ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವೇಗೌಡರನ್ನು ಗೆಲ್ಲಿಸಲು ಪಣ ತೊಡಿ

Srinivasa Murthy VN
Updated On : 12 Apr 2014, 12:31 pm

ಬೇಲೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರದು ಕೊನೆಯ ಲೋಕಸಭಾ ಚುನಾವಣೆಯಾಗಿದ್ದು, ಕಾರ್ಯಕರ್ತರು ಅವರನ್ನು ಅತ್ಯಂತ ಮತದ ಅಂತರಿಂದ ಗೆಲ್ಲಿಸಲು ಕಾರಣರಾಗಬೇಕು ಎಂದು ಜೆಡಿಎಸ್ ಯುವ ಮುಖಂಡ  ಪ್ರಜ್ವಲ್ ರೇವಣ್ಣ ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಮಾತನಾಡಿದ ಅವರು, ಏ.17ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿರುವ ದೇವೇಗೌಡರ ಮೇಲೆ ಇಡೀ ದೇಶದ ಗಮನವಿದೆ. ಕಾರಣ ದೇಶದಲ್ಲಿ ರಾಷ್ಟ್ರೀಯ ಪಕ್ಷಗಳು ನಿಚ್ಚಳ ಬಹುಮತವನ್ನು ಪಡೆಯುವುದಿಲ್ಲ ಎಂಬ ಹಲವು ಸಮೀಕ್ಷೆಯ ಹಿಂದೆ ತೃತೀಯರಂಗ ಅಧಿಕಾರ ಚುಕ್ಕಾಣಿ ಹಿಡಿಯುವ ಲಕ್ಷಣವಿದ್ದು, ಮಾಜಿ ಪ್ರಧಾನಿ ದೇವೇಗೌಡರು ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಈ ದಿಸೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಭಾರಿ ಮತದ ಅಂತರದಿಂದ ಗೆಲಿವಿಗೆ ಕಾರಣರಾಗಬೇಕು ಎಂದರು.
ಆಮಿಷಗಳಿಗೆ ತಡೆ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಜನರಿಗೆ ಹಣ-ಹೆಂಡ ಇನ್ನುಳಿದ ಆಸೆ- ಆಮಿಷಗಳನ್ನು ಒಡ್ಡುತ್ತಿದ್ದು, ನಮ್ಮ ಜೆಡಿಎಸ್ ಕಾರ್ಯಕರ್ತರು ಇಂತಹ ಪ್ರಕರಣಗಳನ್ನು ತಿಳಿಸಿದ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಅಮಿಷಗಳಿಗೆ ತಡೆಯಾಗಬೇಕು ಎಂದು ಕರೆ ನೀಡಿದರು.
ಜೆಡಿಎಸ್ ಪಕ್ಷದಲ್ಲಿ ಹಾಲಿ ಇರುವ ಯಾವ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಮಾತು ಇಲ್ಲ, ಆದರೆ ಬೂತ್‌ಮಟ್ಟದಲ್ಲಿ ಕಾರ್ಯಕರ್ತರ ಸಂಘಟನೆಗೆ ಹೆಚ್ಚು ಮಾನ್ಯತೆ ನೀಡಬೇಕು ಎಂದು ಹೇಳಿದರು.
ಮನವಿ: ನಾನು ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ 16 ಬಾರಿ ಭೇಟಿ ನೀಡಿದ್ದು, ಯಾವುದೇ ಕಾರಣಕ್ಕೂ ನಮ್ಮ ತಾಯಿ ಭವಾನಿ ಅಥವಾ ನಾನು ಚುನಾವಣೆಗೆ ನಿಲ್ಲಲು ಜಾಗ ಮಾಡಿಕೊಳ್ಳಲು ಬರುತ್ತಿಲ. ಬೇಲೂರು ವಿಧಾನಸಭಾ ಕ್ಷೇತ್ರ ಎಂದಿಗೂ ಸ್ಥಳೀಯರಿಗೆ ಮೀಸಲು ಎಂದ ಅವರು,  ಜೆಡಿಎಸ್‌ನಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆದಕಾರಣ ಇಂದಿನ ದಿನಗಳಲ್ಲಿ ಯುವಕರ ಪಾತ್ರ ಮುಖ್ಯವಾಗಿದ್ದು, ಹಿರಿಯ ಮುಖಂಡರು ಇತ್ತ ಗಮನ ನೀಡಿ ಎಂದರು.
ಸಭೆಯಲ್ಲಿ ಜೆಡಿಎಸ್ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಮುಖಂಡರಾದ ಕೆ.ಎಸ್. ಲಿಂಗೇಶ್, ಬಿ.ಸಿ. ಮಂಜುನಾಥ್, ಹೇಮಾವತಿಮಂಜುನಾಥ್, ಬಿ.ಡಿ. ಚಂದ್ರೇಗೌಡ, ಬಿ. ಗಿರೀಶ್, ಎಂ.ಎ. ನಾಗರಾಜು, ಸಿ.ಎಸ್. ಪ್ರಕಾಶ್, ಕಮಲಚನ್ನಪ್ಪ, ಮೋಹನ್ ಕುಮಾರ್, ಶ್ರೀನಿಧಿ, ರವಿ ಅಣ್ಣೇಗೌಡ ಹಾಗೂ ಇತರರು ಇದ್ದರು.

ನನ್ನತಾಯಿ ಭವಾನಿ ಅಥವಾ ನಾನು ಚುನಾವಣೆಗೆ ನಿಲ್ಲಲು ಜಾಗ ಮಾಡಿಕೊಳ್ಳಲು ಬರುತ್ತಿಲ್ಲ. ಬೇಲೂರು ವಿಧಾನಸಭಾ ಕ್ಷೇತ್ರ ಎಂದೆಂದಿಗೂ ಸ್ಥಳೀಯರಿಗೇ ಮೀಸಲು
-ಪ್ರಜ್ವಲ್ ರೇವಣ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement