ಪ್ರಣಾಳಿಕೆಯಲ್ಲ, ಮೋದಿ ಅಜೆಂಡಾ
ಹಾಸನ: ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಕೇವಲ ಮೋದಿಯ ಅಜೆಂಡಾ ಆಗಿದೆ ಎಂದು ಕೇಂದ್ರ ಸಚಿವ ರೆಹಮಾನ್ ಖಾನ್ ಟೀಕಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಡವಾಗಿ ಬಿಜೆಪಿಯವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಆ ಪ್ರಣಾಳಿಕೆಯಲ್ಲಿ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಮದರಸಾಗಳಿಗೆ ಹೊಸ ರೂಪ, 370ನೇ ವಿಧಿ ರದ್ದು, ಏಕರೂಪ ಸಂಹಿತೆ ಜಾರಿ ಆರ್ಥಿಕ ಸುಧಾರಣೆಯಂತಹ ಅಂಶಗಳನು ಪ್ರಸ್ತಾಪಿಸಿದ್ದಾರೆ. ಈ ರೀತಿಯ ಪ್ರಣಾಳಿಕೆ ಬಿಡುಗಡೆ ಮಾಡುವ ಮೂಲಕ ದೇಶದಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೋದಿ ಅಜೆಂಡಾ: ಪ್ರಣಾಳಿಕೆಯಲ್ಲಿ ಹೊಸದಾದ ಅಂಶವಾಗಲಿ ಅಥವಾ ಜನರಿಗೆ ಭರವಸೆ ಮೂಡಿಸುವಂತಹ ಅಂಶಗಳು ಹಾಗೂ ಅಭಿವೃದ್ಧಿಯಂತಹ ಕಾರ್ಯಗಳಾವುದೂ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಗೆ ಹೋಲಿಸಿದರೆ ಬಿಜೆಪಿ ಪ್ರಣಾಳಿಕೆಯಿಂದ ದೇಶಕ್ಕೆ ಉಪಯೋಗ ಆಗುವಂಥ ಯಾವ ಅಂಶವೂ ಇಲ್ಲ. ಇದು ಬಿಜೆಪಿಯ ಪ್ರಣಾಳಿಕೆಯಾಗದೇ, ನರೇಂದ್ರ ಮೋದಿ ಅವರ ಅಜೆಂಡಾ ಎಂದರು.
ಸ್ಪಷ್ಟವಾಗಿ ತೋರಿಸುತ್ತಿಲ್ಲ: ನರೇಂದ್ರ ಮೋದಿ ಅವರು ಗುಜರಾತ್ ಅಭಿವೃದ್ಧಿಪಡಿಸಿದ್ದಾರೆ ಅಂತ ದೇಶದಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಮೋದಿ ಅಧಿಕಾರಕ್ಕೆ ಬರುವ ಮುನವೇ ಗುಜರಾತ್ ಅಭಿವೃದ್ಧಿ ರಾಜ್ಯವಾಗಿತ್ತು. ಅಲ್ಲಿ ದೊಡ್ಡ ಗೊಬ್ಬರದ ಕಾರ್ಖಾನೆಗಳನು ಕಾಂಗ್ರೆಸ್ ನಿರ್ಮಾಣ ಮಾಡಿತ್ತು. ಬಿಜೆಪಿಯವರು ಕೇವಲ ಬಾಯಿ ಮಾತಿನಲ್ಲಿ ಮಾತ್ರ ಗುಜರಾತ್ ಅಭಿವೃದ್ಧಿಯಾಗಿದೆ ಅಂತಿದ್ದಾರೆ ಅಷ್ಟೇ. ಯಾರು, ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಎಂಬುದನು ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್‌ಗೆ 21 ಸ್ಥಾನ: ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಲವು ಜನಪರ ಯೋಜನೆಗಳನು ನೀಡಿರುವುದರಿಂದ ಕಾಂಗ್ರೆಸ್ ಪರ ಉತ್ತಮ ವಾತಾರವಣ ನಿರ್ಮಾಣಾಗಿದೆ. ಈ ಬಾರಿ ಕಾಂಗ್ರೆಸ್ 20ರಿಂದ 21 ಸ್ಥಾನಗಳನು ಗೆಲ್ಲಲಿದೆ ಎಂದರು.
ಮನವಿ: ಕಾಂಗ್ರೆಸ್ ಸಮಾಜದ ಎಲ್ಲಾ ವರ್ಗದವರಿಗೆ ಸಮಾನ ಸ್ಥಾನಮಾನ ನೀಡಿದ್ದು, ಇದರಿಂದ ಎಲ್ಲಾ ವರ್ಗದ ಜನತೆ ಕಾಂಗ್ರೆಸನು ಬೆಂಬಲಿಸಲಿದ್ದಾರೆ. ಅದೇ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜುಗೆ ಹೆಚ್ಚಿನ ಮತಗಳನು ನೀಡಿ ಗೆಲವಿಗೆ ಸಹಕರಿಸುವಂತೆ ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್, ಉಬೇದುಲ್ಲಾ ಷರೀಫ್, ಜಿ.ಎ.ಬಾವ, ಅಮೀರ್‌ಜಾನ್, ಇತರರು ಇದ್ದರು.
ಟಿಪ್ಪು ವಿವಿ
ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತರು ಪ್ರಗತಿ ಹೊಂದಲು ಸಹಕಾರಿಯಾಗಿರುವ ಸಾಚಾರ್ ಸಮಿತಿ ವರದಿಯ ಶಿಫಾರಸುಗಳನು ಶೇ. 90ರಷ್ಟು ಅನುಷ್ಠಾನಗೊಳಿಸಲಾಗಿದೆ ಎಂದ ಅವರು, ಶ್ರೀರಂಗಪಟ್ಟಣದ ಬಳಿ ಟಿಪ್ಪು ವಿಶ್ವವಿದ್ಯಾಲಯ ಸ್ಥಾಪನೆ ಪ್ರಕ್ರಿಯೆ ಮುಂದುವರೆದಿದೆ. ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನು ಸರ್ಕಾರ ಮಾಡಿಕೊಂಡಿದೆ ಎಂದು ರೆಹಮಾನ್ ಖಾನ್ ಹೇಳಿದರು.
ತೃತೀಯ ರಂಗ ತಿರುಕನ ಕನಸು
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ದೇಶದಲ್ಲಿ ತೃತೀಯ ರಂಗವನು ಕಟ್ಟುವ ಆಸೆಯನು ಹೊಂದಿದ್ದು, ಅದು ಆಸೆಯಾಗಿಯೇ ಉಳಿಯಲಿದೆ. ಕೇವಲ ಎರಡು-ಮೂರು ಸೀಟುಗಳನು ಪಡೆದು ಜಾತ್ಯಾತೀತವಾಗಿ ಏನು ನ್ಯಾಯ ಕೊಡಲು ಸಾಧ್ಯ ಎಂದು ಅವರು ಪ್ರಶಿಸಿದರು.
ಹಗರಣ ಇನೂ ಸ್ಪಷ್ಟವಾಗಿಲ್ಲ
2ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣ ಎಂದು ದೇಶದಲ್ಲಿ ಬಿಂಬಿಸಿರುವಂತಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಕೇವಲ ಕಾಲ್ಪನಿಕ ನಷ್ಟ ಎಂಬ ಸಿಇಜಿ ವರದಿಯನು ನೀಡಿದೆ. ಆದರೆ ಅದನು ದೇಶದಲ್ಲಿ ಹಗರಣವೆಂದು ಪ್ರತಿಪಕ್ಷಗಳು ಬಿಂಬಿಸುತ್ತಿವೆ. ಆದರೆ ಅದು ಇನು ಸ್ಪಷ್ಟವಾಗಿಲ್ಲ. ಕಲ್ಲಿದ್ದಲು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದು, ಅದನು ಸುಪ್ರೀಂ ಕೋರ್ಟ್‌ಗೆ ನೀಡಲಾಗಿದೆ ಎಂದು ಸಂಬಂಧಪಟ್ಟ ಮಂತ್ರಿಗಳೇ ಹೇಳಿದ್ದಾರೆ. ದಾಖಲೆಗಳು ಇಲ್ಲ ಎನುವುದು ಸುಳ್ಳು ಎಂದರು.
'ಅಮಾನತ್' ಬಗ್ಗೆ ಪ್ರತಿಕ್ರಿಯಿಸಲ್ಲ
ಅಮಾನತ್ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚಾರಣೆ ನ್ಯಾಯಾಲಯದಲ್ಲಿ ಇದ್ದು, ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬ್ಯಾಂಕ್‌ನಲ್ಲಿ ಡಿಪಾಸಿಟ್ ಮಾಡಿರುವಂಥವರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ರೆಹಮಾನ್ ಖಾನ್ ಆಶ್ವಾಸನೆ ನೀಡಿದರು.
ಜಾಫರ್ ಹೇಳಿಕೆ ವೈಯಕ್ತಿಕ
ಜಾಫರ್ ಷರೀಫ್ ಅವರು ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಕಬೇಡಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ರೆಹಮಾನ್ ಖಾನ್ ಅವರು, ಜಾಫರ್ ಅವರ ಹೇಳಿಕೆ ವಯಕ್ತಿಕವಾಗಿದ್ದು, ಯಾವ ರೀತಿ ಹೇಳಿದ್ದಾರೆ ಅಂತ ಗೊತ್ತಿಲ್ಲ. ಜೆಡಿಎಸ್ ನಾಯಕರಿಗೆ ಪತ್ರ ಬರೆದಿದ್ದಾರೆ ಎನಲಾದ ವಿಚಾರದ ಬಗ್ಗೆ ಜಾಫರ್ ಷರೀಫ್ ಅವರೇ ಯಾರಿಗೂ ಪತ್ರ ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.