಸಬೇಕು ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಹೊಂದಾಣಿಕೆ ಯಾವುದೇ ಕಾರಣಕ್ಕೂ ಇಲ್ಲ ಎಂದ ಅವರು, ಮತದಾರರು ಇಂತಹ ಮಾತುಗಳಿಗೆ ಕಿವಿಕೊಡಬಾರದು ಎಂದರು. ಬಿಜೆಪಿ ಜಿಲ್ಲಾ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್, ಹೋಬಳಿ ಬಿಜೆಪಿ ಅಧ್ಯಕ್ಷ ಶಾಂತಕುಮಾರ್, ಪ್ರಧಾನ ಕಾರ್ಯದರ್ಶಿ ರಮೇಶ್, ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಕಲ್ಲಹಳ್ಳಿ ವಿಘೇಶ್, ಗ್ರಾಪಂ ಸದಸ್ಯ ರಮೇಶ್, ತಾಲೂಕು ಕಾರ್ಯದರ್ಶಿ ಲಕ್ಷ್ಮಣ್ ನಾಯಕ್, ಟೈಲರ್ ಪಾಪಣ್ಣ, ತಾಲೂಕು ಕಾರ್ಯದರ್ಶಿ ಅನಿತಾ, ಮಾಜಿ ಸದಸ್ಯೆ ಕುಸುಮಾ ಇದ್ದರು.