ಕಾಂಗ್ರೆಸ್ನಿಂದ ಹತ್ತು ವರ್ಷ ಭ್ರಷ್ಟಾಚಾರ
ಕನ್ನಡಪ್ರಭ ವಾರ್ತೆ, ಆಲೂರು. ಏ 9
ಕಳೆದ 10 ವರ್ಷಗಳಿಂದ ದೇಶದ ಆಡಳಿತ ನಡೆಸಿದ ಕಾಂಗ್ರೆಸ್ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸದೇ ಭ್ರಷ್ಟಾಚಾರ ಮಾಡುವುದರಲ್ಲೇ ಕಾಲ ಹರಣ ಮಾಡಿದ್ದು, ಇಂತವರಿಂದ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಟೀಕಾ ಪ್ರಹಾರ ನಡೆಸಿದ್ದಾರೆ.
ದೇಶಾದ್ಯಂತ ಮೋದಿ ಅಲೆ ಇದ್ದು, ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ವಿಜಯ್ಶುಂಕರ್ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಪಟ್ಟಣದ ಗಣಪತಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಮನವಿ ಮಾಡಿದರು.
ಜಿಲ್ಲೆಯ ಅಭಿವೃದ್ಧಿಗೆ ಗಮನ ಹರಿಸದೆ, ಜನರ ಕೈಗೆ ಸಿಗದೆ ತಮಗೂ ಜಿಲ್ಲೆಗೂ ಸಂಬಂಧವಿಲ್ಲದಂತೆ ಇದ್ದರು. ಜಿಲ್ಲಾದ್ಯಂತ ರಸ್ತೆಗಳು ಹದಗೆಟ್ಟಿದ್ದು, ಕಾಡಾನೆ ಸಮಸ್ಯೆ, ಶೀತಪೀಡಿತ ಗ್ರಾಮಗಳ ಸಮಸ್ಯೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳು ರುದ್ರತಾಂಡವವಾಡುತ್ತಿವೆ. ಇಷ್ಟಾದರೂ ಸಹ ಇತ್ತ ಗಮನ ಹರಿಸದ ಮಾಜಿ ಪ್ರಧಾನಿಗಳು ಈಗ ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
ಮನವಿ: ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿ ಬಿಜೆಪಿ ಅಭ್ಯರ್ಥಿಗೆ ಆರ್ಶೀವಾದ ಮಾಡಿ ಮೋದಿ ಅವರು ಪ್ರಧಾನಿ ಆಗಲು ಮತದಾರರು ಸಹಕಾರಿಸಬೇಕು. ಈ ಮೂಲಕ ಮೋದಿ ಅವರನ್ನು ಪ್ರಧಾನಿಯಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಲ್ಲಾ ಸಮಸ್ಯೆಗೆ ಪರಿಹಾರ: ಅಭ್ಯರ್ಥಿ ವಿಜಯ್ ಶಂಕರ್ ಮಾತನಾಡಿ, ಈ ಬಾರಿ ಮತ ನೀಡಿ ಜಯಶೀಲರನ್ನಾಗಿ ಮಾಡಿದರೆ ದೆಹಲಿಯಲ್ಲಿ ಕುಳಿತು ಕಾಲಹರಣ ಮಾಡದೇ, ಜಿಲ್ಲಾ ಕೇಂದ್ರದಲ್ಲಿ ಕಚೇರಿ ತೆರೆದು ವಾರದಲ್ಲಿ 2 ದಿನ ಜಿಲ್ಲೆಯಲ್ಲಿ ಇದ್ದು, ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು.
ಜಿಲ್ಲಾಧ್ಯಕ್ಷ ರೇಣುಕುಮಾರಾ, ಡಾ. ನಾರಾಯಣಸ್ವಾಮಿ, ಬಿ.ಆರ್. ಗುರುದೇವ್, ಜ್ಯೋತಿ ಗುರುದೇವ್, ಕೆ.ಆರ್. ಕಾಂತರಾಜ್, ಜಿ.ಟಿ.ಪಾಲಾಕ್ಷ, ಎ.ಎಚ್. ರಮೇಶ್, ಡಾ. ಜಯರಾಜ್, ಎ.ಎಸ್. ಈಶ್ವರ್, ಪೂವಯ್ಯ, ಕೆ.ಆರ್. ಲೋಕೇಶ್, ಪಿತಾಂಬರ್, ಆರ್.ನಾಗರಾಜ್, ಹೇಮಂತ್ ಹಾಗೂ ಇತರರು ಇದ್ದರು.