ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಭಿವೃದ್ಧಿ ಅಂದ್ರೆ ರೇವಣ್ಣ: ಪುರಸಭೆ ಅಧ್ಯಕ್ಷ ಬಿ.ಗಿರೀಶ್

Srinivasa Murthy VN
Updated On : 12 Apr 2014, 12:29 pm

ಬೇಲೂರು: ಬೇಲೂರು ಪುರಸಭಾ ವ್ಯಾಪ್ತಿಗೆ ಜೆಡಿಎಸ್ ಕೊಡುಗೆ ಅಪಾರವಾಗಿದ್ದು, ಜಿಲ್ಲೆಯಲ್ಲಿ ಜನಪರ ಅಭಿವೃದ್ಧಿ ಎಂದರೆ ಎಚ್.ಡಿ. ರೇವಣ್ಣ ಎಂದು ಬೇಲೂರು ಪುರಸಭೆ ಅಧ್ಯಕ್ಷ ಬಿ.ಗಿರೀಶ್ ವರ್ಣಿಸಿದ್ದಾರೆ. ಪಟ್ಟಣದ ಹೊಸನಗರದಲ್ಲಿ ಎಚ್.ಡಿ.ದೇವೇಗೌಡರ ಪರ ಇತ್ತೀಚೆಗೆ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು  ಬೇಲೂರು ಪುರಸಭೆ ಜಿಲ್ಲೆಯಲ್ಲಿ ಉತ್ತಮ ಪುರಸಭೆ ಎಂದು ಹೆಸರು ಪಡೆದಿದೆ, ಕಾರಣ ಜಿಲ್ಲೆಯ ಅಭಿವೃದ್ಧಿಯ ಹರಿಕಾರ ರೇವಣ್ಣನವರು ಕಾಲ ಕಾಲಕ್ಕೆ ಪಟ್ಟಣಕ್ಕೆ ಅಗತ್ಯವಿದ್ದು ಮೂಲ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಪಟ್ಟಣಕ್ಕೆ ಮುಖ್ಯವಾಗಿ ಸೇತುವೆ, ಉನ್ನತ ವೃತ್ತಿ ನಿರತ ಕಾಲೇಜು ಇನ್ನು ಹಲವು ಹತ್ತು ಮೂಲ ಸೌಲಭ್ಯ ನೀಡಿದ್ದಾರೆ ಎಂದರು. ಪುರಸಭೆ ಸದಸ್ಯೆ ಭಾರತಿ ಅರಣ್ ಕುಮಾರ್ ಮಾತನಾಡಿ, ಪಟ್ಟಣದ ಒಂದನೇ ವಾರ್ಡ್ ಹೊಸನಗರ ಜೆಡಿಎಸ್‌ನ ಕೊಡುಗೆ ಕಾರಣವಾಗಿದೆ, ಈ ದಿಸೆಯಲ್ಲಿ ಈ ನಗರಕ್ಕೆ ಎಚ್.ಕೆ. ಕುಮಾರಸ್ವಾಮಿ ನಗರ ಎಂದು ಕರೆಯುತ್ತಾರೆ. ಹೊಸನಗರಕ್ಕೆ ಆನೇಕ ಮೂಲಭೂತ ಸೌಲಭ್ಯ ಕೂಡ ಕಲ್ಪಿಸಿದ್ದಾರೆ ಎಂದರು. ಹಾಸನ ಜಿಲ್ಲಾ ಲೋಕಸಭಾ ಅಭ್ಯರ್ಥಿ ಎಚ್.ಡಿ. ದೇವೇಗೌಡರು ಭಾರಿ ಮತದ ಅಂತರದಿಂದ ಜಯಗಳಿಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಮುಖ ಭಂಗವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ  ಸದಸ್ಯರಾದ ರವಿ ಅಣ್ಣೇಗೌಡ, ಉಮಾ, ರಾಜಪ್ಪಣ್ಣ, ಅರಣ್ ಕುಮಾರ್ ಇನ್ನು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement