ಒಳ ಮೀಸಲಿಗೆ ದನಿಗೂಡಿಸಿದ್ದ ದೇವೇಗೌಡ
ಕ.ಪ್ರ.ವಾರ್ತೆ ಹಾಸನ ಏ. 11
ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು 15 ವರ್ಷಗಳಿಂದ ಸತತ ಹೋರಾಟ ನಡೆಯುತ್ತಿದ್ದು, ಒಳಮೀಸಲು ವರ್ಗೀಕರಣದಬಗ್ಗೆ ಲೋಕಸಭಾ ಅಭ್ಯರ್ಥಿ ಎಚ್.ಡಿ. ದೇವೇಗೌಡ, ಜೆಡಿಎಸ್. ನಾಯಕರಾದ ಎಚ್.ಡಿ. ರೇವಣ್ಣ, ಎಚ್.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಮಾಜಿ ಶಾಸಕ ದಿವಂಗತ ಶಂಕರಲಿಂಗೇಗೌಡ ಮಾತ್ರ. ಉಳಿದ ಯಾರೂ ಒಳಮೀಸಲಾತಿ ವರ್ಗೀಕರಣಕ್ಕಾಗಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹೇಳಿದ್ದಾರೆ.
ಕಡಗಣನೆ: ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್, ಜೆಡಿ.ಎಸ್, ಬಿಜೆಪಿ... ಹೀಗೆ ಹಲವಾರು ಪಕ್ಷಗಳಿಗೆ ಮತ ಚಲಾಯಿಸಿದ್ದೇವೆ. ರಾಜ್ಯದಲ್ಲಿ ಕೆ.ಎಚ್. ಮುನಿಯಪ್ಪ ಹೆಚ್. ಆಂಜನೇಯ ಅವರಂಥ ಮಂತ್ರಿಗಳು ಕಾಂಗ್ರೆಸ್ ಸರ್ಕಾರದಲ್ಲಿದ್ದರೂ ಕೂಡ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾದಿಗ ಸಮುದಾಯಕ್ಕೆ ಸೇರಿದ ಯಾವ ಮಂತ್ರಿಗಳ ನಾಯಕರ ಫೋಟೋಗಳು ವೇದಿಕೆಯ ಬ್ಯಾನರ್ನಲ್ಲಿ ಇರಲಿಲ್ಲ. ಇದು ಮಾದಿಗ ಸಮುದಾಯವನ್ನು ಕಡೆಗಣಿಸಿದ್ದಕ್ಕೆ ಸಾಕ್ಷಿ. ಈ ಶೋಷಣೆಯನ್ನು ಸಮುದಾಯ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ನೇಮಕಗಳಿಗೆ ಸ್ವಾಗತ: ಮಾದಿಗ ಜನಾಂಗಕ್ಕೆ ಸೇರಿದ ಹಿರಿಯ ಐ.ಎ.ಎಸ್. ಅಧಿಕಾರಿ ಗೋನಾಳ್ ಭೀಮಪ್ಪ ಅವರನ್ನು ಕೆ.ಪಿ.ಎಸ್.ಸಿ.ಯಂತಹ ಪ್ರಮುಖಹುದ್ದೆಗೆ ನೇಮಕ ಮಾಡಿರುವ ಎಚ್.ಡಿ. ದೇವೇಗೌಡರು, ಪ್ರಸ್ತುತ ಮೈಸೂರು ವಿಭಾಗದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ. ಕೋಟೆ ಶಿವಣ್ಣ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದನ್ನು ಸಮುದಾಯದ ಪರವಾಗಿ ಸ್ವಾಗತಿಸಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಸನ ಜಿಲ್ಲೆಯನ್ನು ರಾಷ್ಟ್ರಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸುವ ಕೆಲಸ ಮಾಡಿದ್ದು ಇಂದು ಹಾಸನ ಜಿಲ್ಲೆ ವಿಶೇಷ ಆಥಿಂಕ ವಲಯ ಆಗಲು ನೇರವಾಗಿ ದೇವೇಗೌಡರೇ ಕಾರಣವಾಗಿದ್ದಾರೆ. ಹಲವಾರು ಕಾರ್ಖಾನೆಗಳು, ಉದ್ಯಿಮೆಗಳು ಇಂದು ನಗರದಲ್ಲಿ ಬೇರೂರಿ ಪ್ರಸ್ತುತ ಜಾತಿ ಮತ ವರ್ಗಗಳನ್ನೆದೇ ಸುಮಾರು 20 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಕೈಗಾರಿಕಾ ವಲಯಗಳಲ್ಲಿ ಉದ್ಯೋಗ ಸಿಕ್ಕಿದ್ದು ಇಲ್ಲಿ ಜಾತಿ ಮತ ತಾರತಮ್ಯ ಇಲ್ಲದೆ ಎಲ್ಲಾ ಜಾತಿಯ ಬಡವರಿಗೆ ಉದ್ಯೋಗ ಸಿಕ್ಕಿದೆ. ಇಂತಹ ಹಲವಾರು ಜನಪರ ಯೋಜನೆಗಳನ್ನು ತಂದುಕೊಟ್ಟ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಗೌಡರ ಪರ ಪ್ರಚಾರ: ರಾಷ್ಟ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿಯೊಬ್ಬರು ಸ್ಪರ್ಧಿಸಿರುವುದು ದೇವೇಗೌಡರು ಮಾತ್ರ.
ಇಷ್ಟೊಂದು ಸಾಮಾಜಿಕ ಜನಪರ ಕಾರ್ಯಗಳನ್ನು ಮಾಡಿರುವ ದೇವೇಗೌಡರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕೆಂಬ ಆಶಯವನ್ನು ಸಮಾಜದ ಕೆಲವು ಪ್ರಮುಖ ಮುಖಂಡರು ಜನಪ್ರತಿನಿಧಿಗಳು ಕಾರ್ಯಕರ್ತರು ನಮ್ಮೊಟ್ಟಿಗೆ ಚರ್ಚಿಸಿದ್ದು ಪ್ರಸಕ್ತ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರನ್ನು ಗೆಲ್ಲಿಸುವಂತೆ ನಾವು ಜಿಲ್ಲಾದ್ಯಂತ ಪ್ರಚಾರ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಹಿರಿಯ ರಾಜಕಾರಣಿಗಳು ಮುತ್ಸದಿ ನಾಯಕ ದೇವೇಗೌಡರನ್ನು ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಿಕೊಡುವಂತೆ ಅವರು ಕೋರಿದ್ದಾರೆ.