'ಪ್ರಜಾಪ್ರಭುತ್ವದ ಸುಭದ್ರತೆಗೆ ಮತದಾನ ಹಕ್ಕು ಚಲಾಯಿಸಿ'
ಹೊಳೆನರಸೀಪುರ: ಪ್ರಜಾಪ್ರಭುತ್ವದ ಸುಭದ್ರತೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ತನ ಮತದಾನ ಹಕ್ಕನು ಚಲಾಯಿಸಿದಾಗ ಮಾತ್ರ ದೇಶ ಸುಭದ್ರತೆಯಿಂದ ಇರಲು ಸಾಧ್ಯವೆಂದು ತಾಲೂಕು ದಂಡಾಧಿಕಾರಿ ಹಾಗು ತಹಸೀಲ್ದಾರ್ ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಗಾಂದಿ ವೃತ್ತದಲ್ಲಿ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಬಿ.ಟಿ. ಮಾನವ ಕಲಾ ತಂಡದ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಮತದಾನದ ಹಕ್ಕನು ತಪ್ಪದೆ ಚಲಾಯಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ಬೀದಿ ನಾಟಕವನು ಆಯೋಜಿಸಲಾಗಿದೆ. ಇದನು ಸಾರ್ವಜನಿಕರು ಅರ್ಥೈಸಿಕೊಂಡು ತಮ್ಮ ಹಕ್ಕನು ಚಲಾಯಿಸಿ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು.
ಬೀದಿ ನಾಟಕವನಾಡಿದ ಬಿ.ಟಿ. ಮಾನವ ತಂಡ, ಹಾಡಿನ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ ಮಾಡಿತು. ಬೀದಿ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಚುನಾವಣಾ ನೋಡೆಲ್ ಅಧಿಕಾರಿ ಆರ್. ನರಸಿಂಹನ್, ಸತೀಶ್ ಮತ್ತಿತರೆ ಅಧಿಕಾರಿಗಳ ತಂಡ ಹಾಜರಿದ್ದು ಕಲಾ ತಂಡದ ಪ್ರದರ್ಶನಕ್ಕೆ ಸಹಕಾರ ನೀಡಿದರು.