ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ವೈಭವ

Srinivasa Murthy VN
Updated On : 12 Apr 2014, 12:30 pm

ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ದ ಅಮರಗಿರಿ ಚಿಕ್ಕೋನಹಳ್ಳಿ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಶ್ರೀರಾಮ ನವಮಿಯ ದಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಇತ್ತೀಚೆಗೆ ವಿಜೃಂಭಣೆಯಿಂದ   ನಡೆಯಿತು. ಅಣತಿ ದಿಗಂಬರೇಶ್ವರ ಮಠದ ಕಲಾ ತಂಡದಿಂದ ನಂದಿಧ್ವಜ, ಪರಮೇಶ್ ಮತ್ತು ದಿನೇಶ್ ಅವರಿಂದ ವೀರಭದ್ರನ ಕುಣಿತ, ಅನಂತಲಿಂಗೇಶ್ವರ ಕಲಾತಂಡದಿಂದ ವೀರಗಾಸೆ, ಸಾಗರದ ವನಿತಾ ಕಲಾತಂಡದಿಂದ ಡೊಳ್ಳುಕುಣಿತ, ನರಿಹಳ್ಳಿ ಮಹಿಳಾ ಕಲಾ ತಂಡದಿಂದ ಕೋಲಾಟ ನಡೆಯಿತು. ನಂತರ ಭಕ್ತರಿಗೆ ಪಾನಕ, ಫಲಾಹಾರ ಅನ್ನದಾಸೋಹ ನಡೆಯಿತು.
ಜಾತ್ರಾ ಮಹೋತ್ಸವದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಕೆಪಿಸಿಸಿ ಸದಸ್ಯ ಕಬ್ಬಳಿ ರಂಗೇಗೌಡ, ಕನ್ವಿನರ್ ಭೈರೇಗೌಡ, ಅಧ್ಯಕ್ಷ ಸಿ.ಎನ್. ವಿಜಯಕುಮಾರ್, ಜೆಡಿಎಸ್ ಹೊಸೂರು ಚಂದ್ರಣ್ಣ, ಮೇಲ್ವಿಚಾರಕ ಪಂಡಿತ್ ಶ್ರೀಧರ್ ಮೂರ್ತಿ, ಪ್ರಧಾನ ಅರ್ಚಕ ಶ್ರೀಕಾಂತ್, ಖಜಾಂಚಿ ಸುರೇಶ್, ಉಪಾಧ್ಯಕ್ಷ ಗಿರಿಗೌಡ, ಹೊಸೂರು ಕುಮಾರ್, ಗ್ರಾಪಂ ಮಾಜಿ ಸದಸ್ಯ ಬೆಲಗುಲಿ ಶೇಖರ್, ರಾಂಪುರ ಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement