ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಜೆಯಲ್ಲಿ ಮಕ್ಕಳನ್ನು ದುಡಿಸಿಕೊಂಡೀರಿ ಜೋಕೆ!

Srinivasa Murthy VN
Updated On : 12 Apr 2014, 12:31 pm

ಹಾಸನ: ಪ್ರಸ್ತುತ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ 14 ವರ್ಷದೊಳಗಿನ ಬಾಲಕ ಅಥವಾ  ಬಾಲಕಿಯರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ  6 ತಿಂಗಳು ಕಠಿಣ ಕಾರಾಗೃಹ ಶಿಕ್ಷೆ, ರು. 20 ಸಾವಿರ ದಂಡ ವಿಧಿಸಲಾಗುವುದು ಎಂದು  ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು ಎಚ್ಚರಿಸಿದ್ದಾರೆ.
ಬಾಲಕ ಅಥವಾ ಬಾಲಕಿಯರನ್ನು ಮನೆಕೆಲಸ, ಪ್ಲಾಂಟೇಷನ್, ಕಾರ್ಖಾನೆ, ಹೋಟೆಲ್‌ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳು, ಬೇಕರಿ ಅಥವಾ  ಸ್ಕೂಟರ್ ಗ್ಯಾರೇಜ್‌ಗಳು, ಅಂಗಡಿ ಅಥವಾ ಇತರೆ ವಾಣಿಜ್ಯ ಸಂಸ್ಥೆಗಳು, ಕಟ್ಟ ಮತ್ತು ಇತರೆ ನಿರ್ಮಾಣ  ಕೆಲಸಗಳು, ಇಟ್ಟಿಗೆ ಗೂಡುಗಳು, ಕ್ರಷರ್‌ಗಳು ಮತ್ತು ಕಲ್ಲುಕ್ವಾರೆಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದು ಅಪರಾಧ ಎಂದು ತಿಳಿಸಿದ್ದಾರೆ.
ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಉದ್ಯೋಗಗಳಲ್ಲಿ ಸೇರಿಸಿಕೊಳ್ಳುವ ಸಂಭವವಿದೆ. 14 ವರ್ಷದೊಳಗಿನ ಶಾಲಾ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ನಿಯೋಜಿಸಿಕೊಳ್ಳಬಾರದು.  ಸೂಚನೆ ಮೀರಿದರೆ, ತಪ್ಪಿತಸ್ಥ ನಿಯೋಜಕರ ಅಥವಾ ಮಾಲೀಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಕುರಿತಂತೆ ದೂರುಗಳು ಕಂಡುಬಂದಲ್ಲಿ ಟೋಲ್ ಫ್ರೀ ಸಂಖ್ಯೆ 1092 ಅಥವಾ ಜಿಲ್ಲಾ ಬಾಲ ಕಾರ್ಮಿಕ ಸಹಾಯವಾಣಿ ಯೋಜನಾ ಸಂಘದ ಕಚೇರಿ ಹಾಸನ ಸಂಖ್ಯೆ  08172-235447ಗೆ ಮಾಹಿತಿ ನೀಡಿ, ಸಾರ್ವಜನಿಕರು ಬಾಲ ಕಾರ್ಮಿಕ ಅನಿಷ್ಟ  ಪದ್ಧತಿಯನ್ನು  ಹೋಗಲಾಡಿಸುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement