ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡರ ಬೆಂಬಲಿಸಲು ಅಲ್ಪಸಂಖ್ಯಾತರಿಗೆ ದತ್ತ ಮನವಿ

Srinivasa Murthy VN
Updated On : 12 Apr 2014, 12:30 pm

ಕಡೂರು: ಅಲ್ಪಸಂಖ್ಯಾತ ಸಮುದಾಯವು ಹಿಂದಿನಿಂದಲೂ ದೇವೇಗೌಡರನ್ನು ಬೆಂಬಲಿಸಿಕೊಂಡು ಬಂದಿದ್ದು ಈ ಭಾರಿಯೂ ಜೆಡಿಎಸ್‌ಗೆ ಬೆಂಬಲಿಸುವ ಮೂಲಕ ಗೆಲ್ಲಿಸಲಿದ್ದಾರೆ ಎಂದು ಶಾಸಕ ವೈ.ಎಸ್.ವಿ. ದತ್ತ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಕಡೂರು ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಲಬಾಬಿನ್ ಮಸೀದಿಗೆ ಭೇಟಿ ನೀಡಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಪರವಾಗಿ ಅಲ್ಪಸಂಖ್ಯಾತ ಬಂಧುಗಳಲ್ಲಿ ಮತಯಾಚಿಸಿ ಮಾತನಾಡಿ, ಜೆಡಿಎಸ್ ಜಾತ್ಯತೀತ ವಾದದಲ್ಲಿ ನಂಬಿಕೆಯಿಡುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ದಿಗೆ ಕಠಿಬದ್ದವಾಗಿದೆ ಎಂದರು.
ಜಾತ್ಯತೀತವಾದ ವಾದ: ಜೆಡಿಎಸ್ ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ದೇಶದಲ್ಲಿ ಎಲ್ಲರೂ ಒಂದೇ ಎಂಬ ನಿಟ್ಟಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಜಾತ್ಯತೀತವಾದ ವಾದ ಮಂಡಿಸುತ್ತಾ ದೇಶದ ಅಲ್ಪಸಂಖ್ಯಾತ ಬಂಧುಗಳ ಶ್ರೇಯೋಭಿವೃದ್ದಿಗಾಗಿ ಯೋಜನೆಗಳನ್ನು ರೂಪಿಸಿ ಅನೇಕ ಕಾರ್ಯಕ್ರಮಗಳನ್ನು ನೀಡಿದರು. ಅಲ್ಲದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾದ ಅವಧಿಯಲ್ಲಿ ರಾಜ್ಯದ ಅಲ್ಪ ಸಂಖ್ಯಾತರ ಅಭಿವೃದ್ದಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಮುದಾಯದ ಏಳಿಗೆಗೆ ಶ್ರಮಿಸಿರುವ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಬೆಂಬಲಿಸಿಕೊಂಡು ಬರುತ್ತಿದ್ದಾರೆ ಎಂದರು.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಅನೇಕ ಅಭಿವೃದ್ದಿ ಕಾರ್ಯ ತಂದಿದ್ದಾರೆ. ರಾಷ್ಟ್ರೀಯ ಪಕ್ಷಗಳ ಮಲತಾಯಿಧೋರಣೆ ಅನುಸರಿಸುವುದನ್ನು ನೋಡಿರುವ ಜೆಡಿಎಸ್ ಹಿಂದುಳಿದವರ ಅಲ್ಪಂಸಂಖ್ಯಾತರ ಮತ್ತು ಎಲ್ಲ ವರ್ಗಗಳ ಶ್ರೇಯೋಭಿವೃದ್ದಿಗೆ ದುಡಿಯುವ ಸಂಕಲ್ಪ ಹೊಂದಿರುವ ದೇವೇಗೌಡರು ಈ ಭಾರಿಯೂ ಗೆಲುವು ಸಾಧಿಸಲಿದ್ದಾರೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ, ಜೆಡಿಎಸ್ ಮುಖಂಡ ಹಾಗು ತಾಲೂಕು ಬಂಜಾರ ಸಮುದಾಯದ ಅಧ್ಯಕ್ಷ ಸತೀಶ್ ನಾಯ್ಕ, ಅಲ್ಪಸಂಖ್ಯಾತರ ಮುಖಂಡರಾದ ಕಬೀರ್, ಫೈರೋಜ್, ವಿನಯ ದಂಡಾವತಿ, ಫೈರೋಜ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement