ಚನ್ನಕೇಶವಸ್ವಾಮಿ ಅದ್ಧೂರಿ ರಥೋತ್ಸವ
ಬೇಲೂರು: ವಿಶ್ವವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿಯ ದಿವ್ಯ ರಥೋತ್ಸವ ಸಾವಿರಾರು ಭಕ್ತರ ನಡುವೆ ಶನಿವಾರ ವಿಜೃಭಣೆಯಿಂದ ನಡೆಯಿತು.
ಸೂರ್ಯೋದಯಾದಿ 11 ಗಂಟೆ ಮಿಥುನ ಲಗ್ನ ಶುಭಾಂಶದಲ್ಲಿ ಚೆಲುವ ಚೆನ್ನಿಗರಾಯನ ದಿವ್ಯ ರಥವನ್ನು ಅಧ್ಧೂರಿಯಾಗಿ ಭಕ್ತರ ವೇದಘೋಷಗಳ ನಡುವೆ ಎಳೆಯಲಾಯಿತು.
ಐತಿಹಾಸಿಕ ಪ್ರಸಿದ್ಧ ಬೇಲೂರು ಶ್ರೀಚನ್ನಕೇಶವಸ್ವಾಮಿ ದಿವ್ಯ ರಥೋತ್ಸವ ಕಾರ್ಯ ಬೆಳಗ್ಗೆಯಿಂದ ಆರಂಭವಾದ ನಾನಾ ರೀತಿಯ ಪೂಜೆಗಳು ರಥಕ್ಕೆ ಬಲಿ ಆನೇಕ ಪೂಜಾ ಕಾರ್ಯ ಮುಗಿಸಿದ ನಂತರದಲ್ಲಿ ದಿವ್ಯ ರಥದ ಮೇಲೆ ಚಲುವ ಚೆನ್ನಿಗನ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ಮುಸ್ಲಿಂ ಗುರುಗಳಿಂದ ಕುರಾನ್ ಪಠನ ಮತ್ತು ಭಗವದ್ಗಿತೆ ಪಠಣವಾದ ಮೇಲೆ ರಥದ ಮುಂಭಾಗದ ಬಾಳೆಕಂಬವನ್ನು ಕಡಿದ ಕೂಡಲೇ ರಥಕ್ಕೆ ಚಾಲನೆ ನೀಡಿ ದೇವಾಲಯದ ಮುಭಾಗದಿಂದ ಬಲಭಾಗಕ್ಕೆ ಸಾವಿರಾರು ಭಕ್ತರು ರಥವನ್ನು ಎಳೆಯುವ ಮೂಲಕ ಧನ್ಯಪರವಶರಾದರು.
ಮಂಗಳವಾಧ್ಯ, ವೇದಘೋಷದ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರದಲ್ಲಿ ಸ್ವಾಮಿಯವರ ರಥವನ್ನು ದೇವಾಲಯದ ಚಾವಡಿ ಮಂಟಪದ ಬಳಿ ನಿಲ್ಲಿಸಲಾಗುತ್ತದೆ. ಇದು, ಚೆಲುವ ಚೆನ್ನಿಗರಾಯನು ಭಸ್ಮಾಸುರನನ್ನು ಮೋಹಿನಿ ಅವತಾರದಲ್ಲಿ ಭಸ್ಮ ಮಾಡಿರುವ ಸ್ಥಳ ಎಂಬುದು ನಂಬಿಕೆಯಾಗಿದ್ದು ರಥವನ್ನು ಈ ಜಾಗದಲ್ಲಿ ತಂದು ನಿಲ್ಲಿಸಲಾಗುತ್ತದೆ.