ವಿಷ್ಣುಸಮುದ್ರ ಕಲ್ಯಾಣಿಗೆ ಕಾಯಕಲ್ಪ
ಹಾಸನ: ದಯಮಾಡಿ ಬೇಲೂರು ಶ್ರೀಚನ್ನಕೇಶವಸ್ವಾಮಿ ದಿವ್ಯ ರಥೋತ್ಸವಕ್ಕೆ ದೂರದಿಂದ ಬರುವ ಭಕ್ತರು ಬರುವ ವೇಳೆ ಮನೆಯಿಂದ ನೀರು ತಂದರೆ ಮಾತ್ರ ನೀವುಗಳು ಬೇಲೂರು ಜಾತ್ರೆಯನ್ನು ನೋಡಬಹುದು.
ಹೌದು. ಇತಿಹಾಸ ಪ್ರಸಿದ್ಧ ಪಡೆದ ವಿಷ್ಣುಸಮುದ್ರ ಕರೆ ಬಳಿಯಲ್ಲಿ ಇರುವ ಕಲ್ಯಾಣಿಗೆ ನೂತನ ಕಾಯಕಲ್ಪ ನೀಡುವ ದಿಸೆಯಲ್ಲಿ ಕಾಮಾಗಾರಿ ಕೆಲಸ ಆರಂಭವಾಗಿದ್ದು, ದಿವ್ಯ ರಥೋತ್ಸವಕ್ಕೆ ಬರುವ ಬಹುಪಾಲು ಭಕ್ತರು ಮುಡಿ ತೆಗೆಯುವದು ಮತ್ತು ಸ್ನಾನ ಮಾಡುವುದು. ನಾನಾ ಕಾರ್ಯಗಳಿಗೆ ಈ ಭಾರೀ ಜಾತ್ರೆ ಮಹೋತ್ಸವದಲ್ಲಿ ಕಲ್ಯಾಣಿಯಲ್ಲಿ ನೀರನ್ನು ಖಾಲಿ ಸದ್ಯ ಕಾಮಗಾರಿ ಆರಂಭ ಮಾಡಿದ್ದು, ಭಕ್ತ ಆಕ್ರೋಶಕ್ಕೆ ಕಾರಣವಾಗಿದೆ.
ಸಧ್ಯ ಜಾತ್ರೆ ಕಾರ್ಯ ಆರಂಭವಾಗಿ ವಾರ ಕಳೆದಿದ್ದು, ದಿವ್ಯ ರಥೋತ್ಸವಕ್ಕೆ ಐದು ದಿನ ಬಾಕಿ ಇದ್ದರೂ, ದೇವಾಲಯ ಸಂಬಂಧ ಪಟ್ಟ ಅಧಿಕಾರಿಗಳ ಜಾಣ ಮೌನಕ್ಕೆ ಜಾರಿದ್ದು, ಎಲ್ಲಿ ಮುಡಿ ನೀಡುವ ಸ್ಥಳ ಮಾಡುತ್ತಾರೆ. ಸಾವಿರಾರು ಭಕ್ತರಿಗೆ ಸ್ನಾನ ಮಾಡಲು ನೀರು ಏನು ಮಾಡಬಹುದು ಎಂಬ ಗೋಜಿಗೆ ತಲೆ ಕಡೆಸಿಕೊಳ್ಳದೆ ಮೌನದಲ್ಲಿ ಇದ್ದಾರೆ. ಯುದ್ಧದ ಸಂದರ್ಭದಲ್ಲಿ ಶಸ್ತ್ರ ಅಭ್ಯಾಸ ಮಾಡಿದಂತೆ ಎಂಬ ಗಾದೆ ಮಾತಿನಂತೆ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಇಂಥ ಅವಘಡವನ್ನು ದೇವಾಲಯ ಮುಂದಾಗಿದೆ.
ಒಟ್ಟಾರೆ ದಿವ್ಯ ರಥೋತ್ಸವ ಮುನ್ನವಾದರೂ ದೇವಾಲಯ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ತಿಳಿಸಿದರು.