ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಂಚಾರಕ್ಕೆ ಕಿರಿಕಿರಿಯಾದ ಹೆದ್ದಾರಿ ಹಂಪ್‌ಗಳು

Srinivasa Murthy VN
Updated On : 12 Apr 2014, 12:30 pm

ಬೇಲೂರು: ಬೇಲೂರು- ಹಾಸನ ಹೆದ್ದಾರಿ ಮಾರ್ಗ ಮಧ್ಯೆ ಬರುವ ಅಂಗಡಿಹಳ್ಳಿ ಸಮೀಪ ಹಾಕಿರುವ ಉಬ್ಬುಗಳು ವಾಹನಗಳಿಗೆ ತೀವ್ರ ತರಹದ ತೊಂದರೆಯಾಗಿದ್ದು, ಹಲವು ಅಪಘಾತಗಳಿಗೆ ಕಾರಣವಾಗಿದೆ. ತಾಲೂಕಿನ ಮಾದೀಹಳ್ಳಿ ಹೋಬಳಿ ಅಂಗಡಿಹಳ್ಳಿ ತಾಲೂಕು ಕೇಂದ್ರದಿಂದ 17 ಕೀಮೀ ಅಂತರದಲ್ಲಿ ಇದೆ. ಈ ಗ್ರಾಮದಲ್ಲಿ ಹಕ್ಕಿಪಿಕ್ಕಿ ಜನಾಂಗ ಹೆಚ್ಚಾಗಿ ವಾಸವಿದ್ದು, ಹೆದ್ದಾರಿ ಎರಡು ಭಾಗದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅದರೆ ಗ್ರಾಮದ ಮಧ್ಯೆ ಮಾರ್ಗವಾಗಿ ಹಾಯ್ದ ಹೋಗಿರುವ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ರಸ್ತೆ ಉತ್ತಮವಾಗಿದೆ ಎಂದು ಅತಿ ವೇಗದಲ್ಲಿ ಚಲಿಸುತ್ತಾರೆ.
ಪ್ರಯಾಣಿಕರ ಅಳಲು: ವೇಗದಿಂದ ಚಲಿಸುವ ವಾಹನಗಳಿಂದ ಹಲವು  ಹತ್ತು ಅಪಘಾತಗಳಿಗೆ ಕಾರಣವಾಗಿದೆ. ಈ ದಿಸೆಯಲ್ಲಿ ಗ್ರಾಮದ ಹೆದ್ದಾರಿ ಎರಡು ತುದಿಯಲ್ಲಿ ಹಂಪ್ ಹಾಕಿದ್ದು, ವಾಹನ ಚಾಲಕರು ಕಿರಿಕಿರಿ ಅನುಭವಿಸುವ ಸ್ಥಿತಿ ಎದುರಾಗಿದೆ ಎಂದು ಬಹುತೇಕ ವಾಹನಗಳ ಚಾಲಕರ 'ಕನ್ನಡಪ್ರಭ'ದೊಂದಿಗೆ ತಮ್ಮ ಅಳಲು ತೋಡಿಕೊಂಡರು. ಈ ದಿಸೆಯಲ್ಲಿ ಹೆದ್ಧಾರಿ ಹಾಕಿರುವ ಹಂಪ್ ಅವೈಜ್ಞಾನಿಕದಿಂದ ಕೂಡಿದ್ದು, ಕೂಡಲೇ  ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಇಲ್ಲವಾದರೆ  ತಾಲೂಕಿನ ನಾನಾ ಪ್ರಗತಿ ಪರಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement