ದೇವೇಗೌಡರಿಗೆ ಮತಯಾಚಿಸಿದ ಎಚ್‌ಕೆಕೆ
ಆಲೂರು: ಸರ್ವಧರ್ಮದ ಜನರ ಅಭಿವೃದ್ಧಿಗೆ ಹಗಲಿರುಳೆನ್ನದೆ ಶ್ರಮಿಸುತ್ತಿರುವ ಮಾಜಿಪ್ರಧಾನಿ ದೇವೇಗೌಡರಿಗೆ ತಮ್ಮ ಅಮೂಲ್ಯವಾದ ಮತ ನೀಡಬೇಕೆಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಕ್ರೈಸ್ತಬಾಂಧವರಲ್ಲಿ ಮನವಿ ಮಾಡಿದರು.
ಪಟ್ಟಣದ ಬಿಲಿವರ್ಸ್ ಚರ್ಚ್‌ಗೆ ಶನಿವಾರ ಭೇಟಿ ನೀಡಿ ಜೆಡಿಎಸ್ ಅಭ್ಯರ್ಥಿ ಪರವಗಿ ಮತಯಾಚನೆ ಮಾಡಿದ ಅವರು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಪಕ್ಷಗಳು ಕೋಮುವಾದಿ ಪಕ್ಷಗಳಾಗಿದ್ದು, ಈ ಪಕ್ಷಗಳು ಆಡಳಿತದಲಿದ್ದ ಸಂದರ್ಭಗಳಲ್ಲಿ ಕೋಮು ಗಲಭೆಗಳು, ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತ ಬಂದಿವೆ. ದೇವೇಗೌಡರು ಪ್ರಧಾನಿಯಾಗಿದ್ದ ಸಮಯದಲ್ಲಿ ಒಂದೇ ಒಂದು ಕೋಮು ಗಲಭೆಗಳಾಗಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗಲಿ ನಡೆದ ಉದಾಹರಣೆಗಳಿಲ್ಲ. ಅಲ್ಲದೆ ದೇವೇಗೌಡರು ಅಲ್ಪಸಂಖ್ಯಾತರ ಅಭಿವೃದ್ದಿಗೆ ಹಲವರು ಯೋಜನೆಗಳನ್ನು ಕೈಗೋಡಿದ್ದಾರೆ. ದೇಶಾದ್ಯಂತ ಕೋಮುವಾದಿ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧದ ಅಲೆ ವ್ಯಕ್ತವಾಗುತ್ತಿದ್ದು, ತೃತೀಯ ರಂಗ ಆಡಳಿತಕ್ಕೆ ಬರುವ ಸಾಧ್ಯತೆಗಳಿದ್ದು ತಾವುಗಳು ದೇವೇಗೌಡರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.