ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಎಂ ಮನೆ ಮುಂದೆ ಧರಣಿ

Srinivasa Murthy VN
Updated On : 10 Apr 2014, 1:14 am

ಕ.ಪ್ರ.ವಾರ್ತೆ ಹಾಸನ ಏ. 9
ಹಾಸನ-ದುದ್ದ ರಸ್ತೆ ಹಾಗೂ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ನಡೆಸುವುದಾಗಿ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷ ರಾಜಕಾರಣದಿಂದಾಗಿ ಜಿಲ್ಲೆಯಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ. ಬರುವ ಒಂದು ತಿಂಗಳೊಳಗಾಗಿ ಹಾಸನ-ದುದ್ದ ಹಾಗೂ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸದಿದ್ದರೆ ಮುಖ್ಯಮಂತ್ರಿ ಮನೆ ಮುಂದು ಧರಣಿ ನಡೆಸಲಾಗುವುದು ಎಂದರು.
ಆಕ್ರೋಶ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಆಳ್ವಿಕೆ ನಡೆಸಿದ್ದರೂ ಈವರೆಗೆ ಹಾಸನ-ದುದ್ದ ರಸ್ತೆ ಅಭಿವೃದ್ಧಿ ಮಾಡಿಲ್ಲ. ದುದ್ದ ರಸ್ತೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸುವುದಾಗಿ ಹೇಳಿ ಹಲವು ತಿಂಗಳುಗಳೇ ಕಳೆಯುತ್ತಿದ್ದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ನವರು ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಕಾಂಗ್ರೆಸ್ ಮಂದಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-ಐಐ ಅಡಿಯಲ್ಲಿ ವಿಶ್ವಬ್ಯಾಂಕ್ ಮತ್ತು ಇತರೆ ಅಂತಾರಾಷ್ಟ್ರೀಯ ಸಂಸ್ಥೆಗಳ ನೆರವಿನಿಂದ ಜಿಲ್ಲೆಯ ಮುಖೇನ ಇತರೆ ಜಿಲ್ಲೆಗಳಿಗೆ ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನೊಳಗೊಂಡಂತೆ ರು. 4500 ಕೋಟಿಗಳ ಅಂದಾಜು ವೆಚ್ಚದ ಡಿಪಿಆರ್ ಅಂತರಾಷ್ಟ್ರೀಯ ಕನ್ಸಲ್ಟೆಂಟ್ ಸಂಸ್ಥೆ ಮುಖೇನ ತಯಾರಿಸಲಾಗಿದ್ದು, ಈ ಯೋಜನೆಗೆ 2006ರಲ್ಲಿ ರಾಜ್ಯ ಸರ್ಕಾರ ಅನುಮೋದನೆ ಸಹ ನೀಡಿತ್ತು ಎಂದರು.
ಹಾಸನ-ಬೆಂಗಳೂರು ರೈಲು ಮಾರ್ಗವನ್ನು ಯುಪಿಎ ಸರ್ಕಾರ ಕಳೆದ 17 ವರ್ಷಗಳಿಂದ ಮಾಡಲು ಮುಂದಾಗಲಿಲ್ಲ. ಆದರೆ ದೇವೇಗೌಡರು ಕೇವಲ 10 ತಿಂಗಳಲ್ಲಿಯೇ ರೈಲು ಮಾರ್ಗ ಮಾಡಿ ತೋರಿಸಿದ್ದಾರೆ ಎಂದರು.
ಬೇಲೂರು-ಕೊಡ್ಲಿಪೇಟೆ ಮಾರ್ಗ ಬಿಕ್ಕೋಡು, ವಾಟೆಹೊಳೆ, ಆಲೂರು, ಮಗ್ಗೆ-72 ಕಿಮೀಗೆ ಅಂದಾಜು ಮೊತ್ತ ರು. 181.44 ಕೋಟಿ, ಹಾಸನ-ಪಿರಿಯಪಟ್ಟಣ ಮಾರ್ಗವಾಗಿ ಅರಕಲಗೂಡು, ರಾಮನಾಥಪುರ, ಕೇರಳ ಕೊನೆವರೆಗೂ-77 ಕಿಮೀ ಗೆ ಅಂದಾಜು ಮೊತ್ತ ರು. 192.5 ಕೋಟಿ, ಹೊಳೆನರಸೀಪುರ- ಕೆ.ಆರ್. ನಗರ ಮಾರ್ಗವಾಗಿ ಹಳ್ಳಿಮೈಸೂರು, ಚುಂಚನಕಟ್ಟೆ, ಸಾಲಿಗ್ರಾಮಕ್ಕೆ -46 ಕಿಮೀ ಅಂದಾಜು ಮೊತ್ತ ರು. 115 ಕೋಟಿ, ರಾಮನಗರ-ಸಾಲಿಗ್ರಾಮದಿಂದ ತಾಳವಾಡಿ, ಚೌಳನಕುಪ್ಪೆ, ಹುಲಿಯೂರು, ದುರ್ಗ, ನಾಗಮಂಗಲ, ಕೆ.ಆರ್. ಪೇಟೆ, ಅಕ್ಕಿಹೆಬ್ಬಾಳ್, ಭೇರ್ಯ-  142 ಕಿಮೀಗೆ ಅಂದಾಜು ಮೊತ್ತ ರು. 355 ಕೋಟಿ, ಹೊರನಾಡು-ಸುಬ್ರಮಣ್ಯ ಮಾರ್ಗವಾಗಿ ಕಳಸ, ಕೊಟ್ಟಿಗೆಹಾರ, ಮೂಡಿಗೆರೆ, ಸಕಲೇಶಪುರ, ಜಿನ್ನಾಪುರ, ಹಾನುಬಾಳು, ಹೆತ್ತೂರು, ವನಗೂರು, ಸುಬ್ರಮಣ್ಯ ಸೇರಿ 264 ಕಿ.ಮೀ. ಅಂದಾಜು ರು. 660 ಕೋಟಿ ಸೇರಿದಂತೆ ಒಟ್ಟು ರು. 4500 ಕೋಟಿ ಅಂದಾಜು ವೆಚ್ಚಕ್ಕೆ 2006ರಲ್ಲಿಯೇ ಅನುಮೋದನೆ ನೀಡಿದ್ದೆ ಎಂದು ದೇವೇಗೌಡ ವಿವರಿಸಿದರು.
ನಿವೃತ್ತಿಯಾಗುವೆ: ಅನುಮೋದನೆ ನೀಡಿದ ನಂತರ ಬಂದ ರಾಜ್ಯ ಸರ್ಕಾರಗಳು ಈ ಯೋಜನೆಗೆ ಸಮರ್ಪಕವಾಗಿ ಅನುದಾನ ನೀಡದೆ ನಿರ್ಲಕ್ಷ್ಯ ತೋರಿದವು. ಜಿಲ್ಲೆಯಲ್ಲಿ ರಸ್ತೆ ಅಭಿವೃದ್ದಿಗೆ ಅಡ್ಡಿಯಾಗಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳುಏಂಬುದನ್ನು ಅರ್ಥೈಸಿಕೊಳ್ಳಬೇಕು.ಇದು ಸುಳ್ಳಾಗಿದ್ದರೆ ನಾನು ರಾಜಕೀಯ ನಿವೃತ್ತಿ ಆಗುವುದಾಗಿ ರೇವಣ್ಣ ಹೇಳಿದರು.
ಕಡೆಗಣನೆ: ಜೆಡಿಎಸ್ ಆಡಳಿತವಧಿಯಲ್ಲಿ ಜಿಲ್ಲೆಯಲ್ಲಿನ ರಿಂಗ್ ರಸ್ತೆಗೆ ಒಟ್ಟು ರು. 350 ಕೋಟಿ ನೀಡಲಾಗಿದ್ದು, ಪೂರ್ಣಗೊಂಡಿದೆ. ಬಿಜೆಪಿ- ಕಾಂಗ್ರೆಸ್ ಸರ್ಕಾರ ಬಾಕಿ ಉಳಿದಿರುವ ರಿಂಗ್ ರಸ್ತೆಗಳನ್ನು ಮಾಡಲು ಮುಂದಾಗಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ 12 ತಿಂಗಳ ಅಧಿಕಾರಾವಧಿಯಲ್ಲಿ ಕೇವಲ ದ್ವೇಷದ ರಾಜಕಾರಣ ಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ದೂರಿದರು.

'ಕಾಂಗ್ರೆಸಿಗರ ಸೇರ್ಪಡೆ'
ದೇಶದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಚುನಾವಣೆಯ ನಂತರ ಕಾಂಗ್ರೆಸ್ ಸಂಸದರು ಸೇರಿದಂತೆ ಅರ್ಧ ಜನ ತೃತೀಯ ರಂಗ ಸೇರಲಿದ್ದಾರೆ ಎಂದು ಭವಿಷ್ಯ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement