ಮತಪತ್ರ ವಿತರಿಸಲು ಅಂತಿಮ ಸಿದ್ಧತೆ
ಹಾಸನ: ಹೊರಜಿಲ್ಲೆ ಮತ್ತು ಹೊಹೊರ ವಿಧಾನಸಭಾ ಕ್ಷೇತ್ರಗಳಲ್ಲಿನ ಅಂಚೆ ಮತದಾರರು ಹಾಗೂ ಚುನಾವಣಾ ಕರ್ತವ್ಯನಿರತರಿಗೆ ಮತದಾನಕ್ಕೆ ಅನುಕೂಲವಾಗುವಂತೆ, ಮತಪತ್ರ (ಇಡಿಸಿ)ಗಳನ್ನು ವಿತರಿಸಲು ಅಂತಿಮ ಹಂತದ ಸಿದ್ಧತೆಗಳು ಚುನಾವಣಾಧಿಕಾರಿಗಳ ನಿಯಂತ್ರಣ ಕೊಠಡಿಯಲ್ಲಿ ಭರದಿಂದ ಸಾಗಿವೆ.
ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್ ಅವರ ಮೇಲ್ವಿಚಾರಣೆಯಲ್ಲಿ ಹಾಸನ ಮತ್ತು ಸಕಲೇಶಪುರ ವಿಭಾಗಗಳಿಗೆ ಸಂಬಂಧಿಸಿದ ಅಂಚೆ ಮತಪತ್ರಗಳನ್ನು ವಿಂಗಡಿಸಿ ಪರಿಶೀಲಿಸಿ, ವಿತರಣೆಗೆ ತಯಾರಿ ನಡೆಸಲಾಗಿದೆ.
ಈಗಾಗಲೇ ಏ. 5ರಂದು 79 ಅಂಚೆ ಮತಪತ್ರಗಳನ್ನು ರವಾನಿಸಲಾಗಿದ್ದು, ಬುಧವಾರ 120 ಅಂಚೆ ಮತಪತ್ರಗಳ ಪರಿಶೀಲನೆ ಮತ್ತು ವಿಂಗಡಣೆ ಕಾರ್ಯ ನಡೆಯಿತು.
ಏ. 8ರಂದು ಸುಮಾರು 10,000 ಇಡಿಸಿಗಳನ್ನು ಪರಿಶೀಲಿಸಿ, ವರ್ಗೀಕರಿಸಿ, ಚುನಾವಣಾಧಿಕಾರಿಯವರ ಸಹಿ ಮಾಡಿ. ಸಹಾಯಕ ಚುನಾವಣಾಧಿಕಾರಿಗಳ ಮೂಲಕ ಆಯಾ ಆಯಾ ಚುನಾವಣಾ ಕರ್ತವ್ಯದಲ್ಲಿ ತೊಡಗಿರುವವರಿಗೆ ವಿತರಿಸಲಾಗುವುದು ಎಂದು ಪರಪ್ಪಸ್ವಾಮಿ ಹೇಳಿದ್ದಾರೆ.